ಕರಾವಳಿ

ಎಸ್ಡಿಪಿಐ ಬಡಗಜೆಕಾರು ಗ್ರಾಮ ಸಮಿತಿ ➤ ಗ್ರಾ.ಪಂ. ಚುನಾವಣಾ ಅಭ್ಯರ್ಥಿ ಘೋಷಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 10. ಮುಂಬರುವ ಪಂಚಾಯತ್ ಚುನಾವಣೆಯ ಬಡಗಕಜೆಕಾರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮವು ಪಾಂಡವರಕಲ್ಲುವಿನ ಸಮುದಾಯ ಭವನದಲ್ಲಿ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಕಾವಳ ಪಡೂರು- ಮೂಡೂರು ವಲಯಾಧ್ಯಕ್ಷರಾದ ಅಬೂಬಕ್ಕರ್ ಮದ್ದ ವಹಿಸಿದ್ದರು. ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭ್ಯರ್ಥಿ ಘೋಷಣೆ ಮಾಡಿದರು. ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ಸಂದೇಶ ಭಾಷಣ ಮಾಡಿದರು. […]

ಎಸ್ಡಿಪಿಐ ಬಡಗಜೆಕಾರು ಗ್ರಾಮ ಸಮಿತಿ ➤ ಗ್ರಾ.ಪಂ. ಚುನಾವಣಾ ಅಭ್ಯರ್ಥಿ ಘೋಷಣಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಭಾರಿ ಮಳೆಗೆ ಕೊಲ್ಲಮೊಗ್ರದ ಮನೆಗಳಿಗೆ ನುಗ್ಗಿದ ನೀರು

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.09: ಕಳೆದ ದಿನ ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಕೊಲ್ಲಮೊಗ್ರದ ಅಶ್ವತ್ಥ ಮರದ ಬಳಿ ಇರುವ ಸೇತುವೆ ಮೇಲೆ ನೀರು ಬಂದಿದ್ದು, ಮರವೊಂದು ಬುಡಸಮೇತ ಹಳ್ಳಕ್ಕೆ ಬಿದ್ದಿದೆ.     ಇದರಂದಾಗಿ ನೀರು ಹರಿಯಲು ಸಾಧ್ಯವಾಗದ ಕಾರಣ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು. ಶಶಿಕುಮಾರ್‌ ಬೊಳ್ಳಾಜೆ, ಮಹಾಲಿಂಗ ಪಾಟಾಳಿ, ಶಂಕರ ಪಾಟಾಳಿ, ರಘುನಾಥ ಪಾಟಾಳಿ ಮತ್ತಿತರರ ಮನೆಗಳಿಗೆ ನೀರು ನುಗ್ಗಿ ಹಾನಿಗಳಾಗಿವೆ.  

ಭಾರಿ ಮಳೆಗೆ ಕೊಲ್ಲಮೊಗ್ರದ ಮನೆಗಳಿಗೆ ನುಗ್ಗಿದ ನೀರು Read More »

ಕರಾವಳಿ

ಮಂತ್ರಿಗಳೊಂದಿಗೆ ಗ್ರಾಮಸ್ಥರ ಸಂವಾದ ➤ ಶಾಸಕ ಎಸ್. ಅಂಗಾರ, ಉಸ್ತುವಾರಿ ಸಚಿವರು ಭಾಗಿ

(ನ್ಯೂಸ್ ಕಡಬ) newskadaba.com ಕನಕಮಜಲು , ಅ. 09: ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ನಾನಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರದ ಅಂಗವಾಗಿ ಸಚಿವರೊಂದಿಗೆ ಸಂವಾದ ಕಾರ್ಯಕ್ರಮ ಇಂದು ನಡೆಯಿತು. ಸಂವಾದದಲ್ಲಿ ಉಸ್ತುವರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜತೆ ಗ್ರಾಮಸ್ಥರು ಮಾತುಕತೆ ನಡೆಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್. ಅಂಗಾರ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಕರ್ನಾಟಕ ದಕ್ಷಿಣ ಭಾರತ ಸಹ ಸೇವಾ ಪ್ರಮುಖ್ ನ

ಮಂತ್ರಿಗಳೊಂದಿಗೆ ಗ್ರಾಮಸ್ಥರ ಸಂವಾದ ➤ ಶಾಸಕ ಎಸ್. ಅಂಗಾರ, ಉಸ್ತುವಾರಿ ಸಚಿವರು ಭಾಗಿ Read More »

