ಕರಾವಳಿ

114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್‌ ಬಳಕೆ ಪೂರ್ಣ ಬ್ಯಾನ್‌ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಮಾ.23:  ಮೊಬೈಲ್‌ ಫೋನ್‌ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಪಾಠದ ಮೇಲಿನ ಗಮನ ಕುಂಠಿತ ಹಾಗೂ ಸೈಬರ್‌ ಬುಲ್ಲಿಂಗ್‌ನಂತಹ ಸಮಸ್ಯೆಗಳು ಕಳವಳ ಹುಟ್ಟಿಸುತ್ತಿರುವ ನಡುವೆಯೇ, ಜಗತ್ತಿನ ಶೇ.58ರಷ್ಟು ದೇಶಗಳು ಶಾಲೆಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನು ನಿಷೇಧಿಸಿವೆ ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ನಿಗಾ ಸಮಿತಿಯ ವರದಿ ತಿಳಿಸಿದೆ.‘ವಿಶ್ವದ 114 ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳ ಮೇಲೆ ನಿಷೇಧ ಹೇರಿವೆ. ಇದು ಪ್ರಪಂಚದಾದ್ಯಂತ ಶೇ.58ರಷ್ಟು ದೇಶಗಳನ್ನು ಪ್ರತಿನಿಧಿಸುತ್ತದೆ. 2 023ರ ಜೂನ್‌ನಲ್ಲಿ 4 ದೇಶಗಳಲ್ಲಿ 1ಕ್ಕಿಂತ ಕಡಿಮೆ […]

114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್‌ ಬಳಕೆ ಪೂರ್ಣ ಬ್ಯಾನ್‌ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಇರಾನ್-ಇಸ್ರೇಲ್ ಸಂಘರ್ಷ, ಎಲ್‌ಪಿಜಿ ಅಭಾವ; ಮೀನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ

(ನ್ಯೂಸ್‌ ಕಡಬ) newskadaba.com,  ಮಾ.23: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವು ಕರ್ನಾಟಕದ ಕರಾವಳಿ ಭಾಗದ ಮೀನುಗಾರರ ಮೇಲೆ ತೀವ್ರ ಪರಿಣಾಮ ಬೀರಿದೆ. ಹೋಟೆಲ್ ಬಂದ್ ಮತ್ತು ರಫ್ತು ಸ್ಥಗಿತದಿಂದಾಗಿ ಮೀನಿನ ದರ ಕುಸಿದಿದ್ದು, ಮೀನುಗಾರಿಕೆ ಉದ್ಯಮವು ಸಂಕಷ್ಟದಲ್ಲಿ ಸಿಲುಕಿದೆ.ಏಷ್ಯಾದ ಅತಿದೊಡ್ಡ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆಯಲ್ಲಿ ಮೀನುಗಾರಿಕೆ ಉದ್ಯಮವು ತೀವ್ರ ಸಂಕಷ್ಟ ಎದುರಿಸುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಮೀನು ರಫ್ತು ಸ್ಥಗಿತಗೊಂಡಿರುವುದು ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳು ಮುಚ್ಚಿರುವುದು ಮೀನಿನ ಬೆಲೆ ದಿಢೀರ್

ಉಡುಪಿ: ಇರಾನ್-ಇಸ್ರೇಲ್ ಸಂಘರ್ಷ, ಎಲ್‌ಪಿಜಿ ಅಭಾವ; ಮೀನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಲಿದೆ ಎಲ್‌ಪಿಜಿ ಪೂರೈಕೆ

(ನ್ಯೂಸ್‌ ಕಡಬ) newskadaba.com,  ಮಾ.23: ಕಳೆದ 12 ದಿನಗಳಿಂದ ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಕಂಗೆಟ್ಟಿದ್ದ ರಾಜ್ಯದ ಹೋಟೆಲ್ ಉದ್ಯಮಕ್ಕೆ ಕೊನೆಗೂ ಬಿಡುವು ಸಿಕ್ಕಿದೆ. ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಿನ ಪ್ರಮಾಣದ ಅನಿಲ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಪೆಟ್ರೋಲಿಯಂ ಇಲಾಖೆಯ ಸೂಚನೆಯಂತೆ, ಯುದ್ಧಪೂರ್ವದಲ್ಲಿದ್ದ ಸ್ಥಿತಿಗೆ ಅಂದರೆ ಶೇ. 50ರಷ್ಟು ಸಿಲಿಂಡರ್ ಪೂರೈಕೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಕೇವಲ ಕರ್ನಾಟಕಕ್ಕೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿತ್ತು. ಅಲ್ಲದೆ, ಹೈಕೋರ್ಟ್

ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಲಿದೆ ಎಲ್‌ಪಿಜಿ ಪೂರೈಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂಡುಬಿದಿರೆ: ಅಪಘಾತಕ್ಕೀಡಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತ್ಯು

(ನ್ಯೂಸ್‌ ಕಡಬ) newskadaba.com,  ಮಾ.23: ಕಳೆದ 2025ರ ಅಕ್ಟೋಬರ್‌ನಲ್ಲಿ ಕಾರ್ಕಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ನಿವಾಸಿಗಳಾದ ಶ್ಯಾಮ್ ಅಂಚನ್ ಮತ್ತು ಜಯಂತಿ ಕುಲಾಲ್ ದಂಪತಿಯ ಪುತ್ರ ಸಾತ್ವಿಕ್ ಕುಲಾಲ್ (21) ಮೃತ ದುರ್ದೈವಿ. ಸಾತ್ವಿಕ್ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಅಕ್ಟೋಬರ್‌ನಲ್ಲಿ ನಡೆದ ದ್ವಿಚಕ್ರ ವಾಹನ ಅಪಘಾತದ ನಂತರ, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮೂಡುಬಿದಿರೆ: ಅಪಘಾತಕ್ಕೀಡಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಮಾ.23: ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ಇದರ ನಡುವೆಯೂ ಅಲ್ಲಲ್ಲಿ ಹಗುರ ಮಳೆಯಾಗುತ್ತಿದೆ. ಇಂದು ಸಹ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣ ಇರಲಿದ್ದು, ಸಂಜೆಯ ವೇಳೆಗೆ ಹಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಬೆಂಗಳೂರಿನ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡಿಜಿಟಲ್ ಅರೆಸ್ಟ್ ತಡೆಗೆ ಬಿಗಿ ಕ್ರಮ

(ನ್ಯೂಸ್‌ ಕಡಬ) newskadaba.com, ಮಾ.21 ವಂಚನೆಗೆ ಬಳಸಲಾಗುತ್ತಿರುವ ಮೊಬೈಲ್ ಡಿವೈಸ್ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ. ವಂಚನೆ ನಡೆಸುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣವೇ, ಅವರು ಬಳಸುವ ಮೊಬೈಲ್‌ಗಳ ಡಿವೈಸ್ ಐಡಿಗಳನ್ನು ಬ್ಲಾಕ್ ಮಾಡಬೇಕು. ಇದರಿಂದ ವಂಚಕರು ಅದೇ ಫೋನ್ ಬಳಸಿ ಹೊಸ ಖಾತೆ ತೆರೆಯುವುದನ್ನು ತಡೆಯಬಹುದು. ಇದಲ್ಲದೆ, ಐಟಿ ನಿಯಮಗಳ ಪ್ರಕಾರ ಡಿಲೀಟ್ ಆಗಿರುವ ಖಾತೆಗಳ ಮಾಹಿತಿಯನ್ನು ಕನಿಷ್ಠ 180 ದಿನಗಳವರೆಗೆ ಸಂಗ್ರಹಿಸಿಡುವುದು ಕಡ್ಡಾಯವಾಗಲಿದೆ. ಇದರಿಂದ ತನಿಖಾ ಸಂಸ್ಥೆಗಳಿಗೆ ಅಗತ್ಯ ಪುರಾವೆಗಳನ್ನು ಸಂಗ್ರಹಿಸಲು

ಡಿಜಿಟಲ್ ಅರೆಸ್ಟ್ ತಡೆಗೆ ಬಿಗಿ ಕ್ರಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೆವಿಜಿ : ಇಂಜಿನಿಯರಿಂಗ್‌ ಕಲಿಕೆಗೆ ವಿದ್ಯಾರ್ಥಿವೇತನ

