ಅರಂತೋಡು: ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ

(ನ್ಯೂಸ್ ಕಡಬ) Newskadaba.com ನ. 01. ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ನೂತನ ಪ್ರಯಾಣಿಕರ ತಂಗುದಾಣದ ಉದ್ಘಾಟನೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀ ಮತಿ ಹರಿಣಿ ದೇರಾಜೆಯವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ಗಂಗಾಧರ ಬನ, ಶ್ರೀಮತಿ ಸರಸ್ವತಿ, ಪ್ರಮುಖರಾದ ಜಯಪ್ರಕಾಶ್ ದೇರಾಜೆ, ಶಿವ ನೆಕ್ಕಿಲ, ಕೆ.ಪಿ.ಕುಸುಮಾಧರ, ಗೋಪಾಲ ಮಾಡದಕಾನ, ಅಬ್ದುಲ್ಲಾ ಮಾವಿನಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Scroll to Top