ಕರಾವಳಿ, ಕರ್ನಾಟಕ

ಸಂಪಾಜೆ: ರಾಜ್ಯ ಹೆದ್ದಾರಿಯ ಚರಂಡಿ ಕುಸಿತ

(ನ್ಯೂಸ್ ಕಡಬ) newskadaba.com ಸಂಪಾಜೆ, ಅ.09: ಸಂಪಾಜೆಯ ಗಡಿಕಲ್ಲಿನ ಮಸೀದಿಯ ಬಳಿ ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯು ಕಳೆದ ದಿನ ರಾತ್ರಿ ಸುರಿದ ಭಾರಿ ಮಳೆಗೆ ಚರಂಡಿ ಕುಸಿದಿದ್ದು, ಇದೀಗ ಅಪಾಯಕಾರಿ ಉಂಟುಮಾಡಿದೆ.     ದಿನಪ್ರತಿ ನೂರಾರು ವಾಹನಗಳು, ಪಾದಚಾರಿಗಳು ಈ ದಾರಿಯಲ್ಲಿ ಸಂಚರಿಸುತ್ತಿದ್ದು, ಅಪಾಯ ತಪ್ಪಿದ್ದಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮುಂದೆ ಆಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕಾಗಿ ಸಂಪಾಜೆ ಎಸ್.ಡಿ.ಪಿ.ಐ ಪ್ರಮುಖರಾದ ಮಹಮ್ಮದ್‌ ಕುಂಞೆ ಮತ್ತು ಆಶ್ರಫ್‌ ರವರು ಈ ಮೂಲಕ ತಿಳಿಸಿದ್ದಾರೆ.

ಸಂಪಾಜೆ: ರಾಜ್ಯ ಹೆದ್ದಾರಿಯ ಚರಂಡಿ ಕುಸಿತ Read More »

ಕರಾವಳಿ

ನೆಲ್ಲೂರು ಕೆಮ್ರಾಜೆ: ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ನೆಲ್ಲೂರು ಕೆಮ್ರಾಜೆ, ಅ.09: ನೆಲ್ಲೂರು ಕೆಮ್ರಾಜೆ ಗ್ರಾಮದ ಬೆಟ್ಟ ರಾಮಚಂದ್ರ ಮಣಿಯಾಣಿಯವರ ಮನೆಗೆ ಕಳೆದ ರಾತ್ರಿ ಸುರಿದ ಸಿಡಿಲು ಮಿಂಚು ಸಹಿತ ಭಾರಿ ಮಳೆಗೆ ಹಿಂಬದಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿಯುಂಟಾಗಿದೆ.         ಪರಿಣಾಮವಾಗಿ ಶೌಚಾಲಯ ಹಾಗೂ ತೆಂಗಿನ ಮರ ಮತ್ತು ಮನೆಯ ವಿದ್ಯುತ್‌ ಉಪಕರಣಗಳಿಗೆ ಹಾನಿಯುಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ.    

ನೆಲ್ಲೂರು ಕೆಮ್ರಾಜೆ: ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಗೆ ಹಾನಿ Read More »

ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09: ಅಂ.ರಾ.ವಿಮಾನ ನಿಲ್ದಾಣದಲ್ಲಿ 25,45,920 ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿ ಓರ್ವನನ್ನು ಬಂಧಿಸಿದ್ದಾರೆ.ಕಾಸರಗೋಡು ನಿವಾಸಿ ಸುಮೇಶ್ ಬಂಧಿತ ಆರೋಪಿ. ಈತ ಎಲೆಕ್ನಿಕ್ ಕುಕ್ಕರ್ ಒಳಗೆ ಚಿನ್ನ ಇಟ್ಟು ಸಾಗಾಟ ಮಾಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಆರೋಪಿಯಿಂದಬರೋಬ್ಬರಿ 25,45,920 ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.    

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬಡ್ಡಡ್ಕ: ರಸ್ತೆ ಬಿಟ್ಟು ಚರಂಡಿಗೆ ಇಳಿದ ಮಿನಿ ಟಾಟಾ ಏಸ್‌ ರಿಕ್ಷಾ

(ನ್ಯೂಸ್ ಕಡಬ) newskadaba.com ಬಡ್ಡಡ್ಕ, ಅ.09: ಬಡ್ಡಡ್ಕ ಶಾಲೆಯ ತಿರುವಿನಲ್ಲಿ ಪಾಣತ್ತೂರು ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಮಿನಿ ಟಾಟಾ ಏಸ್‌ ಗೂಡ್ಸ್‌ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ಇಂದು ನಡೆದಿದೆ.   ವಾಹನದಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆ ಮತ್ತು ಮಗು ಸಂಚರಿಸುತ್ತಿದ್ದು, ಅಲ್ಪ ಸ್ವಲ್ಪ ಗಾಯಗೊಂಡಿರುತ್ತದೆ. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದವರು ಗಾಯಗೊಂಡವರನ್ನು ಸುಳ್ಯ ಅಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.  

