ನಮ್ಮ ದೇಶದಲ್ಲಿ ಒಂದು ಫೇರ್ ಆದ, ಯಾವುದೇ ರೀತಿಯ ಕಳ್ಳಾಟವಿಲ್ಲದ ಎಕ್ಸಾಮ್ ಮಾಡೋದು ಇಷ್ಟೊಂದು ಕಷ್ಟದ ಕೆಲಸನಾ? ಈ ಪ್ರಶ್ನೆ ಈಗ ಪ್ರತಿಯೊಬ್ಬರ ಮನಸ್ಸಲ್ಲೂ ಕಾಡ್ತಾ ಇದೆ. ಮೇ 3ರಂದು ನಡೆದಿದ್ದ ನೀಟ್-ಯುಜಿ ಮೆಡಿಕಲ್ ಎಂಟ್ರೆನ್ಸ್ ಎಕ್ಸಾಮ್ ಪೇಪರ್ ಲೀಕ್ ಆಗಿ, ಪರೀಕ್ಷೆ ರದ್ದಾಗಿ, ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ದೇಶಾದ್ಯಂತ ದೊಡ್ಡ ಮಟ್ಟದ ಪ್ರೊಟೆಸ್ಟ್ ಕೂಡ ನಡೀತು. ಇದರ ಬೆನ್ನಲ್ಲೇ ಈಗ ಜೂನ್ 21ಕ್ಕೆ NEET ಮರುಪರೀಕ್ಷೆ ನಡೆಸಲು ದಿನಾಂಕ ಫಿಕ್ಸ್ ಆಗಿದೆ. ಆದರೆ ಈ ಬಾರಿ ಪೇಪರ್ ಲೀಕ್ ಆಗದಂತೆ ತಡೆಯಲು ಕೇಂದ್ರ ಸರ್ಕಾರ ಏನೆಲ್ಲಾ ಮಾಡ್ತಿದೆ ಗೊತ್ತಾ? ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ.. ಸಾಕ್ಷಾತ್ ನಮ್ಮ ಡಿಫೆನ್ಸ್ ಫೋರ್ಸ್‌ಗಳನ್ನು ಬಳಸುತ್ತಿದೆ.. ದೇಶದ ಇತಿಹಾಸದಲ್ಲಿ ಪ್ರಶ್ನೆ ಪತ್ರಿಕೆಯ ಪೂರೈಕೆಗೆ ನಮ್ಮ ಸೇನೆಯನ್ನು ಇದೇ ಮೊದಲ ಬಾರಿಗೆ ಬಳಸಲಾಗುತ್ತಿದೆ. ಪ್ರಮುಖವಾಗಿ ಭಾರತೀಯ ವಾಯುಪಡೆಯನ್ನೇ ಪ್ರಶ್ನೆ ಪತ್ರಿಕೆ ಟ್ರಾನ್ಸ್‌ಪೋರ್ಟ್ ಮಾಡಲು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ! ಯೆಸ್.. ವೀಕ್ಷಕರೇ ನಂಬಲು ಅಸಾಧ್ಯವೆನಿಸಿದರು ಕೂಡ ಇದು ನಿಜ.. ಈ ಬಾರಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ವಾಯುಪಡೆಯ ವಿಮಾನಗಳು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಿವೆ.