ಕರಾವಳಿ

ಬೆಳ್ತಂಗಡಿ: ಸರಕಾರಿ ಬಸ್ಸುಗಳ ಕೊರತೆ ನೀಗಿಸಲು ಸಂಚಾರಿ ನಿಯಂತ್ರಕರಿಗೆ (TC) ಸಿಎಫ್ಐ ವತಿಯಿಂದ ಮನವಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 24. ತಾಲೂಕಿನಾದ್ಯಂತ ವಿವಿಧ ಪ್ರದೇಶಗಳಿಗೆ ಸಂಚರಿಸುವ ಬಸ್ಸುಗಳಲ್ಲಿ ಪ್ರಮುಖವಾಗಿ ವೇಣೂರು, ಮೂಡಬಿದ್ರೆ, ಕಾರ್ಕಳ ಭಾಗದಿಂದ ಬರುವಂತಹ ವಿದ್ಯಾರ್ಥಿಗಳು ಖಾಸಗಿ ಬಸ್ಸುಗಳಲ್ಲಿ ನೇತಾಡುತ್ತಾ ತುಂಬಾ ಸಂಕಷ್ಟದಿಂದ ಹೋಗುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳು ತರಗತಿಗೆ ಮತ್ತು ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ತಲುಪಲು ತೊಂದರೆ ಉಂಟಾಗುತ್ತಿದೆ. ಖಾಸಗಿ ಬಸ್ಸುಗಳ ನಿರ್ವಾಹಕರು ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಲೆಕ್ಕಕ್ಕಿಂತ ಹೆಚ್ಚು ಹತ್ತಿಸಿ ಬೇಜವಾಬ್ದಾರಿ ತೋರಿರುವುದರಿಂದ ಅಪಾಯಕಾರಿ ಸಂಭವಗಳು ಉಂಟಾಗಿರುವುದು, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ […]

ಬೆಳ್ತಂಗಡಿ: ಸರಕಾರಿ ಬಸ್ಸುಗಳ ಕೊರತೆ ನೀಗಿಸಲು ಸಂಚಾರಿ ನಿಯಂತ್ರಕರಿಗೆ (TC) ಸಿಎಫ್ಐ ವತಿಯಿಂದ ಮನವಿ Read More »

ಕರಾವಳಿ, ಕರ್ನಾಟಕ

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕಡಬದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.24. ಬೈಕೊಂದು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕಡಬದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಯುವಕನನ್ನು ಕಡಬ ತಾಲೂಕಿನ ಮರ್ಧಾಳ ಸಮೀಪದ ಕೆರ್ಮಾಯಿ ನಿವಾಸಿ ಸನು ಅಬ್ರಹಾಂ (21) ಎಂದು ಗುರುತಿಸಲಾಗಿದೆ. ಸನು ಅಬ್ರಹಾಂ ಚಲಾಯಿಸುತ್ತಿದ್ದ ಯಮಹಾ ಯಂಟಿ ಬೈಕ್ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ರಾತ್ರಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕಡಬದ ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಬೈಕ್ ಅಪಘಾತ ➤ ಕಡಬದ ಯುವಕ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.24. ಬೈಕೊಂದು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಡಬದ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಂಭೀರ ಗಾಯಗೊಂಡಿರುವ ಯುವಕನನ್ನು ಕಡಬ ತಾಲೂಕಿನ ಮರ್ಧಾಳ ಸಮೀಪದ ಕೆರ್ಮಾಯಿ ನಿವಾಸಿ ಸನು ಅಬ್ರಹಾಂ (21) ಎಂದು ಗುರುತಿಸಲಾಗಿದೆ. ಸನು ಅಬ್ರಹಾಂ ಚಲಾಯಿಸುತ್ತಿದ್ದ ಯಮಹಾ ಯಂಟಿ ಬೈಕ್ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿರುವ ಸನು ಅಬ್ರಹಾಂ ಇದೀಗ

ಮಂಗಳೂರಿನಲ್ಲಿ ಬೈಕ್ ಅಪಘಾತ ➤ ಕಡಬದ ಯುವಕ ಗಂಭೀರ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನಾ ಎರಡನೇ ಅಲೆ ಹಿನ್ನೆಲೆ ➤ ಮುಂಜಾಗ್ರತಾ ಕ್ರಮ ಪಾಲಿಸದವರ ವಿರುದ್ಧ ಕಾನೂನು ಕ್ರಮ- ಕಡಬ ತಹಶೀಲ್ದಾರ್ ಅನಂತ್ ಶಂಕರ್

