ಕರಾವಳಿ

ಪಿಯು ಬೋರ್ಡ್ ಐತಿಹಾಸಿಕ ಎಡವಟ್ಟು; ಹಿಂದಿ ವಿಷಯಕ್ಕೆ 100ಕ್ಕೆ 111 ಅಂಕ! ಶಿಕ್ಷಣ ಸಚಿವರೇ ಇದಕ್ಕೆ ಯಾರು ಹೊಣೆ?

(ನ್ಯೂಸ್‌ ಕಡಬ) newskadaba.com  ,ಎ10 : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿ ಮಾಡಿರುವ ಎಡವಟ್ಟು ಈಗ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ‘ಐತಿಹಾಸಿಕ ಫಲಿತಾಂಶ’ ಎಂದು ಬೀಗುತ್ತಿದ್ದ ಶಿಕ್ಷಣ ಸಚಿವರಿಗೆ ಮಂಡಳಿಯ ಈ ಎಡವಟ್ಟಿನ ಸಾಧನೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಿಂದಿಗೆ ನೂರಕ್ಕೆ ನೂರಲ್ಲ.. ನೂರಕ್ಕೆ 111! ಸಾಮಾನ್ಯವಾಗಿ ಪರೀಕ್ಷೆ ನಡೆಯುವುದು 100 ಅಂಕಗಳಿಗೆ. ಆದರೆ ಪಿಯು ಬೋರ್ಡ್ ಮಾತ್ರ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ವಿಷಯದಲ್ಲಿ ಬರೋಬ್ಬರಿ 111 ಅಂಕಗಳನ್ನು ನೀಡಿ ನೀಡಿ ಪಾಸ್ ಮಾಡುವ […]

ಪಿಯು ಬೋರ್ಡ್ ಐತಿಹಾಸಿಕ ಎಡವಟ್ಟು; ಹಿಂದಿ ವಿಷಯಕ್ಕೆ 100ಕ್ಕೆ 111 ಅಂಕ! ಶಿಕ್ಷಣ ಸಚಿವರೇ ಇದಕ್ಕೆ ಯಾರು ಹೊಣೆ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು ಜಾತ್ರೋತ್ಸವಕ್ಕೆ ಧ್ವಜಾರೋಹಣ

(ನ್ಯೂಸ್‌ ಕಡಬ) newskadaba.com  ,ಎ10 : ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ಆರಂಭಗೊಳ್ಳುವ ವರ್ಷಾವಧಿ ಜಾತ್ರೋತ್ಸವು ದೇವಳದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ದೊರೆಯಿತು.ಬೆಳಗ್ಗೆ 9.20ರ ನಂತರದ ವೃಷಭ ಲಗ್ನದಲ್ಲಿ ಸುಮಾರು 10.38ರ ಸಮಯಕ್ಕೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ್‌ ಭಟ್‌ ಪಂಜಿಗುಡ್ಡೆ ಸಹಿತ ಸದಸ್ಯರು, ಅಪಾರ ಭಕ್ತರು ಪಾಲ್ಗೊಂಡರು.

ಪುತ್ತೂರು ಜಾತ್ರೋತ್ಸವಕ್ಕೆ ಧ್ವಜಾರೋಹಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಘು ಬಿಜೂರ್ ರವರಿಗೆ ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com  ,ಎ10: ರಘು ಬಿಜೂರ್ ರವರಿಗೆ ಏ.5 ರಂದು ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಿಂದೂಸ್ತಾನಿ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆಗಾಗಿ ಗಾನಸಿರಿ ಸಂಗೀತ ಕಲಾ ಪುತ್ತೂರು ಇವರ ವಜ್ರಮಹೋತ್ಸವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಕಲಾವಿದರನ್ನು ಗುರುತಿಸಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾಜಿ ಎಂ.ಎಲ್.ಎ, ಮಾಜಿ ಸಚಿವೆ ಶಕುಂತಲಾ ಶೆಟ್ಟಿ ಮತ್ತು ಸಂಗೀತ ವಿಧೂಷಿ ಡಾl ಅರವಿಂದ ಜಯಶ್ರೀ ಇವರ ಮೂಲಕ ನೀಡಲಾಯಿತು.

