ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ 12 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 02. ಮನೆಯಲ್ಲಿ ಯಾರೂ ಇಲ್ಲದ್ದ ಸಂದರ್ಭವನ್ನು ಖಚಿತಪಡಿಸಿಕೊಂಡ ಕಳ್ಳರ ತಂಡವೊಂದು ಹಗಲು ಹೊತ್ತಿನಲ್ಲೇ ಮಹಮ್ಮದ್ ಎಂಬವರ ಮನೆಯೊಂದಕ್ಕೆ ನುಗ್ಗಿ ಲಾಕರ್ ಒಡೆದು ಅಪಾರ ಪ್ರಮಾಣದ ಚಿನ್ನಾಭರಣ ಕಳವುಗೈದ ಘಟನೆ ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಎಂಬಲ್ಲಿ ನಡೆದಿದೆ.


ಭಾನುವಾರದಂದು ಮನೆಯವರೆಲ್ಲ ನಿಶ್ಚಿತಾರ್ಥಕ್ಕೆ ತೆರಳಿದ್ದು, ಮಹಮ್ಮದ್ ರವರು ಸಮೀಪದ ಅಡಿಕೆ ತೋಟಕ್ಕೆ ಹೋಗಿದ್ದರು. ನಿಶ್ಚಿತಾರ್ಥ ಮುಗಿಸಿಕೊಂಡು ಪತ್ನಿ ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. 5,200ರೂ ನಗದು, ನೆಕ್ಲೇಸ್ ಚೈನ್, ಚಿನ್ನದ ಬಿಸ್ಕೆಟ್, ಬಳೆ, ಮಕ್ಕಳ ಅಭರಣ ಸಹಿತ ಒಟ್ಟಾರೆ ರೂ. 12,05,200 ಮೌಲ್ಯದ 40 ಪವನ್ ಚಿನ್ನಾಭರಣ ಕಳವುಗೈದಿದ್ದಾರೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top