(ನ್ಯೂಸ್‌ ಕಡಬ) newskadaba.com, ಮಾ.21 2026-27ನೇ ಶೈಕ್ಷಣಿಕ ವರ್ಷದಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಸೇರ್ಪಡೆಯಾಗುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಲಿಕೆಗೆ ವಿದ್ಯಾರ್ಥಿವೇತನ ನೀಡಲಾಗುವುದು ಮತ್ತು ಇದಕ್ಕಾಗಿ ಆನ್‌ಲೈನ್ ಮೂಲಕ ಕೆ.ವಿ.ಜಿ. ಸ್ಕಾಲರ್ಶಿಪ್ ಪರೀಕ್ಷೆಯನ್ನು ಮಾ.25ರಿಂದ ಪ್ರಾರಂಭಿಸಲಾಗುವುದು ಎಂದು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಕಮಿಟಿ ಬಿ ಇದರ ಚೇರ್ಮನ್ ಡಾ. ರೇಣುಕಾಪ್ರಸಾದ್ ಕೆ.ವಿ. ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ವಿದ್ಯಾರ್ಥಿವೇತನಕ್ಕೆ ಆಯ್ಕೆಮಾಡುವ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ನಡೆಸಲಾಗುವ ಕೆ.ವಿ.ಜಿ. ಸ್ಕಾಲರ್ಶಿಪ್

ಕೆವಿಜಿ : ಇಂಜಿನಿಯರಿಂಗ್‌ ಕಲಿಕೆಗೆ ವಿದ್ಯಾರ್ಥಿವೇತನ Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ : ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ – ಒಬ್ಬ ಮೃತ್ಯು

(ನ್ಯೂಸ್‌ ಕಡಬ) newskadaba.com, ಮಾ.21 ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನವೊಂದು ಪಲ್ಟಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನ ಒಂಬತ್ತನೇ ತಿರುವಿನಲ್ಲಿ ಬ್ರೇಕ್ ಫೈಲ್ ಆಗಿ ಟಿಟಿ ವಾಹನ ಪಲ್ಟಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೇಲನಹಳ್ಳಿಯಿಂದ 10 ಮಂದಿ ಸೇರಿದಂತೆ ಮೂವರು ಮಕ್ಕಳು ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಟಿಟಿ ವಾಹನಲ್ಲಿ ಒಂದೇ ಕುಟುಂಬದ 13 ಮಂದಿಯಲ್ಲಿ 9 ಮಂದಿಗೆ

ಬೆಳ್ತಂಗಡಿ : ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ – ಒಬ್ಬ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂಧನ ಉಳಿತಾಯಕ್ಕೆ ಐಇಎ ಕಠಿಣ ಶಿಫಾರಸು: ಮತ್ತೆ ಕೋವಿಡ್ ನಿಯಮ ಜಾರಿ ಸಾಧ್ಯತೆ?

(ನ್ಯೂಸ್‌ ಕಡಬ) newskadaba.com, ಮಾ.21 : ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿಯಿಂದ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಇಂಧನ ಮತ್ತು ಗ್ಯಾಸ್ ಬಳಕೆಯನ್ನು ತಕ್ಷಣವೇ ಕಡಿತಗೊಳಿಸುವಂತೆ ಸೂಚಿಸಿದೆ… ಪೆಟ್ರೋಲ್ ಮತ್ತು ಡೀಸೆಲ್ ಉಳಿಸಲು ಉದ್ಯೋಗಿಗಳಿಗೆ ‘ಮನೆಯಿಂದಲೇ ಕೆಲಸ’ಮಾಡಲು ಉತ್ತೇಜಿಸುವಂತೆ ಸಂಸ್ಥೆ ಸಲಹೆ ನೀಡಿದೆ. ಇದು ಕೋವಿಡ್ ಕಾಲದ ಲಾಕ್‌ಡೌನ್ ನಿಯಮಗಳನ್ನು ನೆನಪಿಸುತ್ತಿದ್ದು, ಸಾರಿಗೆ ವೆಚ್ಚ ತಗ್ಗಿಸಲು

ಇಂಧನ ಉಳಿತಾಯಕ್ಕೆ ಐಇಎ ಕಠಿಣ ಶಿಫಾರಸು: ಮತ್ತೆ ಕೋವಿಡ್ ನಿಯಮ ಜಾರಿ ಸಾಧ್ಯತೆ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ ಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

(ನ್ಯೂಸ್‌ ಕಡಬ) newskadaba.com, ಮಾ.21 : ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ, ಕಡಬ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 16 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬೈರಮೂಲೆ ಸುಬ್ಬಪ್ಪ ಪಾಟಾಳಿ ಮತ್ತು ವೇದಾವತಿ ಎ ದಂಪತಿಗಳ ಪುತ್ರ  ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ ಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top