ಕರಾವಳಿ

ಸುಬ್ರಹ್ಮಣ್ಯ: ಕುಮಾರದಾರ ನದಿಗೆ‌ ಹಾರಲೆತ್ನಿಸಿದ ವೃದ್ದ ➤ ರಕ್ಷಿಸಿದ ಬಜರಂಗದಳ ಕಾರ್ಯಕರ್ತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ. 03. ಹಾಸನ ಮೂಲದ ವೃದ್ದನೋರ್ವ ಕುಮಾರಧಾರ ನದಿಗೆ ಹಾರಲು ಯತ್ನಿಸಿದ ಘಟನೆ ನಡೆದಿದೆ. ವೃದ್ದನೋರ್ವ ಕುಮಾರದಾರ ನದಿಯ ಸೇತುವೆ ಮೇಲಿಂದ ಹಾರಲು ಪ್ರಯತ್ನಿಸುತ್ತಿದ್ದನ್ನು ಕಂಡ ಬಜರಂಗಳದ ಕಾರ್ಯಕರ್ತ ಸುನಿಲ್ ಸುಬ್ರಹ್ಮಣ್ಯ ಎಂಬವರು ವೃದ್ಧರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ವೃದ್ಧರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಸುಬ್ರಹ್ಮಣ್ಯ: ಕುಮಾರದಾರ ನದಿಗೆ‌ ಹಾರಲೆತ್ನಿಸಿದ ವೃದ್ದ ➤ ರಕ್ಷಿಸಿದ ಬಜರಂಗದಳ ಕಾರ್ಯಕರ್ತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಇಚಿಲಂಪಾಡಿ: ಕಾಡಾನೆ ಪ್ರತ್ಯಕ್ಷ ➤ ಹೆದರಿ ಆನೆ ಸಮೀಪವೇ ಬೈಕ್ ಬಿದ್ದು ಜೀವಭಯದಿಂದ ಓಡಿದ ಯುವಕರು…!

(ನ್ಯೂಸ್ ಕಡಬ) newskadaba.com ಪೆರಿಯಶಾಂತಿ, ನ. 03. ರಸ್ತೆ ಬದಿಯಲ್ಲಿ ಕಾಡಾನೆಯೊಂದು ಏಕಾಏಕಿ ಪ್ರತ್ಯಕ್ಷಗೊಂಡಿದ್ದು, ಬೈಕ್ ಸವಾರರಿಬ್ಬರು ಪಾರಾದ ಘಟನೆ ಇಚಿಲಂಪಾಡಿ ಎಂಬಲ್ಲಿ ನಡೆದಿದೆ. ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ್ಕ ನಿವಾಸಿ ಧರ್ಮಪಾಲ ಹಾಗೂ ರಮೇಶ್ ಎಂಬವರು ಕೊಕ್ಕಡದ ಸಂಬಂಧಿಕರ ಮನೆಗೆಂದು ಇಚಿಲಂಪಾಡಿ ಮೂಲಕ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ರಸ್ತೆ ದಾಟಿದ್ದು, ದಿಕ್ಕು ತೋಚದ ಬೈಕ್ ಸವಾರ ಹಠಾತ್ ಬ್ರೇಕ್ ಹಾಕಿದ ಕಾರಣ ಕಾಡಾನೆಯ ಪಕ್ಕವೇ ಬೈಕ್ ಮಗುಚಿ ಬಿದ್ದು ಸವಾರ ಮತ್ತು ಸಹ ಸವಾರ

ಇಚಿಲಂಪಾಡಿ: ಕಾಡಾನೆ ಪ್ರತ್ಯಕ್ಷ ➤ ಹೆದರಿ ಆನೆ ಸಮೀಪವೇ ಬೈಕ್ ಬಿದ್ದು ಜೀವಭಯದಿಂದ ಓಡಿದ ಯುವಕರು…! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ವಸತಿ ಗೃಹವೊಂದರಲ್ಲಿ ಅನ್ಯಕೋಮಿನ ಜೋಡಿ‌ ಪತ್ತೆ ➤ ಪೊಲೀಸರಿಗೊಪ್ಪಿಸಿದ ಹಿಂಜಾವೇ ಕಾರ್ಯಕರ್ತರು

