ಕರಾವಳಿ

ವಿಮಾನ ಅಪಘಾತದಲ್ಲಿ ಮಡಿದವರಿಗೆ ಮೇ 22 ರಂದು ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 21. 2010 ರ ಮೇ ತಿಂಗಳಿನಲ್ಲಿ ಬಜ್ಜೆ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತವಾದ ಹಿನ್ನಲೆಯಲ್ಲಿ, ಜಿಲ್ಲಾಡಳಿತವು ಮಡಿದವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜರಗಿಸುತ್ತಾ ಬಂದಿದ್ದು, ವಿಮಾನ ಅಪಘಾತದಲ್ಲಿ ಮರಣ ಹೊಂದಿ ಗುರುತಿಸಲಾಗದ 12 ಮಂದಿಯ ಮೃತದೇಹಗಳನ್ನು ಸಮಾಧಿ ಮಾಡಿದ ಜಾಗದಲ್ಲಿ ವಿಮಾನ ಅಪಘಾತದಲ್ಲಿ ಮಡಿದ 158 ಜನರ ನೆನಪಿಗಾಗಿ ಕೂಳೂರು ಸೇತುವೆಯಿಂದ ತಣ್ಣೀರು ಬಾವಿ ರಸ್ತೆಗೆ ತಿರುಗುವಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿರುತ್ತದೆ. ಪ್ರತೀ ವರ್ಷದಂತೆ […]

ವಿಮಾನ ಅಪಘಾತದಲ್ಲಿ ಮಡಿದವರಿಗೆ ಮೇ 22 ರಂದು ಶ್ರದ್ಧಾಂಜಲಿ Read More »

ಕರಾವಳಿ

ಮಳೆಗಾಲದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 21. ದಕ್ಷಿಣ ಕನ್ನಡ ಜಿಲ್ಲೆಯ ಟೆರಿಟೋರಿಯಲ್ ವಾಟರ್ಸ್ (12 ನಾಟಿಕಲ್ ಮೈಲ್ ವರೆಗಿನ) ಭಾಗದಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರವರೆಗೆ (ಉಭಯ ದಿನಗಳು ಸೇರಿ) ಒಟ್ಟು 61 ದಿನಗಳ ನಿಷೇಧವನ್ನು ಹೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.

ಮಳೆಗಾಲದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧ Read More »

ಕರಾವಳಿ

ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 21. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾತಿ/ಪ.ವರ್ಗದ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ 2026-27ನೇ ಸಾಲಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ: ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ- ರೂ. 2.50 ಲಕ್ಷ ಮತ್ತು ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ

ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ Read More »

ಕರಾವಳಿ

ರೇಷ್ಮೆ ಬೆಳೆ : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ- ಸಚಿವ ವೆಂಕಟೇಶ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 21. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯನ್ನು ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ತಿಳಿಸಿದ್ದಾರೆ. ಅವರು ಬುಧವಾರದಂದು ರೇಷ್ಮೆ ಇಲಾಖೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಟ್ಲದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು. 30 ವರ್ಷಗಳ ಹಿಂದಿನವರೆಗೂ ಕರಾವಳಿ ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಪ್ರಸ್ತುತ ಈ

ರೇಷ್ಮೆ ಬೆಳೆ : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ- ಸಚಿವ ವೆಂಕಟೇಶ್ Read More »

ಕರಾವಳಿ

ಕರಾವಳಿ ಮೀನುಗಾರರಿಗೆ ಎಚ್ಚರಿಕೆ: ಮೇ 25 ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ

(ನ್ಯೂಸ್‌ ಕಡಬ) newskadaba.com,ಮೇ.20: ಅರಬ್ಬಿ ಸಮುದ್ರದಲ್ಲಿ ಭಾರಿ ಬಿರುಗಾಳಿ ಸಹಿತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಮೇ 20 ರಿಂದ ಮೇ 25 ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯದ ತುರ್ತು ಪ್ರತಿಕ್ರಿಯೆ ನಿಯಂತ್ರಣ ಕೊಠಡಿ (ಐಸಿಆರ್-ಇಆರ್) ಎಚ್ಚರಿಕೆ ನೀಡಿದೆ. ಮೇ 20 ರಿಂದ ಮೇ 22 ರವರೆಗೆ, ಕರ್ನಾಟಕ ಮತ್ತು ಕೇರಳ ಕರಾವಳಿಗಳು, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದಲ್ಲಿ ಗಂಟೆಗೆ 40