ಬಡ್ಡಡ್ಕ: ರಸ್ತೆ ಬಿಟ್ಟು ಚರಂಡಿಗೆ ಇಳಿದ ಮಿನಿ ಟಾಟಾ ಏಸ್‌ ರಿಕ್ಷಾ Read More »

ಕರಾವಳಿ, ಕ್ರೈಮ್ ನ್ಯೂಸ್

ಭಾರಿ ಮಳೆಗೆ ಕೊಲ್ಲಮೊಗ್ರದ ಕಡಂಬಳ ಸೇತುವೆ ಶಿಥಿಲ

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.09: ಕಳೆದ ದಿನ ಸುರಿದ ಸಿಡಿಲು ಮಿಂಚು ಭಾರಿ ಮಳೆಗೆ ಕೊಲ್ಲಮೊಗ್ರ ಗ್ರಾಮದ ಕಡಂಬಳ ಸೇತುವೆ ಬಿರುಕು ಬಿಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಭಾರಿ ಮಳೆ ಬಂದ ಕಾರಣ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದು, ಸೇತುವೆಯ ಮಣ್ಣೆಲ್ಲಾ ಕೊರೆದು ಹೋಗಿದೆ. ಇಲ್ಲಿನ ಕಂಬಳ, ಪೆರ್ನಾಜೆ, ಕೊಂಬೆಟ್ಟುವಿನ ಸುಮಾರು 22 ಮನೆಯವರು ಇದರಿಂದಾಗಿ ತೊಂದರೆಗೆ ಒಳಗಾಗಿದ್ದಾರೆ. ಈ ಸೇತುವಿನಲ್ಲಿ ಕೇವಲ ದಿಚಕ್ರ ವಾಹನಗಳಷ್ಟೆ ಓಡಾಡಲು ಸಾಧ್ಯವಿರುವುದಾಗಿ ಈ ಭಾಗದ ಜನರು ತಿಳಿಸಿದ್ದಾರೆ.  

ಭಾರಿ ಮಳೆಗೆ ಕೊಲ್ಲಮೊಗ್ರದ ಕಡಂಬಳ ಸೇತುವೆ ಶಿಥಿಲ Read More »

ಕರಾವಳಿ

ಪುತ್ತೂರು : ಸ್ಕೂಟರ್‌ ಸ್ಕಿಡ್‌ ➤ ಸವಾರ ಸ್ಥಳದಲ್ಲೆ ಮೃತ್ಯು

(ನ್ಯೂಸ್ ಕಡಬ) newskadaba.com ಬನ್ನೂರು, ಅ.09: ನೆಕ್ಕಿಲ ನಿವಾಸಿ ಯುವಕರೊಬ್ಬರು ಬನ್ನೂರು ಶಾಲಾ ಬಳಿ ಸ್ಕೂಟರ್‌ವೊಂದು ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಮೃತರನ್ನು ಬನ್ನೂರು ನೆಕ್ಕಿಲ ನಿವಾಸಿ ಬೂಂದ್‌ ಕುಡಿಯುವ ನೀರಿನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಿಶಾಂತ್(28‌ ವ.) ಎಂದು ಗುರುತಿಸಲಾಗಿದೆ. ಇವರು ರಾತ್ರಿ ವೇಳೆ ಟಿವಿಎಸ್‌ ಸ್ಕೂಟರ್‌ ನಲ್ಲಿ ಮನೆ ಕಡೆ ಬರುತ್ತಿದ್ದ ವೇಳೆ ಸ್ಕೂಟರ್‌ ಸ್ಕಿಡ್‌ ಆಗಿರಬಹುದು ಎಂದು ಹೇಳಲಾಗುತ್ತದೆ. ಅದೇ ದಾರಿಯಾಗಿ ತಡ ರಾತ್ರಿ ವ್ಯಕ್ತಿಯೊಬ್ಬರು

ಪುತ್ತೂರು : ಸ್ಕೂಟರ್‌ ಸ್ಕಿಡ್‌ ➤ ಸವಾರ ಸ್ಥಳದಲ್ಲೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ ದರೋಡೆ

(ನ್ಯೂಸ್ ಕಡಬ) newskadaba.com ವಿಟ್ಲ, ಅ. 09. ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ದರೋಡೆ ಮಾಡಿರುವ ಘಟನೆ ಮೇಗಿನಪೇಟೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೇಗಿನಪೇಟೆ ನಿವಾಸಿಯಾದ ಲಲಿತಾ ಎಂಬವರು ಒಂಟಿ ಜೀವನ ನಡೆಸುತ್ತಿದ್ದು, ಇವರ ಮನೆಗೆ ನುಗ್ಗಿದ ಕಳ್ಳರು ಮಹಿಳೆಗೆ ಮಾರಣಾಂತಿಕ ಹಲ್ಲೆ ನಡೆಸಿ, ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಮನೆಯೊಳಗೆ ಚಿನ್ನಕ್ಕಾಗಿ ಹುಡುಕಾಡಿ ಆಕೆಯ ಕುತ್ತಿಗೆಯಲ್ಲಿದ್ದ ಬೆಳ್ಳಿಯ ಸರ ಕಸಿದು, ಮನೆಯ ಮುಂಬಾಗಿಲಿಗೆ

ವಿಟ್ಲ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ ದರೋಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top