ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಎಸ್ಡಿಪಿಐ ವತಿಯಿಂದ ಕಾವಳಮುಡೂರು ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ – News Kadaba

ಎಸ್ಡಿಪಿಐ ವತಿಯಿಂದ ಕಾವಳಮುಡೂರು ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 10. ಮುಂಬರುವ ಪಂಚಾಯತ್ ಚುನಾವಣೆಯ ಕಾವಳಮೂಡೂರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮವು ಕಾವಳಕಟ್ಟೆ ದೂಮಾಲಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ದೂಮಾಲಿಕೆ ಬ್ರಾಂಚ್ ಅಧ್ಯಕ್ಷರಾದ ಮುಸ್ತಫಾ ದೂಮಾಲಿಕೆ ವಹಿಸಿದ್ದರು. ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭ್ಯರ್ಥಿ ಘೋಷಣೆ ಮಾಡಿದರು. ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ಸಂದೇಶ ಭಾಷಣ ಮಾಡಿದರು. ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಯಿತು.

ಅಭ್ಯರ್ಥಿ ಪಟ್ಟಿ ಪ್ರಕಟ:
ಕಾವಳಮೂಡೂರು ಗ್ರಾಮದ 3ನೇ ಬ್ಲಾಕ್ ನಲ್ಲಿ 3 ಅಭ್ಯರ್ಥಿ ಗಳ ಹೆಸರುಗಳನ್ನು ಘೋಷಿಸಲಾಯಿತು

?ಮುಸ್ತಫಾ ಕಾವಳಕಟ್ಟೆ /so ಖಾದರ್ ?ಶೈನಾಝ್ ಬಾನು w/o ಆರೀಫ್ ಎನ್ ಸಿ ರೋಡ್

?ಸಫಾ ಸಲ್ಮಾ ಬಾನು w/o ಇರ್ಫಾನ್ ಕಾವಳಕಟ್ಟೆ

ಎಸ್ಡಿಪಿಐ ಕಾವಳ ಮುಡೂರು – ಪಡೂರು ವಲಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಬಸ್ತಿಕೋಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಕಾವಳಮೂಡೂರು ಪಡೂರು ವಲಯ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಮದ್ದ, PFI ವಲಯ ಅಧ್ಯಕ್ಷರಾದ ರಶೀದ್ ಮೂರ್ಜೆ, ಬಂಟ್ವಾಳ ವಿಧಾನ ಸಭಾ ಸಮಿತಿ ಸದಸ್ಯರಾದ ಇರ್ಫಾನ್ ಕಾವಳಕಟ್ಟೆ ಉಪಸ್ಥಿತರಿದ್ದರು. ಇರ್ಷಾದ್ ಕಾವಳಕಟ್ಟೆ ನಿರೂಪಿಸಿದರು. ಮುಸ್ತಫಾ ಕಾವಳಕಟ್ಟೆ ದನ್ಯವಾದಗೈದರು.

Scroll to Top