ಮರ್ಧಾಳ: ಸ್ನಾನಕ್ಕೆಂದು ನೀರಿಗಿಳಿದಿದ್ದ ಯುವಕ ನೀರುಪಾಲು



(ನ್ಯೂಸ್ ಕಡಬ) newskadaba.com ಕಡಬ, ಏ. 27. ಸ್ನಾನಕ್ಕೆಂದು ಇಳಿದಿದ್ದ ಯುವಕನೋರ್ವ ರಕ್ಷಿತ್ (26) ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಐತ್ತೂರು ಗ್ರಾಮದ ಅರಬ್ಬಿ ತೋಡಿನಲ್ಲಿ ನಡೆದಿದೆ.







ಮೃತ ಯುವಕನನ್ನು ಮೂಲತಃ ಮರ್ದಾಳ ನಿವಾಸಿ ರಕ್ಷಿತ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಈತ, ಸೋಮವಾರ ಸಂಜೆ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.






error: Content is protected !!
Scroll to Top