ಕರಾವಳಿ

NEET ಪ್ರಶ್ನೆ ಪತ್ರಿಕೆ ಸಾಗಿಸಲು ಭಾರತೀಯ ವಾಯುಪಡೆ ಬಳಕೆ! ಇತಿಹಾಸದಲ್ಲೇ ಮೊದಲ ಬಾರಿಗೆ ಏರ್‌ಫೋರ್ಸ್‌ ಬಳಕೆ

ನಮ್ಮ ದೇಶದಲ್ಲಿ ಒಂದು ಫೇರ್ ಆದ, ಯಾವುದೇ ರೀತಿಯ ಕಳ್ಳಾಟವಿಲ್ಲದ ಎಕ್ಸಾಮ್ ಮಾಡೋದು ಇಷ್ಟೊಂದು ಕಷ್ಟದ ಕೆಲಸನಾ? ಈ ಪ್ರಶ್ನೆ ಈಗ ಪ್ರತಿಯೊಬ್ಬರ ಮನಸ್ಸಲ್ಲೂ ಕಾಡ್ತಾ ಇದೆ. ಮೇ 3ರಂದು ನಡೆದಿದ್ದ ನೀಟ್‌-ಯುಜಿ ಮೆಡಿಕಲ್ ಎಂಟ್ರೆನ್ಸ್ ಎಕ್ಸಾಮ್ ಪೇಪರ್ ಲೀಕ್ ಆಗಿ, ಪರೀಕ್ಷೆ ರದ್ದಾಗಿ, ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ದೇಶಾದ್ಯಂತ ದೊಡ್ಡ ಮಟ್ಟದ ಪ್ರೊಟೆಸ್ಟ್ ಕೂಡ ನಡೀತು. ಇದರ ಬೆನ್ನಲ್ಲೇ ಈಗ ಜೂನ್ 21ಕ್ಕೆ NEET ಮರುಪರೀಕ್ಷೆ ನಡೆಸಲು ದಿನಾಂಕ ಫಿಕ್ಸ್ […]

NEET ಪ್ರಶ್ನೆ ಪತ್ರಿಕೆ ಸಾಗಿಸಲು ಭಾರತೀಯ ವಾಯುಪಡೆ ಬಳಕೆ! ಇತಿಹಾಸದಲ್ಲೇ ಮೊದಲ ಬಾರಿಗೆ ಏರ್‌ಫೋರ್ಸ್‌ ಬಳಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಐಟಿ ದಾಳಿ ಪ್ರಕರಣ: ಡಿಕೆ ಶಿವಕುಮಾರ್ಗೆ ಕೋರ್ಟ್ ಬಿಗ್ ರಿಲೀಫ್

(ನ್ಯೂಸ್‌ ಕಡಬ) newskadaba.com,  ಮೇ.29:  ತೆರಿಗೆ ವಂಚನೆ ಸಂಬಂಧ ಐಟಿ ದಾಳಿ ಪ್ರಕರಣದಲ್ಲಿ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿಧಿಸಲಾಗಿದ್ದ ಜಾಮೀನು ಷರತ್ತನ್ನು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಡಿಲಿಸಿದೆ. ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲವೆಂದು ವಿಧಿಸಲಾಗಿದ್ದ ಷರತ್ತು ಸಡಿಲಿಕೆ ಮಾಡಿದೆ. ಸಚಿವರಾಗಿ ಅಧಿಕೃತ ಕೆಲಸ ಹಾಗೂ ವೈಯಕ್ತಿಕ ಉದ್ಯಮದ ನಿಮಿತ್ತ ಮುಂದಿನ ಎರಡು ವರ್ಷಗಳ ಕಾಲ ವಿವಿಧ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ. ಆದರೆ, ಪ್ರತಿ ಬಾರಿಯೂ ಪ್ರವಾಸದ ಸಂಪೂರ್ಣ

