ಕರಾವಳಿ

ಸ್ಥಗಿತಗೊಂಡಿದ್ದ ಮುಂಬೈ-ಮಂಗಳೂರು ಏರ್ ಇಂಡಿಯಾ ವಿಮಾನ ಕಾರ್ಯಾಚರಣೆ ಪುನರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.10: ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಮುಂಬೈ-ಮಂಗಳೂರು ಅಂತರಾಜ್ಯ ಮತ್ತು ವಿದೇಶಿಯ ಏರ್ ಇಂಡಿಯಾ ವಿಮಾನಗಳ ಸಂಚಾರವು  ಅಕ್ಟೋಬರ್ 12 ಕ್ಕೆ ಮತ್ತೆ ಆರಂಭಗೊಳ್ಳಲಿದೆ.     ಮಂಗಳೂರಿನಿಂದ ನಿರ್ಗಮನ ವಿಮಾನ ಎಐ 680 ಮಧ್ಯಾಹ್ನ 12.40 ಕ್ಕೆ ಹೊರಟು ಮುಂಬೈಗೆ ಮಧ್ಯಾಹ್ನ 2.20 ಕ್ಕೆ ತಲುಪಲಿದೆ. ವಿಮಾನ ಎಐ 679 ಮುಂಬೈಯಿಂದ ಬೆಳಿಗ್ಗೆ 10.15 ಕ್ಕೆ ಹೊರಟು ಮಧ್ಯಾಹ್ನ 12.00 ಕ್ಕೆ ಮಂಗಳೂರಿಗೆ ತಲುಪಲಿದೆ. ಏರ್ ಇಂಡಿಯಾ ಮೂಲಗಳ ಪ್ರಕಾರ, ವಿಮಾನಯಾನವು […]

ಸ್ಥಗಿತಗೊಂಡಿದ್ದ ಮುಂಬೈ-ಮಂಗಳೂರು ಏರ್ ಇಂಡಿಯಾ ವಿಮಾನ ಕಾರ್ಯಾಚರಣೆ ಪುನರಾರಂಭ Read More »

ಕರಾವಳಿ, ಕರ್ನಾಟಕ

ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 50 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.10: ಆರೋಗ್ಯ ಇಲಾಖೆಯ ವರದಿಯಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 50 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.     ಕಡಬ ತಾಲೂಕಿನ ರಾಮಕುಂಜದ 53 ವರ್ಷದ ವ್ಯಕ್ತಿ, 45 ವರ್ಷದ ವ್ಯಕ್ತಿ, 28 ವರ್ಷದ ಮಹಿಳೆ, 48 ವರ್ಷದ ಮಹಿಳೆ, 12 ವರ್ಷದ ಬಾಲಕ, ನೂಜಿಬಾಳ್ತಿಲದ 46 ವರ್ಷದ ಮಹಿಳೆ, ಕಾಮಣದ 29 ವರ್ಷದ ಯುವತಿ, ದೋಳ್ಪಾಡಿಯ 42 ವರ್ಷದ ವ್ಯಕ್ತಿ, ಪುಣ್ಚಪ್ಪಾಡಿಯ 55 ವರ್ಷದ ವ್ಯಕ್ತಿ, ಆಲಂಕಾರಿನ 31

ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 50 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ Read More »

