ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ 7ನೇ Rank ಪಡೆದು ನೆಟ್ಟಣದ ಕೀರ್ತಿ ಹೆಚ್ಚಿಸಿದ ಸ್ವಾತಿ ಎಂ.ಸಿ

(ನ್ಯೂಸ್‌ ಕಡಬ) newskadaba.com  ,ಎ10  ​ಸುಬ್ರಹ್ಮಣ್ಯ: ಇತ್ತೀಚೆಗೆ ಪ್ರಕಟಗೊಂಡ 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ಎಂ.ಸಿ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸ್ವಾತಿ ಅವರು ಒಟ್ಟು 600 ಅಂಕಗಳಿಗೆ 593 ಅಂಕಗಳನ್ನು ಪಡೆಯುವ ಮೂಲಕ ಶೇ. 98.83 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ವಿಶೇಷವೆಂದರೆ ಇವರು ಐದು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

​ಸಂಸ್ಕೃತ: 100

​ಅರ್ಥಶಾಸ್ತ್ರ: 100

​ಬ್ಯುಸಿನೆಸ್ ಸ್ಟಡೀಸ್: 100

​ಅಕೌಂಟೆನ್ಸಿ: 100

​ಸ್ಟ್ಯಾಟಿಸ್ಟಿಕ್ಸ್: 100

​ಇಂಗ್ಲಿಷ್: 93

​

ಕಡಬ ತಾಲೂಕಿನ ನೆಟ್ಟಣಬೈಲು, ಐತ್ತೂರು ಗ್ರಾಮದ ನಿವಾಸಿಯಾದ ಇವರು ಶ್ರೀಮತಿ ಚಿತ್ರಾ ಮತ್ತು ಶ್ರೀ ಚಿನ್ನಪ್ಪ ಗೌಡ ದಂಪತಿಯ ಪುತ್ರಿ. ಗ್ರಾಮೀಣ ಭಾಗದ ಪ್ರತಿಭೆಯಾದ ಸ್ವಾತಿ ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

​ಗ್ರಾಮೀಣ ಭಾಗದ ಶಾಲೆಯಲ್ಲಿ ಓದಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಸ್ವಾತಿ ಅವರು ಜಿಲ್ಲೆಗೆ ಹಾಗೂ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಇವರ ಮುಂದಿನ ಉಜ್ವಲ ಭವಿಷ್ಯಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ

Scroll to Top