ಐಟಿ ದಾಳಿ ಪ್ರಕರಣ: ಡಿಕೆ ಶಿವಕುಮಾರ್ಗೆ ಕೋರ್ಟ್ ಬಿಗ್ ರಿಲೀಫ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ| ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

(ನ್ಯೂಸ್‌ ಕಡಬ) newskadaba.com,  ಮೇ.29:  ಧರ್ಮಸ್ಥಳದಲ್ಲಿ ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಔಷಧಿ ನೀಡಿ ದರೋಡೆ ಮಾಡಿರುವ ಘಟನೆ ನಡೆದಿದೆ. 70 ವರ್ಷದ ಮಹಿಳೆಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಬೆಂಗಳೂರು ಬನ್ನೇರುಘಟ್ಟ ಮೂಲದ ಪ್ರೇಮಾ ಕೆ. ಮೋಸ ಹೋದ ವೃದ್ಧೆ. ಅಪರಿಚಿತರು ಪ್ರಸಾದ, ಜ್ಯೂಸ್ ನೀಡಿ ಪರಿಚಯ ಬೆಳೆಸಿ ಕೃತ್ಯ ಎಸಗಿದ್ದಾರೆ. 112 ಗ್ರಾಂ ಚಿನ್ನಾಭರಣ, 7 ಸಾವಿರ ನಗದು ಕಳವು ಮಾಡಲಾಗಿದೆ. ದೇವಸ್ಥಾನದ ಮುಖ್ಯದ್ವಾರದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ…

ಧರ್ಮಸ್ಥಳ| ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜೂನ್ 4 ರ ಸುಮಾರಿಗೆ ಕರಾವಳಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ ನಿರೀಕ್ಷೆ

(ನ್ಯೂಸ್‌ ಕಡಬ) newskadaba.com,  ಮೇ.29: ಹವಾಮಾನ ಇಲಾಖೆಯ ಪ್ರಸ್ತುತ ಮುನ್ಸೂಚನೆಯ ಪ್ರಕಾರ, ಶುಕ್ರವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ತಾತ್ಕಾಲಿಕವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಜೂನ್ 4 ರ ಸುಮಾರಿಗೆ ನೈರುತ್ಯ ಮಾನ್ಸೂನ್ ರಾಜ್ಯವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಹೆಚ್ಚಿನ ತಾಪಮಾನ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರಾಸರಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಮತ್ತು 36 ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದರೆ, ಕನಿಷ್ಠ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ನಿಂದ

ಜೂನ್ 4 ರ ಸುಮಾರಿಗೆ ಕರಾವಳಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ ನಿರೀಕ್ಷೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ ಕಲಬುರಗಿಗೆ ವರ್ಗಾವಣೆ

(ನ್ಯೂಸ್‌ ಕಡಬ) newskadaba.com,  ಮೇ.28: : ರಾಜ್ಯ ಕಂದಾಯ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ಕಡಬ ತಾಲೂಕು ತಹಶೀಲ್ದಾರ್ ಸೇರಿದಂತೆ ರಾಜ್ಯದ ಒಟ್ಟು 27 ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಗೊಳಿಸಿ ಕರ್ನಾಟಕ ಸರ್ಕಾರ ಬುಧವಾರ (ಮೇ 27) ರಾತ್ರಿ ಅಧಿಸೂಚನೆ ಹೊರಡಿಸಿದೆ. ಕಡಬ ತಹಶೀಲ್ದಾರ್ ಕಲಬುರಗಿಗೆ ವರ್ಗಾವಣೆ: ಕಡಬ ತಾಲ್ಲೂಕಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಪ್ರಭಾಕರ ಖಜೂರೆ ಅವರನ್ನು ಕಲಬುರಗಿ ಜಿಲ್ಲೆಯ ಕಮಲಾಪುರ

ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ ಕಲಬುರಗಿಗೆ ವರ್ಗಾವಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

