(ನ್ಯೂಸ್ ಕಡಬ) newskadaba.com, ಜೂ.09 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ: ಜೂನ್ 10..ಕೊನೆಯ ದಿನಾಂಕ: ಜುಲೈ 3ಒಟ್ಟು 3,991 ಹುದ್ದೆಗಳಲ್ಲಿ, 596 ಹುದ್ದೆಗಳು ಕಲ್ಯಾಣ ಕರ್ನಾಟಕ ಹಾಗೂ 3,395 ಹುದ್ದೆಗಳು ಉಳಿಕೆ ಮೂಲ ವೃಂದಕ್ಕೆ ಮೀಸಲಾಗಿವೆ.ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಒಳಮೀಸಲಾತಿ ಅನ್ವಯ (ಎಸ್ಸಿ-ಎ, ಎಸ್ಸಿ-ಬಿ, ಎಸ್ಸಿ-ಸಿ) ಜಾತಿ ಪ್ರಮಾಣಪತ್ರಗಳ RD ಸಂಖ್ಯೆ ನಮೂದಿಸುವುದು ಕಡ್ಡಾಯ.
ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಮೀಸಲಾತಿ ಕೋರುವವರು ಅಗತ್ಯ ಪ್ರಮಾಣಪತ್ರ ಹೊಂದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗ್ರಾಮೀಣ ಕೋಟಾ ಪಡೆಯಲು ನಾನ್-ಕ್ರೀಮಿಲೇಯರ್ ಸರ್ಟಿಫಿಕೇಟ್ ಹೊಂದಿರುವುದು ಕಡ್ಡಾಯ. ಅಪ್‌ಲೋಡ್ ಮಾಡುವ ಅಭ್ಯರ್ಥಿಯ ಭಾವಚಿತ್ರದ ಗಾತ್ರ 50 KB ಒಳಗೆ ಇರಬೇಕು.









