ಕರಾವಳಿ

ಕಚ್ಚಾ ತೈಲ-ಗ್ಯಾಸ್ ಬಿಕ್ಕಟ್ಟು: ಅಗತ್ಯ ಸರಕುಗಳ ಕಾಯ್ದೆ ಸೆಕ್ಷನ್ 3 ಜಾರಿ, ಮಾರುಕಟ್ಟೆಯಲ್ಲಿ ಆತಂಕ

(ನ್ಯೂಸ್‌ ಕಡಬ) newskadaba.com, ಮಾ.21: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮ ಭಾರತದಲ್ಲೂ ಆರ್ಥಿಕ ತಲ್ಲಣ ಉಂಟಾಗಿದ್ದು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಆತಂಕದ ಹಿನ್ನೆಲೆ ಕೇಂದ್ರ ಸರ್ಕಾರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಅನ್ನು ಜಾರಿಗೊಳಿಸಿದೆ. ಸಂಘರ್ಷವು 21ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗ್ಯಾಸ್ ಅನ್ನು ಅಗತ್ಯ ಸರಕುಗಳ ಪಟ್ಟಿಗೆ ಸೇರಿಸಿದ್ದ […]

ಕಚ್ಚಾ ತೈಲ-ಗ್ಯಾಸ್ ಬಿಕ್ಕಟ್ಟು: ಅಗತ್ಯ ಸರಕುಗಳ ಕಾಯ್ದೆ ಸೆಕ್ಷನ್ 3 ಜಾರಿ, ಮಾರುಕಟ್ಟೆಯಲ್ಲಿ ಆತಂಕ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಕೌಟುಂಬಿಕ ಕಲಹಕ್ಕೆ ಪತ್ನಿ ಬಲಿ; ಪತಿ ಆತ್ಮಹತ್ಯೆಗೆ ಯತ್ನ

(ನ್ಯೂಸ್‌ ಕಡಬ) newskadaba.com, ಮಾ.21: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆಗೈದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲ ಎಂಬಲ್ಲಿ ಶುಕ್ರವಾರ ನಡೆದಿದೆ. ಮೃತ ಮಹಿಳೆಯನ್ನು ಕುಮಾರಮಂಗಲ ಮೂಲದ ಸಾವಿತ್ರಿ (42) ಎಂದು ಗುರುತಿಸಲಾಗಿದೆ. ಆರೋಪಿ ಪತಿಯನ್ನು ಎಮೆಟ್ಟಿ ನಿವಾಸಿ ಪುರುಷೋತ್ತಮ ಅಲಿಯಾಸ್ ಬೈರಪ್ಪ ಎಂದು ಗುರುತಿಸಲಾಗಿದೆ.ದಂಪತಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ಪುರುಷೋತ್ತಮ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ

ಪುತ್ತೂರು: ಕೌಟುಂಬಿಕ ಕಲಹಕ್ಕೆ ಪತ್ನಿ ಬಲಿ; ಪತಿ ಆತ್ಮಹತ್ಯೆಗೆ ಯತ್ನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com, ಮಾ.21: ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.   ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ..

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಗ್ಯಾಸ್ ಅಕ್ರಮ ಮರುಪೂರಣ – ಇಬ್ಬರು ಆರೋಪಿಗಳ ಆರೆಸ್ಟ್

