ತೆಂಗಿನಮರದಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ನ. 02. ತೆಂಗಿನಕಾಯಿ ಕೀಳಲು ತೆಂಗಿನ ಮರವೇರಿದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಪಳ್ಳಿ ಗ್ರಾಮದ ಮಹಾಕಾಳಿ ಮಠದಲ್ಲಿ ನಡೆದಿದೆ.


ಮೃತರನ್ನು ಮಹಾಕಾಳಿ ಮಠ ನಿವಾಸಿ ನಿತ್ಯಾನಂದ ಪ್ರಭು (41) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ತೆಂಗಿನ ಮರಕ್ಕೆ ತೆಂಗಿನಕಾಯಿ ಕೊಯ್ಯಲೆಂದು ಹತ್ತಿದವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top