OBC ಮೀಸಲಾತಿ ಶೇ.10 ಹೆಚ್ಚಳಕ್ಕೆ ಆಯೋಗ ಶಿಫಾರಸು: ಸಿಎಂಗೆ ಜಾತಿಗಣತಿ ವರದಿ ಸಲ್ಲಿಕೆ

(ನ್ಯೂಸ್‌ ಕಡಬ) newskadaba.com,  ಮೇ.28: : ಒಬಿಸಿ ಮೀಸಲಾತಿ ಪ್ರಮಾಣ ಶೇ. 10ರಷ್ಟು ಹೆಚ್ಚಳಕ್ಕೆ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು: ಸಿಎಂ ಸಿದ್ದರಾಮಯ್ಯಗೆ ಜಾತಿನೀತಿ ವರದಿ ಸಲ್ಲಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ **2025ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಅಂತಿಮ ವರದಿಯನ್ನು** ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಸಲ್ಲಿಕೆ ಮಾಡಿದೆ. ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಸಮಿತಿಯು ಈ ಮಹತ್ವದ ವರದಿಯನ್ನು ಹಸ್ತಾಂತರಿಸಿದೆ.

OBC ಮೀಸಲಾತಿ ಶೇ.10 ಹೆಚ್ಚಳಕ್ಕೆ ಆಯೋಗ ಶಿಫಾರಸು: ಸಿಎಂಗೆ ಜಾತಿಗಣತಿ ವರದಿ ಸಲ್ಲಿಕೆ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಪೆರ್ಮುದೆ ಬಳಿ ಸ್ಕೂಟರ್-ಬೈಕ್ ಡಿಕ್ಕಿ- ಮಗ ಮೃತ್ಯು, ತಂದೆಗೆ ಗಂಭೀರ ಗಾಯ

(ನ್ಯೂಸ್‌ ಕಡಬ) newskadaba.com,  ಮೇ.28: :ಸ್ಕೂಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡ ಘಟನೆ ಮೇ 28 ರ ಗುರುವಾರ ಬೆಳಿಗ್ಗೆ ಪೆರ್ಮುದೆ ಬಳಿಯ ಪೆರಿಯಡ್ಕದಲ್ಲಿ ನಡೆದಿದೆ. ಮೃತರನ್ನು ಸ್ಕೂಟರ್ ಸವಾರಿ ಮಾಡುತ್ತಿದ್ದ ಬಾಯಾರು ನೆತ್ತರಗುಳಿ ನಿವಾಸಿ ಎನ್. ಕಿಶನ್ (24) ಎಂದು ಗುರುತಿಸಲಾಗಿದ್ದು, ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಅವರ ತಂದೆ ಮಾಧವ ದೇವಾಡಿಗ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಎದುರುಗಡೆಯಿಂದ ಬರುತ್ತಿದ್ದ ಬೈಕ್

ಕಾಸರಗೋಡು: ಪೆರ್ಮುದೆ ಬಳಿ ಸ್ಕೂಟರ್-ಬೈಕ್ ಡಿಕ್ಕಿ- ಮಗ ಮೃತ್ಯು, ತಂದೆಗೆ ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಕರ್ತವ್ಯದಲ್ಲಿದ್ದ ಇಬ್ಬರು ಟ್ರಾಫಿಕ್ ಪೊಲೀಸರಿಗೆ ಕಾರು ಡಿಕ್ಕಿ – ಓರ್ವ ಗಂಭೀರ

(ನ್ಯೂಸ್‌ ಕಡಬ) newskadaba.com,  ಮೇ 28 ನಗರದ ಮಣ್ಣಗುಡ್ಡದ ಗೋದಾಮು ಸಮೀಪ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಸಂಚಾರ ಪೊಲೀಸರು ಗಾಯಗೊಂಡಿದ್ದು, ಅವರಲ್ಲಿ ಓರ್ವರ ಸ್ಥಿತಿ ಗಂಭೀರವಾಗಿದೆ. ಮಂಗಳೂರು ನಗರ ಸಂಚಾರ ಪಶ್ಚಿಮ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿಠಲ್ ದಾಸ್ ಹಾಗೂ ಕಾನ್‌ಸ್ಟೆಬಲ್ ಕುಮಾರ್ ಗಾಯಗೊಂಡವರು. ಇವರಲ್ಲಿ ವಿಠಲ್ ದಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ ಸುಮಾರು 11 ಗಂಟೆ