(ನ್ಯೂಸ್ ಕಡಬ) Newskadaba.com ಪುತ್ತೂರು, ನ. 03. ಇಲ್ಲಿನ ಬಸ್ ನಿಲ್ದಾಣದಲ್ಲಿ ಅನ್ಯಕೋಮಿನ ವ್ಯಕ್ತಿಯ ಜೊತೆ ಬೆಂಗಳೂರು ಮೂಲದ ಯುವತಿಯೋರ್ವಳು ಪತ್ತೆಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಬೆಂಗಳೂರಿನ ವಾಸಿಂ ಹಾಗೂ ಕುಂದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಯುವತಿಯ ನಡುವೆ ಪ್ರೇಮಾಂಕುರವಾಗಿ ಆಕೆ ಆತನೊಂದಿಗೆ ಮನೆ ಬಿಟ್ಟು ಬಂದಿದ್ದಾಳೆ ಎನ್ನಲಾಗಿದೆ. ವಾಸಿಂಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎನ್ನಲಾಗಿದೆ. ಯುವತಿ ಕಾಣೆಯಾದ ಬಗ್ಗೆ ಯುವತಿಯ ಮನೆಯವರಿಗೆ ತಲಿಸಿದ್ದು, ಈ ಕುರಿತು ಅವರು ಬೆಂಗಳೂರಿನಲ್ಲಿ ಕಾಣೆಯಾದ ಬಗ್ಗೆ

ಪುತ್ತೂರು: ವಸತಿ ಗೃಹವೊಂದರಲ್ಲಿ ಅನ್ಯಕೋಮಿನ ಜೋಡಿ‌ ಪತ್ತೆ ➤ ಪೊಲೀಸರಿಗೊಪ್ಪಿಸಿದ ಹಿಂಜಾವೇ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: 2021-22ರ ಕಂಬಳದ ಅಂತಿಮ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 02. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆಯುವ 19 ಕಂಬಳದ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ನಡೆಯಲಿದ್ದು, ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ. ಕಂಬಳದ ಅಂತಿಮ ವೇಳಾಪಟ್ಟಿ ಕೆಳಗಿನಂತಿವೆ:- ನವೆಂಬರ್ 27 ಶನಿವಾರ ಮೂಡಬಿದಿರೆ, ಡಿಸೆಂಬರ್ 5 ಭಾನುವಾರ ಹೊಕ್ಕಾಡಿಗೋಳಿ, ಡಿಸೆಂಬರ್ 11 ಶನಿವಾರ ಸುರತ್ಕಲ್,

ಮಂಗಳೂರು: 2021-22ರ ಕಂಬಳದ ಅಂತಿಮ ವೇಳಾಪಟ್ಟಿ ಪ್ರಕಟ Read More »

ಕರಾವಳಿ, ಕರ್ನಾಟಕ

ತೆಂಗಿನಮರದಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ನ. 02. ತೆಂಗಿನಕಾಯಿ ಕೀಳಲು ತೆಂಗಿನ ಮರವೇರಿದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಪಳ್ಳಿ ಗ್ರಾಮದ ಮಹಾಕಾಳಿ ಮಠದಲ್ಲಿ ನಡೆದಿದೆ. ಮೃತರನ್ನು ಮಹಾಕಾಳಿ ಮಠ ನಿವಾಸಿ ನಿತ್ಯಾನಂದ ಪ್ರಭು (41) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ತೆಂಗಿನ ಮರಕ್ಕೆ ತೆಂಗಿನಕಾಯಿ ಕೊಯ್ಯಲೆಂದು ಹತ್ತಿದವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತೆಂಗಿನಮರದಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಾಣಿ ಕಾಲೇಜು ವಿದ್ಯಾರ್ಥಿಯ ಡಿಬಾರ್ ಪ್ರಕರಣ ➤ ಸಂಘಟನೆ ಹೆಸರು ದುರ್ಬಳಕೆ ಮಾಡಿದ ಪ್ರಾಂಶುಪಾಲರ ನಡೆಗೆ ಪಾಪ್ಯುಲರ್ ಫ್ರಂಟ್ ಖಂಡನೆ ➤➤ ದೂರು ದಾಖಲಿಸಲು ನಿರ್ಧಾರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 02. ಇಲ್ಲಿನ ವಾಣಿ ಕಾಲೇಜಿನ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲರು ಮಾಧ್ಯಮಕ್ಕೆ ಮಾಹಿತಿ ನೀಡುವ ವೇಳೆ ಪಿಎಫ್ಐ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿ ಪೂರ್ವಾಗ್ರಹಪೀಡಿತರಾಗಿ ವರ್ತಿಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿ.ಕೆ ತೀವ್ರವಾಗಿ ಖಂಡಿಸಿದ್ದಾರೆ. ಈ ಮಧ್ಯೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂಬ ವಿದ್ಯಾರ್ಥಿ ಸಂಘಟನೆಯಲ್ಲಿ ಸದಸ್ಯತ್ವ ಪಡೆದಿದ್ದಾನೆ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಡಿಬಾರ್ ಮಾಡಿರುವುದು ಸಂವಿಧಾನ ವಿರೋಧಿ.

