ಧರ್ಮಸ್ಥಳ: ಕಾಡಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 24. ಧರ್ಮಸ್ಥಳದ ಬಾಹುಬಲಿ ಬೆಟ್ಟದ ಹಿಂಭಾಗದ ಕಾಡೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹವು ಪತ್ತೆಯಾಗಿದೆ.

 

ಬಾಹುಬಲಿ ಬೆಟ್ಟದ ಹಿಂಭಾಗದ ಕಾಡಿನಲ್ಲಿ ವಾಸನೆ ಬರುತ್ತಾ ಇದೆ ಎಂದು ಯಾತ್ರಾರ್ಥಿಗಳು ನೀಡಿದ ಮಾಹಿತಿಯಂತೆ ಕ್ಷೇತ್ರದ ಮಾಹಿತಿ ಕಚೇರಿಯ ಮೇಲ್ವಿಚಾರಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸುಮಾರು 60-65 ವರ್ಷದ ಅಪರಿಚಿತ ಹೆಂಗಸಿನ ಮೃತದೇಹವೊಂದು ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top