ಕಡಬ: ಯುವತಿ ನಾಪತ್ತೆ



(ನ್ಯೂಸ್ ಕಡಬ) newskadaba.com ಜೂ. 08. ಕಡಬ ತಾಲೂಕಿನ  ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಅರ್ ಪೈನ್ ಮೆಹತಾಬ್ (18) ಎಂಬವರು ಜೂನ್ 7 ರಂದು ಮನೆಯಿಂದ ಹೋದವರು ಕಾಣೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ : ಎತ್ತರ: 162 ಸೆಂ ಮೀ, ಕಪ್ಪು ಬಣ್ಣದ ತಲೆ ಕೂದಲು, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಾಣೆಯಾದ ದಿನ ನೀಲಿ ಬಣ್ಣದ ಸೀರೆ, ನೀಲಿ ಬಣ್ಣದ ಬ್ಲೌಸ್ ಧರಿಸಿದ್ದರು. ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಡಬ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







error: Content is protected !!
Scroll to Top