ಮಂಗಳೂರು: ಡಿವೈಡರ್ ಗೆ ಢಿಕ್ಕಿ ಹೊಡೆದು ಅಶೋಕ್ ಲೇಲ್ಯಾಂಡ್ ವಾಹನ ಪಲ್ಟಿ ➤ ಇಬ್ಬರಿಗೆ ಗಾಯ



(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 25. ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಘಟನೆ ರಾ.ಹೆ 66ರ ಕಲ್ಲಾಪುನಲ್ಲಿ ನಡೆದಿದೆ.







ರಾ.ಹೆ. 66 ರ ಕಲ್ಲಾಪುವಿನ ಬ್ಲ್ಯಾಕ್ ಷುಗರ್ ಕೆಫೆ ಮುಂಭಾಗದಲ್ಲಿ ಬುಧವಾರದಂದು ಸಂಜೆ ಅಶೋಕ್ ಲೇಲ್ಯಾಂಡ್ ಲೈನ್ ಸೇಲ್ ನ ಪಿಕ್ ಅಪ್ ವಾಹನ ಪಲ್ಟಿ ಹೊಡೆದಿದೆ. ಘಟನೆಯಿಂದ ವಾಹನದಲ್ಲಿದ್ದ ಚಾಲಕ ಮತ್ತು ಸಹ ಪ್ರಯಾಣಿಕ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top