(ನ್ಯೂಸ್‌ ಕಡಬ) newskadaba.com,ಮಾ.19: ನಗರದ ಕುದ್ರೋಳಿ ಕಂಡತ್‌ಪಳ್ಳಿ ಎಂಬಲ್ಲಿ ಗ್ಯಾಸ್ ಹಂಡೆಯಿಂದ ಇನ್ನೊಂದು ಗ್ಯಾಸ್ ಹಂಡೆಗೆ ಅಕ್ರಮವಾಗಿ ಗ್ಯಾಸ್ ಮರುಪೂರಣ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ದಿನೇಶ್ ಸಾಲಿಯಾನ್ ಮತ್ತು ಸುನೀಲ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಾ.17ರಂದು ಮಧ್ಯಾಹ್ನ 1:30ಕ್ಕೆ ನಗರದ ನ್ಯೂಚಿತ್ರಾ ಜಂಕ್ಷನ್ ಬಸವನಗುಡಿ ಲಕ್ಷ್ಮೀನಾರಾಯಣ ಟೆಂಪಲ್ ಕಡೆಯಿಂದ ಕಂಡತ್‌ಪಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಗ್ಯಾಸ್ ಪಾಯಿಂಟ್ ವೊಂದರ ಪಕ್ಕದಲ್ಲಿರುವ ಗೋದಾಮಿನಲ್ಲಿ ಈ ಇಬ್ಬರು ಆರೋಪಿಗಳು ಅಕ್ರಮವಾಗಿ ಗ್ಯಾಸ್ ಸಿಲೆಂಡರ್‌ಗಳನ್ನು ಸಂಗ್ರಹಿಸಿ

ಮಂಗಳೂರು : ಗ್ಯಾಸ್ ಅಕ್ರಮ ಮರುಪೂರಣ – ಇಬ್ಬರು ಆರೋಪಿಗಳ ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಮಕುಂಜದಲ್ಲಿ ಔಷಧಿ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತ್ಯು

(ನ್ಯೂಸ್‌ ಕಡಬ) newskadaba.com,ಮಾ.19 ಪುತ್ತೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿ ಸೇವಿಸಿದ ಬಾಲಕನೋರ್ವ ಅಸ್ವಸ್ಥಗೊಂಡು ಮೃತಪಟ್ಟ ದಾರುಣ ಘಟನೆ ರಾಮಕುಂಜದಲ್ಲಿ ಬುಧವಾರ (ಮಾ. 18) ಸಂಭವಿಸಿದೆ. ರಾಮಕುಂಜ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ, 4ನೇ ತರಗತಿ ವಿದ್ಯಾರ್ಥಿ ‘’ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಬಾಲಕನಿಗೆ ಮನೆಯಲ್ಲಿ ಔಷಧಿ ನೀಡಲಾಗಿತ್ತು. ಆದರೆ, ಔಷಧಿ ಸೇವಿಸಿದ ಕೆಲವೇ ಸಮಯದ ನಂತರ ಬಾಲಕ ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ ಎನ್ನಲಾಗಿದೆ. ಬಾಲಕ ಅಸ್ವಸ್ಥಗೊಳ್ಳುತ್ತಿದ್ದಂತೆ ಗಾಬರಿಗೊಂಡ ಪೋಷಕರು ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಮಕುಂಜದಲ್ಲಿ ಔಷಧಿ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಜೋಮ್ಸ್ ಅಕಾಡೆಮಿಯಲ್ಲಿ 2026ನೇ ಸಾಲಿನ CET/NEET ಪ್ರವೇಶಾತಿ ಆರಂಭ

(ನ್ಯೂಸ್‌ ಕಡಬ) newskadaba.com,ಮಾ.19: . ಕಡಬ ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಸೈಂಟ್ ಜೋಕಿಮ್ಸ್  ಕಾಲೇಜು ಮುಂಭಾಗದ ಪಿಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಜೋಮ್ಸ್ ಅಕಾಡೆಮಿ’ ಸಂಸ್ಥೆಯಲ್ಲಿ ಅಲ್ಪಾವಧಿಯ ವೇಗವರ್ಧಿತ ಕೋರ್ಸ್ (Crash Course) ಮತ್ತು 2026ನೇ ಸಾಲಿನ CET/ NEET ಕೋಚಿಂಗ್ ಪ್ರವೇಶಾತಿ ಆರಂಭಗೊಂಡಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಬೆಂಗಳೂರು ಮತ್ತು ಮೈಸೂರಿನ 21ಕ್ಕೂ ಹೆಚ್ಚು ವರ್ಷಗಳ ಅನುಭವಿ ಪರಿಣಿತರಿಂದ ತರಬೇತಿ ನೀಡಲಾಗುವುದು. CET ಕೋರ್ಸ್‌ ಗಳು ಮಾರ್ಚ್ 23ರಿಂದ ಎಪ್ರಿಲ್ 22ರ ವರೆಗೆ, NEET