ಕರಾವಳಿ

ಓಡಬಾಯಿ: ಅಂಬ್ಯುಲೆನ್ಸ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಓಡಬಾಯಿ, ಅ.10: ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಮಂಗಳೂರಿನಿಂದ ಮಡಿಕೇರಿ ಕಡೆಗೆ ಕೊರೋನಾದಿಂದ ಮೃತಪಟ್ಟ ರೋಗಿಯೊಬ್ಬರನ್ನು ಸಾಗಿಸುತ್ತಿರುವ ಅಂಬ್ಯುಲೆನ್ಸ್‌ ಪರಸ್ಪರ ಢಿಕ್ಕಿ ಹೊಡೆದ ಘಟನೆ ಇಂದು ಸುಳ್ಯ ಓಡಬಾಯಿ ಬಳಿ ನಡೆದಿದೆ.     ಓಡಬಾಯಿ ಗ್ರೀನ್ ಪಾಮ್‌ ನರ್ಸರಿ ಬಳಿ ಹಾಕಿದ್ದ ಬ್ಯಾರಿಕೇಡ್‌ ತಪ್ಪಿಸುವ ಯತ್ನದಲ್ಲಿ ಅಂಬ್ಯುಲೆನ್ಸ್‌ ಎದುರಿನಿಂದ ಬರುತ್ತಿದ್ದ ಓಮ್ನಿಗೆ ಢಿಕ್ಕಿ ಹೊಡೆದಿದ್ದು, ಓಮ್ನಿ ಜಖಂಗೊಂಡಿದೆ. ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.  

ಓಡಬಾಯಿ: ಅಂಬ್ಯುಲೆನ್ಸ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ Read More »

ಕರಾವಳಿ

ಮಂಗಳೂರು: ಇನ್ಮುಂದೆ ಅಕ್ರಮ ಗೋ ಸಾಗಾಟಕ್ಕೆ ಬ್ರೇಕ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.10: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಅಕ್ರಮ ಗೋ ಸಾಗಾಟವು ದಿನೇ ದಿನೇ ಹೆಚ್ಚುತ್ತಿರುವುದರಿಂದ ಇದೀಗ ಶಾಶ್ವತ ಬ್ರೇಕ್‌ ಹಾಕಲು ಪೊಲೀಸ್‌ ಇಲಾಖೆ ಮುಂದಾಗಿದೆ. ದ.ಕ ಜಿಲ್ಲೆಯಲ್ಲಿ ನಡೆಯಿತ್ತಿರುವ ಅಕ್ರಮ ಗೋ ಸಾಗಾಟ, ಅನೈತಿಕ ಪೊಲೀಸ್‌ಗಿರಿ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಠಾಣಾಧಿಕಾರಿಗಳು ಮುತುವರ್ಜಿ ವಹಿಸಬೇಕು.     ಈ ಬಗ್ಗೆ ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ವಿಕಾಸ್‌ ಕುಮಾರ್‌ ಅವರು ಅದೇಶ ಹೊರಡಿಸಿದ್ದು, ಒಟ್ಟಿನಲ್ಲಿ ಅತೀ ಹೆಚ್ಚು ಅಕ್ರಮ

ಮಂಗಳೂರು: ಇನ್ಮುಂದೆ ಅಕ್ರಮ ಗೋ ಸಾಗಾಟಕ್ಕೆ ಬ್ರೇಕ್ Read More »

ಕರಾವಳಿ

ಸುಳ್ಯ: ಹತ್ರಾಸ್‌ ಯುವತಿಯ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.10: ಉತ್ತರ ಪ್ರದೇಶದ ಹತ್ರಾಸ್‌ ಯುವತಿಯ ಅತ್ಯಾಚಾರ, ಕೊಲೆ ಖಂಡಿಸಿ ಸುಳ್ಯದಲ್ಲಿ ಇಂದು ಪ್ರತಿಭಟನೆ ನಡೆಸಿದ್ದಾರೆ.     ಈ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯದ ವಿರುದ್ಧ ಕಾಂಗ್ರೆಸ್‌ ಪಕ್ಷ ನಿರಂತರ ಹೋರಾಟ ನಡೆಸಿ, ಅನ್ಯಾಯ ಆದವರಿಗೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ಇರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದರು. ಸಮಾರಂಭದಲ್ಲಿ ನಾಯಕರಾದ ಯು.ಟಿ. ಖಾದರ್‌, ಶಕುಂತಲಾ ಶೆಟ್ಟಿ, ಶಾಲೆಟ್‌ ಪಿಂಟೋ, ಎಂ.ಬಿ.ಸದಾಶಿವ, ಕೆ.ಪಿ.ಜಾನಿ, ಎನ್.‌