ಮಂಗಳೂರು : ಕರ್ತವ್ಯದಲ್ಲಿದ್ದ ಇಬ್ಬರು ಟ್ರಾಫಿಕ್ ಪೊಲೀಸರಿಗೆ ಕಾರು ಡಿಕ್ಕಿ – ಓರ್ವ ಗಂಭೀರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಮತ್ತೆ ನಿರಂತರ ಕುಸಿತ

(ನ್ಯೂಸ್‌ ಕಡಬ) newskadaba.com,  ಮೇ27: ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ದರಗಳಲ್ಲಿ ನಿರಂತರ ಕುಸಿತವಾಗುತ್ತಿದ್ದು, ಗ್ರಾಹಕರಿಗೆ ಸಮಾಧಾನವಾಗಿದ್ದರೆ, ವರ್ತಕರಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟು ಶಮನಗೊಳ್ಳುವ ಪ್ರಯತ್ನದ ನಂತರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆಯಾಗಬಹುದು ಎಂಬ ನಿರೀಕ್ಷೆ ವರ್ತಕರಲ್ಲಿತ್ತು. ಆದರೆ, ಸತತ ಕುಸಿತವಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರಗಳಿಂದ ಸಂಕಷ್ಟ ಎದುರಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಂದು ವರ್ಷ ಚಿನ್ನ ಖರೀದಿ ಮುಂದೂಡುವಂತೆ ಕರೆ ನೀಡಿದ್ದಾರೆ. ಇದರ

ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಮತ್ತೆ ನಿರಂತರ ಕುಸಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗಂಗಾ ನದಿಯಲ್ಲಿ ದೋಣಿ ದುರಂತ – ಇಬ್ಬರ ಶವ ಪತ್ತೆ, ಹಲವರು ನಾಪತ್ತೆ

(ನ್ಯೂಸ್‌ ಕಡಬ) newskadaba.com,  ಮೇ27: ಬಿಹಾರದ ಪಾಟ್ನಾ ಸಮೀಪದ ಉಮಾನಾಥ್ ಗಂಗಾ ಘಾಟ್ ಬಳಿ ಭೀಕರ ದೋಣಿ ದುರಂತ ಸಂಭವಿಸಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಗಂಗಾ ನದಿಯಲ್ಲಿ ಸಣ್ಣ ದೋಣಿ ಪಲ್ಟಿಯಾದ ಪರಿಣಾಮ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮಾಹಿತಿಯ ಪ್ರಕಾರ, ದೋಣಿಯಲ್ಲಿ ಸುಮಾರು 14ರಿಂದ 15 ಮಂದಿ ಪ್ರಯಾಣಿಸುತ್ತಿದ್ದರು. ಬಲವಾದ ಗಾಳಿ ಮತ್ತು ನದಿಯ ಅಲೆಗಳ ಪರಿಣಾಮ ದೋಣಿ ನಿಯಂತ್ರಣ ತಪ್ಪಿ ಮುಳುಗಿದೆ ಎನ್ನಲಾಗಿದೆ. ಘಟನೆ ವೇಳೆ ಕೆಲವರನ್ನು ಸ್ಥಳೀಯರು ಮತ್ತು ಇನ್ನೊಂದು ದೋಣಿಯ ಸಹಾಯದಿಂದ

ಗಂಗಾ ನದಿಯಲ್ಲಿ ದೋಣಿ ದುರಂತ – ಇಬ್ಬರ ಶವ ಪತ್ತೆ, ಹಲವರು ನಾಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top