ಕರಾವಳಿ

ಎಡಮಂಗಲ: ದಲಿತ ಮಹಿಳೆಯ ಮನೆ ಧ್ವಂಸ ಪ್ರಕರಣ ➤ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

(ನ್ಯೂಸ್ ಕಡಬ) newskadaba.com ಎಡಮಂಗಲ, ಮಾ. 26. ದಲಿತ ಮಹಿಳೆಯೋರ್ವರು ವಾಸಿಸುತ್ತಿದ್ದ ತಾತ್ಕಾಲಿಕ ಮನೆಯನ್ನು ಧ್ವಂಸ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮಾ. 03 ರಂದು ರವಿ ಶೆಟ್ಟಿ ಮತ್ತು ವಿದ್ಯಾ ಶೆಟ್ಟಿ ಹಾಗೂ ಮತ್ತಿಬ್ಬರು ಎಡಮಂಗಲ ಗ್ರಾಮದ ಕಜೆತ್ತಡ್ಕ ಎಂಬಲ್ಲಿ ಬಾಲಕಿ ಎಂಬವರು 20 ವರ್ಷಗಳಿಂದ ವಾಸಿಸುತ್ತಿದ್ದ ಮನೆಗೆ ಬಂದು ಅವಾಚ್ಯ […]

ಎಡಮಂಗಲ: ದಲಿತ ಮಹಿಳೆಯ ಮನೆ ಧ್ವಂಸ ಪ್ರಕರಣ ➤ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಬೆಳ್ಳಂಬೆಳಗ್ಗೆ ಕರ್ತವ್ಯದಲ್ಲಿದ್ದ ಎಸ್.ಐ ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ➤ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 26. ಕರ್ತವ್ಯ ನಿರತರಾಗಿದ್ದ ವಿಟ್ಲ ಎಸ್.ಐ ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲೆತ್ನಿಸಿದ ದುಷ್ಕರ್ಮಿಯನ್ನು ವಿಟ್ಲ ಪೋಲೀಸರು ಬಂಧಿಸಿದ ಘಟನೆ ವಿಟ್ಲ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಇಂದು ಮುಂಜಾನೆ ನಡೆದಿದೆ. ವಿಟ್ಲ ಸಮೀಪದ ಸಾಲೆತ್ತೂರು ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ವಿಟ್ಲ ಎಸ್ಐ ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿಗಳು ವಾಹನಗಳನ್ನು ತಡೆದು, ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಯೊರ್ವ ಎಸ್ಐ

ವಿಟ್ಲ: ಬೆಳ್ಳಂಬೆಳಗ್ಗೆ ಕರ್ತವ್ಯದಲ್ಲಿದ್ದ ಎಸ್.ಐ ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ➤ ಆರೋಪಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೈತಡ್ಕ: ತೂಫಾನ್ ಹಾಗೂ ಅಟೋ ರಿಕ್ಷಾ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಾಣಿಯೂರು, ಮಾ. 25. ತೂಫಾನ್ ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಕಾಣಿಯೂರು ಸಮೀಪದ ಬೈತ್ತಡ್ಕ ಎಂಬಲ್ಲಿ ಇಂದು ನಡೆದಿದೆ. ಈ ಘಟನೆಯಿಂದ ರಿಕ್ಷಾದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.  

ಬೈತಡ್ಕ: ತೂಫಾನ್ ಹಾಗೂ ಅಟೋ ರಿಕ್ಷಾ ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

?? ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡರ ಪುತ್ರನ ಮನೆಗೆ ನುಗ್ಗಿದ ಕಳ್ಳರು ➤ ಸುಮಾರು 75 ಪವನ್ ಹಾಗೂ ಐದು ಲಕ್ಷ ರೂ ನಗದು ಕಳವು

(ನ್ಯೂಸ್ ಕಡಬ) newskadaba.com ಕೊಣಾಜೆ, ಮಾ. 25. ಇಲ್ಲಿನ ಮಂಗಳೂರು ವಿವಿ ಕ್ಯಾಂಪಸ್ ಬಳಿಯಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದು ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.     ಹಿರಿಯ ಕಾಂಗ್ರೆಸ್ ಮುಖಂಡ ಕೋಡಿಜಾಲ್ ಇಬ್ರಾಹಿಂ ಅವರ ಪುತ್ರ ಹಬೀಬ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಹಬೀಬ್ ಹಾಗೂ ಅವರ ಕುಟುಂಬ ಮನೆಯೊಳಗೆ ಇದ್ದಾಗಲೇ ರಾತ್ರಿ ವೇಳೆ ಕಳ್ಳತನ ನಡೆಸಿದ್ದಾರೆ. ಮನೆಯ ಮಹಡಿಯ ಬಾಗಿಲು ಮುರಿದು ಒಳನುಗ್ಗಿರುವ

?? ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡರ ಪುತ್ರನ ಮನೆಗೆ ನುಗ್ಗಿದ ಕಳ್ಳರು ➤ ಸುಮಾರು 75 ಪವನ್ ಹಾಗೂ ಐದು ಲಕ್ಷ ರೂ ನಗದು ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಪುತ್ತೂರು: ಪೊಲೀಸ್ ಠಾಣೆಯ 50 ಮೀಟರ್ ಅಂತರದಲ್ಲಿರುವ 4 ಚಿನ್ನಾಭರಣಗಳ ಅಂಗಡಿಗಳಿಂದ ಕಳ್ಳತನ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 25. ಇಲ್ಲಿನ 4 ಚಿನ್ನಾಭರಣ ಮಳಿಗೆಗಳಿಗೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.     ಇಲ್ಲಿನ ಪೊಲೀಸ್ ಠಾಣೆಯ ಸಮೀಪವಿರುವ ಶ್ರೀಧರ್ ಭಟ್ ಅಂಗಡಿ, ಕೋರ್ಟ್ ರಸ್ತೆಯಲ್ಲಿನ ಶ್ರೀ ನವಮಿ ಜ್ಯುವೆಲ್ಲರ್ಸ್, ಕೋರ್ಟ್ ರಸ್ತೆಯಲ್ಲಿನ ಶೃತಿ ಜ್ಯುವೆಲ್ಲರ್ಸ್ ಮತ್ತು ಹಿರಣ್ಯ ಮೆಷಿನ್‌ ಕಟ್ಟಿಂಗ್ ಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

? ಪುತ್ತೂರು: ಪೊಲೀಸ್ ಠಾಣೆಯ 50 ಮೀಟರ್ ಅಂತರದಲ್ಲಿರುವ 4 ಚಿನ್ನಾಭರಣಗಳ ಅಂಗಡಿಗಳಿಂದ ಕಳ್ಳತನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಡಿವೈಡರ್ ಗೆ ಢಿಕ್ಕಿ ಹೊಡೆದು ಅಶೋಕ್ ಲೇಲ್ಯಾಂಡ್ ವಾಹನ ಪಲ್ಟಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 25. ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಘಟನೆ ರಾ.ಹೆ 66ರ ಕಲ್ಲಾಪುನಲ್ಲಿ ನಡೆದಿದೆ. ರಾ.ಹೆ. 66 ರ ಕಲ್ಲಾಪುವಿನ ಬ್ಲ್ಯಾಕ್ ಷುಗರ್ ಕೆಫೆ ಮುಂಭಾಗದಲ್ಲಿ ಬುಧವಾರದಂದು ಸಂಜೆ ಅಶೋಕ್ ಲೇಲ್ಯಾಂಡ್ ಲೈನ್ ಸೇಲ್ ನ ಪಿಕ್ ಅಪ್ ವಾಹನ ಪಲ್ಟಿ ಹೊಡೆದಿದೆ. ಘಟನೆಯಿಂದ ವಾಹನದಲ್ಲಿದ್ದ ಚಾಲಕ ಮತ್ತು ಸಹ ಪ್ರಯಾಣಿಕ ಅದೃಷ್ಟವಶಾತ್

ಮಂಗಳೂರು: ಡಿವೈಡರ್ ಗೆ ಢಿಕ್ಕಿ ಹೊಡೆದು ಅಶೋಕ್ ಲೇಲ್ಯಾಂಡ್ ವಾಹನ ಪಲ್ಟಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಏ. 08 ರಂದು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಕೆಮ್ಮಾರ ಇದರ ಪ್ರಥಮ ಸನದುದಾನ ಹಾಗೂ ಏಕದಿನ ಮತ ಪ್ರಭಾಷಣ