ಸುಳ್ಯ: ಹತ್ರಾಸ್‌ ಯುವತಿಯ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ Read More »

ಕರಾವಳಿ

ಹೆಬ್ರಿ : ಮುದ್ದು ಮಗಳಿಗೆ “ಸೈನ್ಯ” ವೆಂದು ನಾಮಕರಣ

(ನ್ಯೂಸ್ ಕಡಬ) newskadaba.com ಹೆಬ್ರಿ, ಅ. 10: ಸೈನಿಕರೊಬ್ಬರು ತಮ್ಮ ಮಗಳಿಗೆ “ಸೈನ್ಯ” ಎಂದು ಹೆಸರಿಟ್ಟು ದೇಶಪ್ರೇಮ ಮೆರೆದಿದ್ದಾರೆ. ಸೈನ್ಯದ ಮೇಲಿರುವ ವಿಶೇಷ ಪ್ರೀತಿಯನ್ನು, ಕಾಳಜಿಯನ್ನು ತೋರಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಕನ್ನಡ ಅಭಿಮಾನಿಯೊಬ್ಬರು ತಮ್ಮ ಹೆಣ್ಣು ಮಗುವಿಗೆ ಕನ್ನಡ ಅಂತ ನಾಮಕರಣ ಮಾಡಿದ್ದು, ಸುದ್ದಿಯಾಗಿತ್ತು.   ಈಗ ಅದೇ ರೀತಿಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯ ಸೈನಿಕರೊಬ್ಬರು ತಮ್ಮ ಹೆಣ್ಣು ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ತಮ್ಮ ವೃತ್ತಿಗೆ ಗೌರವ ಸೂಚಿಸಿದ್ದಾರೆ. ಹೆಬ್ರಿ ತಾಲೂಕಿನ ಆಶಾ- ಪ್ರಶಾಂತ್ ಪೂಜಾರಿ

ಹೆಬ್ರಿ : ಮುದ್ದು ಮಗಳಿಗೆ “ಸೈನ್ಯ” ವೆಂದು ನಾಮಕರಣ Read More »

ಕರಾವಳಿ, ಕರ್ನಾಟಕ

ಶಿರಸಿ- ಕುಮಟಾ- ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಶಿರಸಿ, ಅ. 10:  ಬಹುನಿರೀಕ್ಷಿತ ಶಿರಸಿ- ಕುಮಟಾ- ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ 766 ಇಇ ವಿಸ್ತರಣೆ ಕಾಮಗಾರಿ ನಡೆಯುವ ಕಾರಣ, ಅ.12ರಿಂದ 18 ತಿಂಗಳ ಕಾಲ ಶಿರಸಿಯಿಂದ ಕುಮಟಾ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬೇಲೇಕೇರಿ ಕ್ರಾಸ್ ನಿಂದ ಬೇಲೇಕೇರಿ ಬಂದರಿನವರೆಗೆ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿತ್ತು. ಭಾರತ್ ಮಾಲಾ

ಶಿರಸಿ- ಕುಮಟಾ- ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ ಬಂದ್ Read More »

ಕರಾವಳಿ

ಅರಂತೋಡು: ಕೊಲೆಗೈದ ಶಂಕಿತ ಆರೋಪಿಗಳು ಬಳಸಿದ್ದ ಕ್ವಾಲಿಸ್‌ ವಾಹನ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.10: ಕಳಗಿ ಬಾಲಚಂದ್ರರ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಕಲ್ಲುಗುಂಡಿಯ ಸಂಪತ್ನನ್ನು ಅ.8 ರಂದು ಕೊಲೆಗೈದ ಶಂಕಿತ ಆರೋಪಿಗಳು ಬಳಸಿದ್ದ ಕ್ವಾಲಿಸ್‌ ವಾಹನವೊಂದು ಅರಂತೋಡು ಬಳಿಯ ಕಳುಬೈಲು ಎಂಬಲ್ಲಿರುವ ರಬ್ಬರ್‌ ತೋಟವೊಂದರಲ್ಲಿ ಪತ್ತೆಯಾಗಿದೆ.     ಇದು ಚೊಕ್ಕಾಡಿಯ ಪದ್ಮನಾಭ ಎಂಬವರ ವಾಹನವಾಗಿದ್ದು, ಸಂಪತ್‌ ಹತ್ಯೆ ಮಾಡಿದವರು ಈಯೊಂದು ಹಸಿರು ಬಣ್ಣದ ಕ್ವಾಲಿಸ್‌ ವಾಹನದಲ್ಲಿ ಬಂದಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಕಲ್ಲುಗುಂಡಿಯ ಮನು ಎಂಬಾತ ಈ ಕ್ವಾಲಿಸ್ ನ್ನು ಶೂಟಿಂಗ್‌ ಇದೆ ಎಂದು

ಅರಂತೋಡು: ಕೊಲೆಗೈದ ಶಂಕಿತ ಆರೋಪಿಗಳು ಬಳಸಿದ್ದ ಕ್ವಾಲಿಸ್‌ ವಾಹನ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಎಸ್ಡಿಪಿಐ ವತಿಯಿಂದ ಕಾವಳಮುಡೂರು ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 10. ಮುಂಬರುವ ಪಂಚಾಯತ್ ಚುನಾವಣೆಯ ಕಾವಳಮೂಡೂರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮವು ಕಾವಳಕಟ್ಟೆ ದೂಮಾಲಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ದೂಮಾಲಿಕೆ ಬ್ರಾಂಚ್ ಅಧ್ಯಕ್ಷರಾದ ಮುಸ್ತಫಾ ದೂಮಾಲಿಕೆ ವಹಿಸಿದ್ದರು. ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭ್ಯರ್ಥಿ ಘೋಷಣೆ ಮಾಡಿದರು. ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ಸಂದೇಶ ಭಾಷಣ ಮಾಡಿದರು. ಪ್ರಥಮ ಹಂತದ ಅಭ್ಯರ್ಥಿಗಳ

ಎಸ್ಡಿಪಿಐ ವತಿಯಿಂದ ಕಾವಳಮುಡೂರು ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ : ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಾಜಿ ಗ್ರಾ.ಪಂ.ಸದಸ್ಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.10: ಅಸ್ವಸ್ಥನಾಗಿ ಪ್ರಯಾಣಿಕರ ತಂಗುದಾಣದಲ್ಲಿ ನರಳಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ  ಮಾಜಿ ಗ್ರಾ.ಪಂ.ಸದಸ್ಯ  ಪ್ರಶಾಂತ್ ಮಾನವೀಯತೆ ಮೆರೆದಿದ್ದಾರೆ.   ಕೊರೋನಾ ಭೀತಿಯಿಂದಾಗಿ ಯುವಕನೋರ್ವ ಅಸ್ವಸ್ಥತೆಯಿಂದ ನರಳಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿದ್ದು, ಮಾಹಿತಿ ಪಡೆದ ಸ್ಥಳೀಯ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಪ್ರಶಾಂತ್‌ ಶಿವಾಜಿನಗರ ರವರು 108 ಆರೋಗ್ಯ ಕವಚವನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಕೊರೋನಾ ಭೀತಿಯ ಹಿನ್ನಲೆಯಲ್ಲಿ ವೈರಸ್‌ ನಿರೋಧಕ ಕಿಟ್‌ ಕಲ್ಪಿಸಿ ಆತನನ್ನು ಪುತ್ತೂರಿನ ಸರಕಾರಿ ಆಸ್ಪತ್ತೆಗೆ

ಉಪ್ಪಿನಂಗಡಿ : ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಾಜಿ ಗ್ರಾ.ಪಂ.ಸದಸ್ಯ Read More »

ಕರಾವಳಿ
Scroll to Top