ಕರಾವಳಿ ಮೀನುಗಾರರಿಗೆ ಎಚ್ಚರಿಕೆ: ಮೇ 25 ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ-ಕಾಲೇಜು ತೆರೆಯಲು 8 ಎಕರೆ ಜಾಗ ಖರೀದಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ಆರೋಪಿ

(ನ್ಯೂಸ್‌ ಕಡಬ) newskadaba.com,ಮೇ.20: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ (ಆರ್‍ಸಿಸಿ) ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ 8 ಎಕರೆ ಜಾಗದಲ್ಲಿ ಶಾಲೆ ಹಾಗೂ ಕಾಲೇಜು ಆರಂಭಿಸಲು ಮುಂದಾಗಿದ್ದ ವಿಚಾರ ಬಹಿರಂಗವಾಗಿದೆ.. ಸಿಬಿಐ ಬಂಧನದ ಬಳಿಕ ಮೋಟೆಗಾಂವ್ಕರ್ ಆಸ್ತಿ ಹಾಗೂ ಹಣದ ಮೂಲದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿವೆ. ಮೋಟೆಗಾಂವ್ಕರ್ ನಡೆಸುತ್ತಿದ್ದ ಆರ್‍ಸಿಸಿ ಕೋಚಿಂಗ್ ಸಂಸ್ಥೆ ಮಹಾರಾಷ್ಟ್ರದ ಸುತ್ತಲೂ ಜನಪ್ರಿಯತೆ ಪಡೆದಿದ್ದು, ಲಾತೂರ್ ಸೇರಿ ಒಟ್ಟು 9 ಶಾಖೆಗಳಿವೆ. ಈ ಸಂಸ್ಥೆಯ ಮೂಲಕ

ಶಾಲಾ-ಕಾಲೇಜು ತೆರೆಯಲು 8 ಎಕರೆ ಜಾಗ ಖರೀದಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ಆರೋಪಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗೂಗಲ್ ನಿಂದ ಮೊದಲ ಸ್ಮಾರ್ಟ್ ಗ್ಲಾಸ್ ಬಿಡುಗಡೆ ಸಜ್ಜು

(ನ್ಯೂಸ್‌ ಕಡಬ) newskadaba.com, ಮೇ.20 : ಸಿದ್ಧ ಗೂಗಲ್ ಗ್ಲಾಸ್ ವೈಫಲ್ಯದ ಒಂದು ದಶಕದ ನಂತರ, ಗೂಗಲ್ ಸ್ಮಾರ್ಟ್ ಕನ್ನಡಕಗಳೊಂದಿಗೆ ಮತ್ತೆ ಪ್ರಯತ್ನಿಸಲಿದೆ.ಕನ್ನಡಕಗಳು ಶರತ್ಕಾಲದಲ್ಲಿ ಮಾರಾಟಕ್ಕೆ ಬರುತ್ತವೆ ಮತ್ತು ಫ್ರೇಮ್ ಗಳಲ್ಲಿ ಸಣ್ಣ ಕ್ಯಾಮೆರಾ ಮತ್ತು ತೋಳುಗಳಲ್ಲಿ ಸಣ್ಣ ಸ್ಪೀಕರ್ ಗಳನ್ನು ಹೊಂದಿರುತ್ತವೆ. ಇದು ಗೂಗಲ್ ನ ಕೃತಕ ಬುದ್ಧಿಮತ್ತೆ (ಎಐ) ಉತ್ಪನ್ನ ಜೆಮಿನಿ ಬಳಕೆದಾರರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಗೂಗಲ್ ಮಂಗಳವಾರ ತನ್ನ ವಾರ್ಷಿಕ ಡೆವಲಪರ್ ಸಮ್ಮೇಳನದಲ್ಲಿ ಮೊದಲ ಬಾರಿಗೆ ಕನ್ನಡಕವನ್ನು ಬಹಿರಂಗಪಡಿಸಿತು. ಗೂಗಲ್ ಗ್ಲಾಸ್