ಕಡಬ: ಜೋಮ್ಸ್ ಅಕಾಡೆಮಿಯಲ್ಲಿ 2026ನೇ ಸಾಲಿನ CET/NEET ಪ್ರವೇಶಾತಿ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ವಿಶೇಷ ಲೇಖನಗಳು

ಹಬ್ಬದ ದಿನವೇ ಬಾರದ ಲೋಕಕ್ಕೆ ಪಯಣ ಬೈಕ್-ಟಿಪ್ಪರ್ ನಡುವೆ ಅಪಘಾತ, ಸ್ಥಳದಲ್ಲೇ ದಂಪತಿ ಮೃತ್ಯು

(ನ್ಯೂಸ್‌ ಕಡಬ) newskadaba.com,ಮಾ.19 ಯುಗಾದಿ ಹಬ್ಬದಂದೇ ಬೀದರ್‌ನಲ್ಲಿ  ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಮೃತ ದಂಪತಿಗಳನ್ನು ಬಸವಕಲ್ಯಾಣ ನಗರದ ಖಡಿ ಝಂಡಾ ಕಾಲೋನಿಯ ನಿವಾಸಿ ಸೈಯದ್ ದಸ್ತಗೀರ್ (35) ಮತ್ತು ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಎಂದು ಗುರುತಿಸಲಾಗಿದೆ. ತ್ರಿಪುರಾಂತ ಬಳಿಯ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದ ಮೃತರು, ಬೈಕ್​ನಲ್ಲಿ ಬಸ್ ನಿಲ್ದಾಣ ಕಡೆಯಿಂದ ಖಡಿ ಝಂಡಾ

ಹಬ್ಬದ ದಿನವೇ ಬಾರದ ಲೋಕಕ್ಕೆ ಪಯಣ ಬೈಕ್-ಟಿಪ್ಪರ್ ನಡುವೆ ಅಪಘಾತ, ಸ್ಥಳದಲ್ಲೇ ದಂಪತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಪಂಚಾಯತ್ ಎದುರಿನ ವಿದ್ಯುತ್ ಲೈಟ್ ಕಿತ್ತುಹಾಕಿದ ಪಿಡಿಒ – ದೇವಸ್ಥಾನದ ಸಮಿತಿಯಿಂದ ತೀವ್ರ ವಿರೋಧ.

(ನ್ಯೂಸ್‌ ಕಡಬ) newskadaba.com,ಮಾ.19 ಉಪ್ಪಿನಂಗಡಿ: ಕ್ಷೇತ್ರದ ಶಾಸಕರ ನಿರ್ದೇಶನದನ್ವಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಜಾತ್ರೋತ್ಸವದ ಹಿನ್ನೆಲೆಯಲ್ಲಿ ರಥ ಬೀದಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದರೆ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳನ್ನು ಉಪ್ಪಿನಂಗಡಿ ಗ್ರಾ.ಪಂ. ಪಂಚಾಯತ್ ಪಿಡಿಒ ತೆರವುಗೊಳಿಸಿರುವುದು ಅತೀವ ಬೇಸರ ತಂದಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌ ತಿಳಿಸಿದ್ದಾರೆ. ದೇವಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಾತನಾಡಿದ ಅವರು, ದೇವಾಲಯದ ಜಾತ್ರೋತ್ಸವಕ್ಕೆ ಊರಿನ ಎಲ್ಲಾ ಧರ್ಮಿಯರೂ