ರಘು ಬಿಜೂರ್ ರವರಿಗೆ ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೋಟದ ಬೆಂಕಿ ನಂದಿಸಲು ಹೋಗಿ ದುರಂತ ಅಂತ್ಯ: ನಿಟ್ಟೆಯ 80 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ನಿಧನ

(ನ್ಯೂಸ್‌ ಕಡಬ) newskadaba.com  ,ಎ10: ಬೆಂಕಿ ನಂದಿಸಲು ಹೋದಾಗ ಬೆಂಕಿಯಲ್ಲಿ ಸಿಲುಕಿ ತೀವ್ರ ಸುಟ್ಟ ಗಾಯಗಳಾಗಿದ್ದ ವೃದ್ಧರೊಬ್ಬರು ಗುರುವಾರ ನಿಟ್ಟೆ ಗ್ರಾಮದ ಬಜೆಕಳದಲ್ಲಿ ಮೃತಪಟ್ಟಿದ್ದಾರೆ.ಮೃತರನ್ನು ಬಜೆಕಳದ ‘ಶಿವಪೂಜ ಮನೆಯ ನಿವಾಸಿ ಜಯಕರ್ ಶೆಟ್ಟಿ (80) ಎಂದು ಗುರುತಿಸಲಾಗಿದೆ. ಘಟನೆಯ ನಂತರ, ಕಾರ್ಕಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಆ ರಾತ್ರಿ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಗುರುವಾರ ಜಯಕರ್ ಶೆಟ್ಟಿ ಅವರ

ತೋಟದ ಬೆಂಕಿ ನಂದಿಸಲು ಹೋಗಿ ದುರಂತ ಅಂತ್ಯ: ನಿಟ್ಟೆಯ 80 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಿವಮೊಗ್ಗದ ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೂವರು ಕಾರ್ಮಿಕರು ಮೃತ್ಯು

(ನ್ಯೂಸ್‌ ಕಡಬ) newskadaba.com  ,ಎ10: ಜಿಲ್ಲೆಯ ಹುಲಿಕಲ್‌ ಘಾಟ್‌ನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ಥಳದಲ್ಲಿಯೇ ಇದ್ದ ಕಾಮಗಾರಿ ಮೇಲ್ವಿಚಾರಕ ಸೇರಿ ಮೂವರು ಮೃತಪಟ್ಟಿದ್ದಾರೆ.ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಹಾಗೂ ಶಬ್ಬೀರ್(40) ಮೃತ ಕಾರ್ಮಿಕರು ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಹುಲಿಕಲ್‌ ಘಾಟ್‌ ಮುಖ್ಯ ಸಂಪರ್ಕ ಸೇತುವೆಯಾಗಿದೆ. ರಾತ್ರಿ ವೇಳೆ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ

ಶಿವಮೊಗ್ಗದ ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೂವರು ಕಾರ್ಮಿಕರು ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಿಯುಸಿ ಫಲಿತಾಂಶ ದಿನವೇ ವಿದ್ಯಾರ್ಥಿನಿ ನಿಗೂಢ ಮೃತ್ಯು,ತಾಯಿಯ ಮೇಲೇ ಶಂಕೆ

(ನ್ಯೂಸ್‌ ಕಡಬ) newskadaba.com  ,ಎ10: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ದಿನವೇ ಬೆಂಗಳೂರಿನ ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ತನುಶ್ರೀ (18) ಮೃತಪಟ್ಟ ವಿದ್ಯಾರ್ಥಿನಿ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ. ಆದರೆ, ಸಂಬಂಧಿಕರು ಮಾತ್ರ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಗುರುವಾರ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಿಯುಸಿ

ಪಿಯುಸಿ ಫಲಿತಾಂಶ ದಿನವೇ ವಿದ್ಯಾರ್ಥಿನಿ ನಿಗೂಢ ಮೃತ್ಯು,ತಾಯಿಯ ಮೇಲೇ ಶಂಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ್ವಿತೀಯ ಪಿಯುಸಿ ಫಲಿತಾಂಶ: ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ, ಉಡುಪಿಗೆ ದ್ವಿತೀಯ; ಕರಾವಳಿ ಜಿಲ್ಲೆಗಳ ಭರ್ಜರಿ ಸಾಧನೆ!