ಗೂಗಲ್ ನಿಂದ ಮೊದಲ ಸ್ಮಾರ್ಟ್ ಗ್ಲಾಸ್ ಬಿಡುಗಡೆ ಸಜ್ಜು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾಂಗ್ಲಾದೇಶದ ಸರ್ಕಾರಿ ಕಚೇರಿಯಲ್ಲಿ ಭಾರತದ ಅಧಿಕಾರಿ ನಿಗೂಢ ಮೃತ್ಯು

(ನ್ಯೂಸ್‌ ಕಡಬ) newskadaba.com, ಮೇ.20 : ಭಾರತದ ಅಧಿಕಾರಿಯೊಬ್ಬರು ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿರುವ ಭಾರತದ ಸಹಾಯಕ ಹೈಕಮಿಷನ್ ಕಚೇರಿ ಆವರಣದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.ನರೇಂದ್ರ ಧಾರ್(35) ಎಂಬ ಭಾರತೀಯ ಅಧಿಕಾರಿ ಬಾಂಗ್ಲಾದೇಶದ ಸರ್ಕಾರಿ ಕಚೇರಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನರೇಂದ್ರ ಧಾರ್ ಅವರು ಹರ್ಯಾಣ ಮೂಲದವರಾಗಿದ್ದು, ಚಟ್ಟೋಗ್ರಾಮಿನ ಖುಲ್ಶಿ ಪ್ರದೇಶದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್‌ನಲ್ಲಿ ಪ್ರೋಟೋಕಾಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ಬೆಳಿಗ್ಗೆ ತಮ್ಮ ಕೊಠಡಿಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಮಿಷನ್

ಬಾಂಗ್ಲಾದೇಶದ ಸರ್ಕಾರಿ ಕಚೇರಿಯಲ್ಲಿ ಭಾರತದ ಅಧಿಕಾರಿ ನಿಗೂಢ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಮೇ.20: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಏಳು ಜನರ ತಂಡವೊಂದು ಈಜಲು ತೆರಳಿದ್ದ ವೇಳೆ, ಬೆಳ್ತಂಗಡಿ ತಾಲೂಕಿನ ಪಜಿರಡ್ಕ ದೇವಸ್ಥಾನದ ಸಮೀಪದ ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಈ ದುರ್ಘಟನೆ ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಸಂಭವಿಸಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ. ಇವರು ಉಜಿರೆಯ ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ಇಂಜಿನಿಯರಿಂಗ್

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

Meta: ಇಂದು 8,000 ಮೆಟಾ ಉದ್ಯೋಗಿಗಳಿಗೆ ಗೇಟ್‌ಪಾಸ್‌! AI ಗಾಗಿ ಭಾರಿ ಉದ್ಯೋಗ ಕಡಿತ!

(ನ್ಯೂಸ್‌ ಕಡಬ) newskadaba.com,  ಮೇ.20: ಟೆಕ್‌ ಲೋಕದಲ್ಲಿ ಮತ್ತೆ ಉದ್ಯೋಗ ಕಡಿತದ ವೇವ್ ಶುರುವಾಗಿದೆ. ಸಾಮಾಜಿಕ ಜಾಲತಾಣ ದಿಗ್ಗಜ ಮೆಟಾ, ಇಂದು ಸುಮಾರು 8 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ ಎಂಬ ವರದಿಗಳು ಭಾರೀ ಚರ್ಚೆಗೆ ಕಾರಣವಾಗಿವೆ. Meta 78 ಸಾವಿರ ಉದ್ಯೋಗಿಗಳಲ್ಲಿ ಶೇ.10ರಷ್ಟು ಹೊರಗೆ! ಮೆಟಾದ ಒಟ್ಟು 78 ಸಾವಿರ ಸಿಬ್ಬಂದಿಯಲ್ಲಿ ಸುಮಾರು ಶೇ.10ರಷ್ಟು ಜನರಿಗೆ ಗೇಟ್‌ಪಾಸ್‌ ನೀಡಲಾಗುತ್ತಿದೆ. ಕಂಪನಿಯ ಪುನರ್‌ವ್ಯವಸ್ಥೆ ಹಾಗೂ ವೆಚ್ಚ ಕಡಿತದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.  

Meta: ಇಂದು 8,000 ಮೆಟಾ ಉದ್ಯೋಗಿಗಳಿಗೆ ಗೇಟ್‌ಪಾಸ್‌! AI ಗಾಗಿ ಭಾರಿ ಉದ್ಯೋಗ ಕಡಿತ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top