ಕ್ರೈಮ್ ನ್ಯೂಸ್

ಮಂಗಳೂರು: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ➤ ದ್ವಿಚಕ್ರ ವಾಹನ ಸವಾರನಿಗೆ ಗಾಯ

(ನ್ಯೂಸ್ ಕಡಬ) Newskadaba.com ಮಂಗಳೂರು, ಮೇ‌. 27. ನಿಯಂತ್ರಣ ತಪ್ಪಿದ ಕಾರೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಕೆಳಕ್ಕೆ ಉರುಳಿಬಿದ್ದ ಘಟನೆ ಪಂಪ್‌ವೆಲ್ ಫ್ಲೈಓವರ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಪರಿಣಾಮ ದ್ವಿಚಕ್ರ ಸವಾರನಿಗೆ ಗಂಭೀರ ಗಾಯಗಳಾಗಿವೆ. ನಗರದ ಗೋರಿಗುಡ್ಡ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ […]

ಮಂಗಳೂರು: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ➤ ದ್ವಿಚಕ್ರ ವಾಹನ ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಮೊಮ್ಮಕ್ಕಳಿಗೆ ಮಾವಿನಕಾಯಿ ಕೊಯ್ದುಕೊಟ್ಟ ಹಿನ್ನೆಲೆ ➤ ಅತ್ತೆಯ ಮೇಲೆಯೇ ಮೆಣಸಿನಹುಡಿ ಮಿಶ್ರಿತ ಬಿಸಿನೀರು ಎರಚಿದ ಪಾಪಿ ಸೊಸೆ..

(ನ್ಯೂಸ್ ಕಡಬ) Newskadaba.com ಸುಳ್ಯ, ಮೇ‌ 27. ತನ್ನ ಮೊಮ್ಮಕ್ಕಳಿಗೆ ಮಾವಿನಕಾಯಿ ಕೊಯ್ದುಕೊಟ್ಟರು ಎಂಬ ನೆಪದಲ್ಲಿ ಕೋಪಗೊಂಡ ಸೊಸೆಯೋರ್ವಳು ತನ್ನ ಅತ್ತೆಯ ಮೇಲೆಯೇ ಮೆಣಸಿನ ಹುಡಿ ಮಿಶ್ರಿತ ಬಿಸಿನೀರನ್ನು ಎರಚಿದ ಅಮಾನವೀಯ ಘಟನೆ ಸುಳ್ಯದ ಪೈಚಾರ್ ಎಂಬಲ್ಲಿ ನಡೆದಿದೆ. ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಎಂಬಾಕೆ ಈ ಕೃತ್ಯ ಎಸಗಿದ್ದಾರೆ. ಈಕೆ ಅತ್ತೆಯ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿನೀರು ಎರಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ. 26ರ ಬುಧವಾರದಂದು

ಸುಳ್ಯ: ಮೊಮ್ಮಕ್ಕಳಿಗೆ ಮಾವಿನಕಾಯಿ ಕೊಯ್ದುಕೊಟ್ಟ ಹಿನ್ನೆಲೆ ➤ ಅತ್ತೆಯ ಮೇಲೆಯೇ ಮೆಣಸಿನಹುಡಿ ಮಿಶ್ರಿತ ಬಿಸಿನೀರು ಎರಚಿದ ಪಾಪಿ ಸೊಸೆ.. Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮುಲ್ಕಿ: ಫೇಸ್‍ಬುಕ್ ಖಾತೆಯಲ್ಲಿ ಇಸ್ರೇಲ್ ಪರ ಸಂದೇಶ ಹಾಕಿದ್ದ ಹಿನ್ನೆಲೆ ➤ ಬೇಕರಿ ಮಾಲಿಕನ ಮೇಲೆ ಹಲ್ಲೆ

(ನ್ಯೂಸ್ ಕಡಬ) Newskadaba.com ಮಲ್ಕಿ, ಮೇ. 26. ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರವಾಗಿ ಸಂದೇಶವನ್ನು ಹಾಕಿದ್ದ ಎಂಬ ಕಾರಣಕ್ಕೆ ಬೇಕರಿಯಲ್ಲಿ ದಾಂಧಲೆ ನಡೆಸಿದ್ದಲ್ಲದೇ ಬೇಕರಿ ಮಾಲೀಕನಿಗೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಕಾರ್ನಾಡಿನಲ್ಲಿ ಐಶಾನಿ ಎಂಬ ಹೆಸರಿನ ಬೇಕರಿ ನಡೆಸುತ್ತಿರುವ ಕುಂದಾಪುರ ಮೂಲದ ಸುರತ್ಕಲ್ ನಿವಾಸಿ ಯುವಕ ಫೇಸ್‌ಬುಕ್‌ ಖಾತೆಯಲ್ಲಿ, ಇಸ್ರೇಲ್ ಘಟನೆ ಬಗ್ಗೆ ಸಂದೇಶ ಹಾಕಿ ಪ್ಯಾಲೆಸ್ತೀನ್ ಉಗ್ರರ ವಿರುದ್ಧ ಕೈಗೊಂಡ ಕ್ರಮವನ್ನು ಬೆಂಬಲಿಸಿದ್ದರು. ಈ ಕುರಿತು ಆಕ್ರೋಶಗೊಂಡ ಯುವಕರು

ಮುಲ್ಕಿ: ಫೇಸ್‍ಬುಕ್ ಖಾತೆಯಲ್ಲಿ ಇಸ್ರೇಲ್ ಪರ ಸಂದೇಶ ಹಾಕಿದ್ದ ಹಿನ್ನೆಲೆ ➤ ಬೇಕರಿ ಮಾಲಿಕನ ಮೇಲೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ಖ್ಯಾತ ಯೋಗಪಟು ಆದಿತ್ಯ ಬೆಳ್ಳಾರೆ ಕೊರೋನಾಗೆ ಬಲಿ

(ನ್ಯೂಸ್ ಕಡಬ) Newskadaba.com ಬೆಳ್ಳಾರೆ, ಮೇ. 26. ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ, ಹೆಸರಾಂತ ಯೋಗಪಟು ಆದಿತ್ಯ ಬೆಳ್ಳಾರೆ(52) ರವರು ಕೆಲ ಸಮಯದ ಅಸೌಖ್ಯದಿಂದ ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.   ಕೆಲದಿನಗಳ ಹಿಂದೆ ಅಸೌಖ್ಯಕ್ಕೊಳಗಾಗಿದ್ದ ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ

ಬೆಳ್ಳಾರೆ: ಖ್ಯಾತ ಯೋಗಪಟು ಆದಿತ್ಯ ಬೆಳ್ಳಾರೆ ಕೊರೋನಾಗೆ ಬಲಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಾರ್ಮಾಡಿ ಹೊಳೆಯಲ್ಲಿ ಏಕಾಏಕಿ ಉಕ್ಕಿಹರಿದ ನೆರೆ ➤ ಮುಳುಗಿದ ಪಿಕಪ್ ವಾಹನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ. 25. ಇಲ್ಲಿನ ಚಾರ್ಮಾಡಿ ಬಳಿಯ ಮೃತ್ಯುಂಜಯ ನದಿಯಲ್ಲಿ ಒಮ್ಮಿಂದೊಮ್ಮೆಲೇ ನೆರೆನೀರು ಉಕ್ಕಿ ಹರಿದ ಪರಿಣಾಮ ಪಿಕಪ್ ವಾಹನವೊಂದು ನೀರಿನಲ್ಲಿ ಮುಳುಗಿದ ಘಟನೆ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ. ಪಿಕಪ್ ವಾಹನವು ಹೊಳೆಯನ್ನು ದಾಟುತ್ತಿದ್ದ ವೇಳೆ ನೆರೆನೀರು ಉಕ್ಕಿ ಬಂದಿದ್ದು, ತಕ್ಷಣವೇ ಅದರಲ್ಲಿದ್ದ ಚಾಲಕ ಸದಾನಂದ ಎಂಬವರನ್ನು ಸ್ಥಳೀಯರು ಸೇರಿ ರಕ್ಷಿಸಲಾಗಿದೆ. ಬಳಿಕ ಪಿಕಪ್ ವಾಹನಕ್ಕೆ ಹಗ್ಗ ಕಟ್ಟಿ ನಿಧಾನಕ್ಕೆ ಎಳೆದು