ವಾಣಿ ಕಾಲೇಜು ವಿದ್ಯಾರ್ಥಿಯ ಡಿಬಾರ್ ಪ್ರಕರಣ ➤ ಸಂಘಟನೆ ಹೆಸರು ದುರ್ಬಳಕೆ ಮಾಡಿದ ಪ್ರಾಂಶುಪಾಲರ ನಡೆಗೆ ಪಾಪ್ಯುಲರ್ ಫ್ರಂಟ್ ಖಂಡನೆ ➤➤ ದೂರು ದಾಖಲಿಸಲು ನಿರ್ಧಾರ Read More »

ಕರಾವಳಿ, ಕರ್ನಾಟಕ

ಎಸ್ ವೈಎಸ್ ಮಾಣಿ ವತಿಯಿಂದ ಬೃಹತ್ ಮಾದರಿ ಮೌಲಿದ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಾಣಿ, ನ. 02. ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ಮಾಣಿ ಸೆಂಟರ್ ವತಿಯಿಂದ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ (ಸ.ಅ.) ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಬೃಹತ್ ಮಾದರಿ ಮೌಲಿದ್ ಮಜ್ಲಿಸ್ ಸೋಮವಾರದಂದು ಮಾಣಿ ದಾರುಲ್ ಇರ್ಶಾದ್ ಸಮುಚ್ಚಯದ ರಹ್ಮಾನಿಯಾ ಜುಮಾ ಮಸ್ಜಿದ್ ನಲ್ಲಿ ನಡೆಯಿತು. ಅಸ್ಸಯ್ಯಿದ್ ಹಂಝ ಹಾದಿ ತಂಙಲ್ ಪಾಟ್ರಕೋಡಿರವರು ದುಆಃ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಖಾಝಿ

ಎಸ್ ವೈಎಸ್ ಮಾಣಿ ವತಿಯಿಂದ ಬೃಹತ್ ಮಾದರಿ ಮೌಲಿದ್ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ 12 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 02. ಮನೆಯಲ್ಲಿ ಯಾರೂ ಇಲ್ಲದ್ದ ಸಂದರ್ಭವನ್ನು ಖಚಿತಪಡಿಸಿಕೊಂಡ ಕಳ್ಳರ ತಂಡವೊಂದು ಹಗಲು ಹೊತ್ತಿನಲ್ಲೇ ಮಹಮ್ಮದ್ ಎಂಬವರ ಮನೆಯೊಂದಕ್ಕೆ ನುಗ್ಗಿ ಲಾಕರ್ ಒಡೆದು ಅಪಾರ ಪ್ರಮಾಣದ ಚಿನ್ನಾಭರಣ ಕಳವುಗೈದ ಘಟನೆ ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಎಂಬಲ್ಲಿ ನಡೆದಿದೆ. ಭಾನುವಾರದಂದು ಮನೆಯವರೆಲ್ಲ ನಿಶ್ಚಿತಾರ್ಥಕ್ಕೆ ತೆರಳಿದ್ದು, ಮಹಮ್ಮದ್ ರವರು ಸಮೀಪದ ಅಡಿಕೆ ತೋಟಕ್ಕೆ ಹೋಗಿದ್ದರು. ನಿಶ್ಚಿತಾರ್ಥ ಮುಗಿಸಿಕೊಂಡು ಪತ್ನಿ ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. 5,200ರೂ ನಗದು,

ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ 12 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ನೆಲಕ್ಕೆ ಬಿದ್ದ ಕೋವಿಯಿಂದ ಆಕಸ್ಮಿಕವಾಗಿ ಹಾರಿದ ಗುಂಡು..! ➤ ವ್ಯಕ್ತಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 02. ಕೋವಿಯೊಂದು ನೆಲಕ್ಕೆ ಬಿದ್ದ ಸಂದರ್ಭ ಆಕಸ್ಮತ್ತಾಗಿ ಗುಂಡು ಸಿಡಿದು ವ್ಯಕ್ತಿಯೋರ್ವರ ಕಾಲಿಗೆ ತಾಗಿರುವ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮಾಯಿಲೋಡಿ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕುಮಾರಯ್ಯ ನಾಯ್ಕ ಎಂದು ಗುರುತಿಸಲಾಗಿದೆ. ಮಾಯಿಲೋಡಿಯ ವಿಶ್ವನಾಥ ನಾಯ್ಕ್ ಎಂಬವರು ತನ್ನ ಜಮೀನಿಗೆ ಬರುವ ಕಾಡುಪ್ರಾಣಿಗಳನ್ನು ಓಡಿಸಲೆಂದು ಪರವಾನಿಗೆ ಹೊಂದಿರುವ ಕೋವಿಯನ್ನು ಉಪಯೋಗಿಸುವ ಸಂದರ್ಭದಲ್ಲಿ ಅಜಾಗರೂಕತೆ ತೋರಿದ ಪರಿಣಾಮ ಕೋವಿ ನೆಲಕ್ಕೆ ಬಿದ್ದು ಆಕಸ್ಮಿಕವಾಗಿ ಗುಂಡು ಸಿಡಿದು ಪಕ್ಕದಲ್ಲಿ ನಿಂತಿದ್ದ ಕುಮಾರಯ್ಯ ನಾಯ್ಕ

ಬೆಳ್ತಂಗಡಿ: ನೆಲಕ್ಕೆ ಬಿದ್ದ ಕೋವಿಯಿಂದ ಆಕಸ್ಮಿಕವಾಗಿ ಹಾರಿದ ಗುಂಡು..! ➤ ವ್ಯಕ್ತಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಸ್ ವೈಎಸ್ ಕಡಬ ಸೆಂಟರ್ ಪುನರ್ ರಚನೆ ➤ ಅಧ್ಯಕ್ಷರಾಗಿ ಉಮರ್ ಮುಸ್ಲಿಯಾರ್ ಮರ್ಧಾಳ, ಕಾರ್ಯದರ್ಶಿಯಾಗಿ ಬಶೀರ್ ಚೆನ್ನಾರ್ ಪುನರಾಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ. 02. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ರಿ.) ಎಸ್‌ವೈಎಸ್ ಕಡಬ ಸೆಂಟರ್‌ ಇದರ ಪುನರ್ ರಚನಾ ಸಭೆಯು ಸೋಮವಾರದಂದು ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಿತು. ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು ದುಆ ನೆರೆವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಸೆಂಟರ್ ಅಧ್ಯಕ್ಷರಾದ ಉಮರ್ ಮುಸ್ಲಿಯಾರ್ ಮರ್ಧಾಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾದ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರ್ ಉದ್ಘಾಟಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಚೆನ್ನಾರ್ ರವರು ವರದಿ ವಾಚಿಸಿದರು. ಕೋಶಾಧಿಕಾರಿ

ಎಸ್ ವೈಎಸ್ ಕಡಬ ಸೆಂಟರ್ ಪುನರ್ ರಚನೆ ➤ ಅಧ್ಯಕ್ಷರಾಗಿ ಉಮರ್ ಮುಸ್ಲಿಯಾರ್ ಮರ್ಧಾಳ, ಕಾರ್ಯದರ್ಶಿಯಾಗಿ ಬಶೀರ್ ಚೆನ್ನಾರ್ ಪುನರಾಯ್ಕೆ Read More »

ಕರಾವಳಿ, ಕರ್ನಾಟಕ
Scroll to Top