ಉಪ್ಪಿನಂಗಡಿ: ಪಂಚಾಯತ್ ಎದುರಿನ ವಿದ್ಯುತ್ ಲೈಟ್ ಕಿತ್ತುಹಾಕಿದ ಪಿಡಿಒ – ದೇವಸ್ಥಾನದ ಸಮಿತಿಯಿಂದ ತೀವ್ರ ವಿರೋಧ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೂಪಾಡಿಕಟ್ಟೆ: ಮುಂಜಾನೆ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಯಿತು ದೈತ್ಯ ಮೊಸಳೆ; ನಿವಾಸಿಗಳಲ್ಲಿ ಆತಂಕ

(ನ್ಯೂಸ್‌ ಕಡಬ) newskadaba.com,ಮಾ.19 ಬಂಟ್ವಾಳ:  ನೇತ್ರಾವತಿ ನದಿ ತೀರದ ನಿವಾಸಿಯೊಬ್ಬರ ಮನೆಯ ಅಂಗಳಕ್ಕೆ ಸುಮಾರು 7 ಅಡಿ ಉದ್ದದ ಬೃಹತ್ ಮೊಸಳೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.ಬಂಟ್ವಾಳದ ಪೂಪಾಡಿಕಟ್ಟೆ ನೆಕ್ಕಿಲಾರು ನಿವಾಸಿ ರಾಜೇಶ್ ನಾಯಕ್ ಎಂಬುವವರ ಮನೆಯ ಅಂಗಳಕ್ಕೆ ಈ ಮೊಸಳೆ ಬಂದಿದೆ. ಇವರ ಮನೆ ನೇತ್ರಾವತಿ ನದಿಯಿಂದ ಸುಮಾರು 200 ಮೀಟರ್ ದೂರದಲ್ಲಿದೆ. ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮನೆಯ ಹೊರಗೆ ಅಸಾಮಾನ್ಯ ಶಬ್ದ ಕೇಳಿಬಂದಿದೆ.ಶಬ್ದ ಕೇಳಿ ಮನೆಯವರು ಹೊರಬಂದು

ಪೂಪಾಡಿಕಟ್ಟೆ: ಮುಂಜಾನೆ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಯಿತು ದೈತ್ಯ ಮೊಸಳೆ; ನಿವಾಸಿಗಳಲ್ಲಿ ಆತಂಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೋಳಗಳ ಸಂತತಿ ವೃದ್ಧಿ: ಪಿಲಿಕುಳ ಉದ್ಯಾನವನಕ್ಕೆ ಏಳು ಹೊಸ ಅತಿಥಿಗಳ ಆಗಮನ

(ನ್ಯೂಸ್‌ ಕಡಬ) newskadaba.com,ಮಾ.19 :  ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ‘ಗೀತಾ’ ಎಂಬ ಭಾರತೀಯ ತೋಳವು ಏಳು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಲ್ಲಿ ನಾಲ್ಕು ಗಂಡು ಹಾಗೂ ಮೂರು ಹೆಣ್ಣು ತೋಳಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಭಾರತೀಯ ತೋಳಗಳನ್ನು ಉದ್ಯಾನವನದಲ್ಲಿ ಇರಿಸಲಾಗಿದ್ದು, ಈ ಸೌಲಭ್ಯದಲ್ಲಿ ಈ ಜಾತಿಯ ಮೊದಲ ಯಶಸ್ವಿ ಸಂತಾನೋತ್ಪತ್ತಿ ಇದಾಗಿದೆ. ಅಧಿಕಾರಿಗಳು ಇದನ್ನು ಉದ್ಯಾನವನದ ಸೆರೆಯಲ್ಲಿರುವ ಸಂತಾನೋತ್ಪತ್ತಿ ಮತ್ತು ಸಂರಕ್ಷಣಾ ಉಪಕ್ರಮಗಳಲ್ಲಿ ಪ್ರಮುಖ ಮೈಲಿಗಲ್ಲು ಎಂದು ಕರೆದಿದ್ದಾರೆ. ತಾಯಿ

ತೋಳಗಳ ಸಂತತಿ ವೃದ್ಧಿ: ಪಿಲಿಕುಳ ಉದ್ಯಾನವನಕ್ಕೆ ಏಳು ಹೊಸ ಅತಿಥಿಗಳ ಆಗಮನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top