(ನ್ಯೂಸ್ ಕಡಬ) newskadaba.com ,ಎ10: 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಜಿಲ್ಲಾವಾರು ಫಲಿತಾಂಶದ ಅಂಕಿಅಂಶಗಳು ಬಿಡುಗಡೆಯಾಗಿದ್ದು, ಈ ಬಾರಿಯೂ ಕರಾವಳಿ ಜಿಲ್ಲೆಗಳು ರಾಜ್ಯಕ್ಕೆ ಮಾದರಿಯಾಗಿವೆ. ಸರ್ಕಾರಿ ಕಾಲೇಜುಗಳ ನಿಯಮಿತ ವಿದ್ಯಾರ್ಥಿಗಳ ಸಾಧನೆಯ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಬೀಗಿದೆ. ದಕ್ಷಿಣ ಕನ್ನಡದ ಪಾರುಪತ್ಯ: ಜಿಲ್ಲೆಯ ಒಟ್ಟು 5,643 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 5,218 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 92.47% ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮಸ್ಥಾನ ಲಭಿಸಿದೆ. ದ್ವಿತೀಯ ಸ್ಥಾನದಲ್ಲಿ ಉಡುಪಿ:ಪಕ್ಕದ

ದ್ವಿತೀಯ ಪಿಯುಸಿ ಫಲಿತಾಂಶ: ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ, ಉಡುಪಿಗೆ ದ್ವಿತೀಯ; ಕರಾವಳಿ ಜಿಲ್ಲೆಗಳ ಭರ್ಜರಿ ಸಾಧನೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಾದಕ ದ್ರವ್ಯ ನೀಡಿ ಮಗಳ ಅಪಹರಣ: ದತ್ತಪೀಠದಲ್ಲಿ ನಾಪತ್ತೆಯಾದ ಬಾಲಕಿಯ ತಾಯಿಯಿಂದ ಗಂಭೀರ ದೂರು.

(ನ್ಯೂಸ್‌ ಕಡಬ) newskadaba.com  ,ಎ10: ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಕಾಫಿನಾಡ ದತ್ತಪೀಠದ ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಾಲಕಿ ಶ್ರೀನಂದಾ ತಾಯಿ ರೋಹಿಣಿ ಈ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದು, ಮಗಳು ಆಕಸ್ಮಿಕವಾಗಿ ಬಿದ್ದಿರಲು ಸಾಧ್ಯವಿಲ್ಲ. ಯಾರೋ ಮಾದಕ ದ್ರವ್ಯ ಕೊಟ್ಟು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಮಾದಕ ದ್ರವ್ಯ ನೀಡಿ ಮಗಳ ಅಪಹರಣ: ದತ್ತಪೀಠದಲ್ಲಿ ನಾಪತ್ತೆಯಾದ ಬಾಲಕಿಯ ತಾಯಿಯಿಂದ ಗಂಭೀರ ದೂರು. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com  ,ಎ10: ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ 11ರವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಿಂಚು ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಎಸ್‌ಐ ಐತಪ್ಪ ಕೊಲೆ ಯತ್ನ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿ ಸಮೀರ್ ವಿರುದ್ಧ ‘ರೆಡ್ ಕಾರ್ನರ್’ ನೋಟಿಸ್

(ನ್ಯೂಸ್‌ ಕಡಬ) newskadaba.com,  ಎ.09  ಎಎಸ್‌ಐ ಐತಪ್ಪ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಆರೋಪಿ ಸಮೀರ್ ವಿರುದ್ಧ ಸಾಮೂಹಿಕ ಅತ್ಯಾಚಾರ ಸಹಿತ 14 ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಈ ಹಿಂದೆ ಆರೋಪಿ ಸಫ್ವಾನ್ ಎಂಬಾತನ ಮೇಲೂ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ ಕಾನೂನು ಕ್ರಮ

ಎಎಸ್‌ಐ ಐತಪ್ಪ ಕೊಲೆ ಯತ್ನ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿ ಸಮೀರ್ ವಿರುದ್ಧ ‘ರೆಡ್ ಕಾರ್ನರ್’ ನೋಟಿಸ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top