(ನ್ಯೂಸ್ ಕಡಬ) newskadaba.com ಕಡಬ, ಮಾ. 24.‌ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಮುಂಜಾಗೃತಾ ಕ್ರಮ ಪಾಲಿಸದ ಮತ್ತು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಡಬ ತಾಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕಡಬ ಪೇಟೆಯಲ್ಲಿ ಆಯೋಜಿಸಿದ್ದ ಕೊರೋನಾ ಜನಜಾಗೃತಿ ಜಾಥಾದಲ್ಲಿ ಕಡಬ ತಹಶೀಲ್ದಾರ್ ಅನಂತ ಶಂಕರ್ ಎಚ್ಚರಿಕೆ ನೀಡಿದ್ದಾರೆ.   ಬಳಿಕ ತಾ.ಪಂ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಮಾತನಾಡಿ, ಮುಂಜಾಗೃತಾ ಕ್ರಮಗಳನ್ನು ಪಾಲಿಸುವ ಮೂಲಕ

ಕೊರೋನಾ ಎರಡನೇ ಅಲೆ ಹಿನ್ನೆಲೆ ➤ ಮುಂಜಾಗ್ರತಾ ಕ್ರಮ ಪಾಲಿಸದವರ ವಿರುದ್ಧ ಕಾನೂನು ಕ್ರಮ- ಕಡಬ ತಹಶೀಲ್ದಾರ್ ಅನಂತ್ ಶಂಕರ್ Read More »

ಕರಾವಳಿ, ಕರ್ನಾಟಕ

? ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಜೀವನ್ಮರಣ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 24. 10 ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಳ್ತಂಗಡಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತಳನ್ನು ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ದೇವಗಿರಿ ನಿವಾಸಿ ಬಿಜು ಎಂಬವರ ಮಗಳು ವಿನ್ಸಿ (20 ) ಎಂದು ಗುರುತಿಸಲಾಗಿದೆ. ಈಕೆ ಮಾ .14 ರಂದು ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿ, ತೀವ್ರ ಅಸ್ವಸ್ಥಗೊಂಡಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಈಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ

? ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಜೀವನ್ಮರಣ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಾಸ್ಕ್ ಧರಿಸದೆ ಇನ್ಮುಂದೆ ಯಾರೂ ಮನೆಯಿಂದ ಹೊರ ಬರಬೇಡಿ ➤ ದ.ಕ ಜಿಲ್ಲಾಧಿಕಾರಿ ಖಡಕ್ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 23. ಇನ್ಮುಂದೆ ಮಾಸ್ಕ್ ಧಾರಣೆ ಕಡ್ಡಾಯ, ನಿಯಮ ಮೀರಿದ್ದಲ್ಲಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ತೀವಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಕೊರೊನಾ 2ನೇ ಅಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗ್ತಿದೆ. ಇವತ್ತು ಸಾಂಕೇತಿಕವಾಗಿ ಡಿಸಿ, ಡಿಸಿಪಿ, ಆರೋಗ್ಯಾಧಿಕಾರಿ ಮೂಲಕ ಮಾಸ್ಕ್ ಕಾರ್ಯಾಚರಣೆ ಮಾಡಲಾಗಿದ್ದು, ಮಂಗಳೂರು ನಗರದಲ್ಲಿ ಮಾಸ್ಕ್ ಧರಿಸದವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಮಾಸ್ಕ್ ಧರಿಸದೆ ಇನ್ಮುಂದೆ ಯಾರೂ ಮನೆಯಿಂದ ಹೊರ ಬರಬೇಡಿ ➤ ದ.ಕ ಜಿಲ್ಲಾಧಿಕಾರಿ ಖಡಕ್ ಆದೇಶ Read More »

ಕರಾವಳಿ, ಕರ್ನಾಟಕ

ವೈಯಕ್ತಿಕ ಪೂರ್ವದ್ವೇಷದ ಹಿನ್ನೆಲೆ ➤ ಐವರ ತಂಡದಿಂದ ಮೂವರ ಕೊಲೆಯತ್ನ- ಆರೋಪಿಗಳಿಗಾಗಿ ಶೋಧ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 23. ವೈಯಕ್ತಿಕ ದ್ವೇಷದ ಹಿನ್ನೆಲೆ ಐದು ಮಂದಿಯ ತಂಡವೊಂದು ಮೂವರ ಕೊಲೆಗೆ ಯತ್ನಿಸಿದ ಘಟನೆ ಮೂಡಬಿದಿರೆ ತಾಲೂಕಿನ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಗಂಟಾಲ್ಕಟ್ಟೆ ಎಂಬಲ್ಲಿನ ಗೋವುಗುಡ್ಡೆ ನಿವಾಸಿ ಶಬೀರ್, ಮಹಮ್ಮದ್ ಅನ್ಸಾರ್ ಮತ್ತು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಅದೇ ಪರಿಸರದ ಸಾಹುಲ್, ಫಾರೂಕ್, ಜಲೀಲ್, ಇಬ್ರಾನ್ ಹಾಗೂ ಶಾಫಿ ಎಂಬವರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ವೈಯಕ್ತಿಕ ಪೂರ್ವದ್ವೇಷದ ಹಿನ್ನೆಲೆ ➤ ಐವರ ತಂಡದಿಂದ ಮೂವರ ಕೊಲೆಯತ್ನ- ಆರೋಪಿಗಳಿಗಾಗಿ ಶೋಧ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಶ್ವ ಜಲ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 23. ವಿಶ್ವ ಜಲ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲೆಯ ಮಡಂತ್ಯಾರ್ ಯುನಿಟ್ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ ಮಾಡಲಾಯಿತು. ಭಿತ್ತಿ ಪತ್ರಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಮತ್ತು ಅವಶ್ಯಕತೆಗಳ ಕುರಿತು ಘೋಷಣೆಗಳನ್ನು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯರಾದ ಸದಾಫ್ ಬೆಳ್ತಂಗಡಿ ಹಾಗೂ ಮಡಂತ್ಯಾರ್ ಯುನಿಟ್ ನಾಯಕರು ಉಪಸ್ಥಿತರಿದ್ಧರು.

ವಿಶ್ವ ಜಲ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ Read More »

ಕರಾವಳಿ, ಕರ್ನಾಟಕ

ಬೆಳಂದೂರು, ಪಳ್ಳತ್ತಾರು ಪರಿಸರದಲ್ಲಿ ನಿರಂತರ ಕಳ್ಳತನದ ಹಿನ್ನೆಲೆ ➤ ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ

(ನ್ಯೂಸ್ ಕಡಬ) newskadaba.com ಬೆಳಂದೂರು, ಮಾ. 23. ಬೆಳಂದೂರು ಹಾಗೂ ಪಳ್ಳತ್ತಾರು ಭಾಗದ ಪರಿಸರದಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿದ್ದು, ಇದರಿಂದಾಗಿ ಬರೆಪ್ಪಾಡಿ – ಪಳ್ಳತ್ತಾರು ಮಾರ್ಗವಾಗಿ ಬೆಳಂದೂರು ತನಕ ದಾರಿದೀಪ ಅಳವಡಿಸುವಂತೆ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷರವರಿಗೆ ಮನವಿ ನೀಡಲಾಯಿತು.   ಈ ಸಂದರ್ಭದಲ್ಲಿ ನಝೀರ್ ದೇವಸ್ಯ, ನವಾಝ್ ಸಖಾಫಿ, ಹಮೀದ್ ಸಖಾಫಿ, ಜಲೀಲ್ ಪಳ್ಳತ್ತಾರು, ಹಮೀದ್ ಪಳ್ಳತ್ತಾರು, ರಝಾಕ್ ಬನಾರಿ, ಸಾದಿಕ್ ಮೊದಲಾದವರು ಉಪಸ್ಥಿತರಿದ್ದರು.

ಬೆಳಂದೂರು, ಪಳ್ಳತ್ತಾರು ಪರಿಸರದಲ್ಲಿ ನಿರಂತರ ಕಳ್ಳತನದ ಹಿನ್ನೆಲೆ ➤ ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ Read More »

ಕರಾವಳಿ, ಕರ್ನಾಟಕ

ರಾಜ್ಯದಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ➤ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ ಕಡಬ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಮಾ. 22. ರಾಜ್ಯದಾದ್ಯಂತ ಕೊರೋನಾ ಆತಂಕ ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಮಾಸ್ಕ್ ಧರಿಸದೇ ದಿನನಿತ್ಯ ಓಡಾಡುತ್ತಿರುವ ಹಿನ್ನೆಲೆ ಇದೀಗ ಕಡಬ ಎಸ್.ಐ ರುಕ್ಮ ನಾಯಕ್ ನೇತೃತ್ವದ ತಂಡವು ಫೀಲ್ಡ್ ಗೆ ಇಳಿದಿದ್ದಾರೆ. ಕಡಬದ ಮುಖ್ಯ ಪೇಟೆಯ ಸಹಿತ ವಿವಿಧೆಡೆ ಇರುವ ಅಂಗಡಿಗಳಿಗೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಲ್ಲದೇ ಮಾಸ್ಕ್ ಹಾಕದೇ ಓಡಾಡುವವರಿಗೆ ದಂಡ ಹಾಕುವ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ.

ರಾಜ್ಯದಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ➤ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ ಕಡಬ ಪೊಲೀಸರು Read More »

ಕರಾವಳಿ, ಕರ್ನಾಟಕ
Scroll to Top