(ನ್ಯೂಸ್ ಕಡಬ) newskadaba.com ಆತೂರು, ಮಾ. 25. ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಕೆಮ್ಮಾರ, ಇದರ ಪ್ರಥಮ ಸನದುದಾನ ಹಾಗೂ ಏಕದಿನ ಮತ ಪ್ರಭಾಷಣವು ಎಪ್ರಿಲ್ 08 ರಂದು ನಡೆಯಲಿದೆ.     ಇದರ ಮುಖ್ಯ ಪ್ರಭಾಷಣವನ್ನು ಅದ್ಬುತ ಬಾಲಕ ಖ್ಯಾತ ವಾಗ್ಮಿ ಹಾಗು ವಾಫೀ ಕಾಲೇಜು ವಿದ್ಯಾರ್ಥಿ ಅಲ್-ಹಾಫಿಳ್ ಅಬ್ದುಲ್ ಮುನೀಮ್ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ, ಮೊಹಮ್ಮದ್ ಜುನೈದ್ ಜಿಫ್ರೀ ತಂಙಳ್ ಆತೂರ್, ಅನಸ್ ತಂಙಳ್ ಕರ್ವೇಲು ಹಾಗೂ

ಏ. 08 ರಂದು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಕೆಮ್ಮಾರ ಇದರ ಪ್ರಥಮ ಸನದುದಾನ ಹಾಗೂ ಏಕದಿನ ಮತ ಪ್ರಭಾಷಣ Read More »

ಕರಾವಳಿ, ಕರ್ನಾಟಕ

ಕಡಬ: ಅರಣ್ಯಾಧಿಕಾರಿಗಳಿಂದ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಆರೋಪ ➤ ಕಡಬ ಠಾಣೆಯಲ್ಲಿ 9 ಮಂದಿ ಹಾಗೂ ಇತರರ ವಿರುದ್ದ ಕೇಸ್ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಮಾ. 25. ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎಂಬವರ ಮನೆಗೆ ಮಾ.3ರಂದು ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಅರಣ್ಯಾಧಿಕಾರಿಗಳು ಹಾಗೂ ಇತರರು ದಾಳಿಯ ನೆಪದಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ 9 ಮಂದಿ ಹಾಗೂ ಇತರ 12 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಮಂಗಳೂರು ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂಧ್ಯಾ, ಸುಬ್ರಹ್ಮಣ್ಯ ವಲಯಾಣ್ಯಾಧಿಕಾರಿ ರಾಘವೇಂದ್ರ, ಫಾರೆಸ್ಟರ್ ಸಂತೋಷ್, ಪ್ರಕಾಶ್, ಬೀಟ್ ಫಾರೆಸ್ಟರ್

ಕಡಬ: ಅರಣ್ಯಾಧಿಕಾರಿಗಳಿಂದ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಆರೋಪ ➤ ಕಡಬ ಠಾಣೆಯಲ್ಲಿ 9 ಮಂದಿ ಹಾಗೂ ಇತರರ ವಿರುದ್ದ ಕೇಸ್ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಖಾಸಗಿ ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ ➤ ಲಾರಿ ಚಾಲಕ ಸಜೀವ ದಹನ | ವಾಹನಗಳೆರಡೂ ಸುಟ್ಟು ಭಸ್ಮ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.25. ಕಂಟೇನರ್ ಲಾರಿ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿ ಬೆಂಕಿಯುಂಟಾದ ಪರಿಣಾಮ ಲಾರಿ ಚಾಲಕ ಸಜೀವ ದಹನಗೊಂಡಿದ್ದು, ಬಸ್ ಸಂಪೂರ್ಣ ಭಸ್ಮಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಲಾರಿ ನಡುವೆ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಲಾರಿಗೆ ಬೆಂಕಿ

ಖಾಸಗಿ ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ ➤ ಲಾರಿ ಚಾಲಕ ಸಜೀವ ದಹನ | ವಾಹನಗಳೆರಡೂ ಸುಟ್ಟು ಭಸ್ಮ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ: ಕಾಡಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 24. ಧರ್ಮಸ್ಥಳದ ಬಾಹುಬಲಿ ಬೆಟ್ಟದ ಹಿಂಭಾಗದ ಕಾಡೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹವು ಪತ್ತೆಯಾಗಿದೆ.   ಬಾಹುಬಲಿ ಬೆಟ್ಟದ ಹಿಂಭಾಗದ ಕಾಡಿನಲ್ಲಿ ವಾಸನೆ ಬರುತ್ತಾ ಇದೆ ಎಂದು ಯಾತ್ರಾರ್ಥಿಗಳು ನೀಡಿದ ಮಾಹಿತಿಯಂತೆ ಕ್ಷೇತ್ರದ ಮಾಹಿತಿ ಕಚೇರಿಯ ಮೇಲ್ವಿಚಾರಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸುಮಾರು 60-65 ವರ್ಷದ ಅಪರಿಚಿತ ಹೆಂಗಸಿನ ಮೃತದೇಹವೊಂದು ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್

ಧರ್ಮಸ್ಥಳ: ಕಾಡಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top