ಸಿಡಿಲು ಬಡಿದು ಯುವಕರಿಬ್ಬರು ಮೃತ್ಯು
(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ನ. 02. ಸಿಡಿಲು ಬಡಿದು ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಕಂಚಿಬೈಲು ಬಳಿ ನಡೆದಿದೆ. ಮೃತಪಟ್ಟವರನ್ನು ಯಶವಂತ(22) ಮತ್ತು ಮಣಿ ಪ್ರಸಾದ್(22) ಎಂದು ಗುರುತಿಸಲಾಗಿದೆ. ಕಂಚಿಬೈಲು ನಿವಾಸಿಗಳಾದ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ಯರಗುಂಡಿ ಫಾಲ್ಸ್ ಗೆಂದು ತೆರಳಿದ್ದ ಐವರ ಪೈಕಿ ಇಬ್ಬರು ಸಿಡಿಲು ಬಡಿದು ಮೃತರಾಗಿದ್ದಾರೆ. ಜೊತೆಗಿದ್ದ ಗಣೇಶ್, ಸಂದೀಪ್ ಹಾಗೂ ಪ್ರವೀಣ್ ಎಂಬವರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಅವರನ್ನು ಮೂಡಬಿದರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ಯುವಕರಿಬ್ಬರು ಮೃತ್ಯು Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್