ಚಾರ್ಮಾಡಿ ಹೊಳೆಯಲ್ಲಿ ಏಕಾಏಕಿ ಉಕ್ಕಿಹರಿದ ನೆರೆ ➤ ಮುಳುಗಿದ ಪಿಕಪ್ ವಾಹನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಅಕ್ರಮ ಜೂಜಾಟ ➤ ಮಾಜಿ ಜಿ.ಪಂ ಸದಸ್ಯ ಸೇರಿ 10 ಮಂದಿಯ ಬಂಧನ

(ನ್ಯೂಸ್ ಕಡಬ) Newskadaba.com ಸುಳ್ಯ, ಮೇ. 24. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಜೂಜಾಟದಲ್ಲಿ ನಿರತರಾಗಿದ್ದ ಮಾಜಿ ಜಿ.ಪಂ. ಸದಸ್ಯನ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿದ‌ ಘಟನೆ ಎಲಿಮಲೆ‌ಸಮೀಪದ ನೆಲ್ಲೂರು ಕೆಮ್ರಾಜೆಯ ಮೋಂಟಡ್ಕ ಎಂಬಲ್ಲಿ ನಡೆದಿದೆ. ಬಂಧಿತರನ್ನು ಮಾಜಿ ಜಿಪಂ ಸದಸ್ಯ ಗಂಗಾಧರ ಕೇಪಳಕಜೆ, ಗೋಪಾಲಕೃಷ್ಣ, ಗಂಗಾಧರ, ಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್, ಮೋಹನದಾಸ್, ಅಶೋಕ, ದಯಾನಂದ ಬಂಧಿತರು. ಆರೋಪಿಗಳು ಮೇ. 23ರಂದು ಜೂಜಾಟದಲ್ಲಿ ನಿರತರಾಗಿದ್ದ ವೇಳೆ ಕರ್ತವ್ಯದಲ್ಲಿದ್ದ ಸುಳ್ಯ ಎಸ್

ಸುಳ್ಯ: ಅಕ್ರಮ ಜೂಜಾಟ ➤ ಮಾಜಿ ಜಿ.ಪಂ ಸದಸ್ಯ ಸೇರಿ 10 ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ➤ ಆರೋಪಿ ಗೋಣಿಬೀಡು ಪೊಲೀಸ್ ಠಾಣಾ ಎಸ್ಐ ಅಮಾನತು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23. ದಲಿತ ಯುವಕನೋರ್ವನನ್ನು ಕಾನೂನು ಬಾಹಿರವಾಗಿ ಬಂಧಿಸಿ ಮೂತ್ರ ಕುಡಿಸಿರುವ ಅಮಾನವೀಯ ಘಟನೆಯು ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋಣಿಬೀಡು ಠಾಣಾ ಎಸ್ಐ ಅರ್ಜುನ್ ಹೊರಕೇರಿಯವರನ್ನು ಅಮಾನತು ಮಾಡಲಾಗಿದೆ. ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಆರೋಪಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಶಿಸ್ತು ಕ್ರಮ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಿದ್ದು, ಪ್ರಕರಣದ ಕುರಿತು ವಿವರವಾದ ಪ್ರಾಥಮಿಕ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಗಾನಕುಮಾರಿಯವರಿಗೆ

ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ➤ ಆರೋಪಿ ಗೋಣಿಬೀಡು ಪೊಲೀಸ್ ಠಾಣಾ ಎಸ್ಐ ಅಮಾನತು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಜೆಪಿ ಮುಖಂಡ ಭಾಸ್ಕರ ಗೌಡ ಇಚಿಲಂಪಾಡಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ➤ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ವಂಚಕರು

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಬಿಜೆಪಿ ಮುಖಂಡ, ಪುತ್ತೂರು ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್. ಗೌಡ ಇಚ್ಲಂಪಾಡಿಯವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ ಹಲವರಲ್ಲಿ ಹಣದ ಬೇಡಿಕೆ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಡಬ ತಾಲೂಕು ಇಚ್ಲಂಪಾಡಿ ನಿವಾಸಿ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಭಾಸ್ಕರ ಎಸ್.ಗೌಡರವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಕಿಡಿಗೇಡಿಗಳು ಹಲವು ಮಂದಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ ತುರ್ತು

ಬಿಜೆಪಿ ಮುಖಂಡ ಭಾಸ್ಕರ ಗೌಡ ಇಚಿಲಂಪಾಡಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ➤ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ವಂಚಕರು Read More »

ಕರಾವಳಿ, ಕ್ರೈಮ್ ನ್ಯೂಸ್

ನೆಲ್ಯಾಡಿ: ವ್ಯಾಕ್ಸಿನ್ ಸಾಗಾಟದ ಸುಮೋ – ಲಾರಿ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.17. ವ್ಯಾಕ್ಸಿನ್ ಸಾಗಾಟದ ಟಾಟಾ ಸುಮೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯ ಧರ್ಮಸ್ಥಳ ತಿರುವಿನಲ್ಲಿ ಸೋಮವಾರದಂದು ನಡೆದಿದೆ. ಸರಕಾರಿ ಟಾಟಾ ಸುಮೋ ವಾಹನದಲ್ಲಿ ಕೊರೋನಾ ವ್ಯಾಕ್ಸಿನ್ ಸಾಗಾಟ ಮಾಡಲಾಗುತ್ತಿದ್ದ ವೇಳೆ ಧರ್ಮಸ್ಥಳ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಟಾಟಾ ಸುಮೋ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ

ನೆಲ್ಯಾಡಿ: ವ್ಯಾಕ್ಸಿನ್ ಸಾಗಾಟದ ಸುಮೋ – ಲಾರಿ ನಡುವೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್

ನರಿಮೊಗರು: ಮಳೆಗೆ ಕುಸಿದ ಮನೆಯ ಕಾಂಪೌಂಡ್ ➤ ಮನೆ ಕುಸಿತದ ಭೀತಿಯಲ್ಲಿ ಕುಟುಂಬ

(ನ್ಯೂಸ್ ಕಡಬ) Newskadaba.com ನರಿಮೊಗರು, ಮೇ. 16. ತೌಕ್ತೆ ಚಂಡಮಾರುತದಿಂದಾಗಿ ಕರಾವಳಿಯಾದ್ಯಂತ ಭಾರೀ ಮಳೆ ಸುರಿದಿದ್ದು, ಪರಿಣಾಮ ಮುಂಡೂರು ಗ್ರಾಮದ ಕಾಳಿಂಗಹಿತ್ತಲು ಎಂಬಲ್ಲಿನ ರಹಿಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮಣ್ಣು ಪಾಲಾಗಿದ್ದಲ್ಲದೇ ಮನೆಯ ಜಗಲಿ ಕೂಡಾ ಬಿರುಕು ಬಿಟ್ಟು ಮನೆ ಕುಸಿಯುವ ಬೀತಿಯಲ್ಲಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಮುಖಂಡ ಅರುಣ್ ಪುತ್ತಿಲ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ ನೂಜಿ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್,

ನರಿಮೊಗರು: ಮಳೆಗೆ ಕುಸಿದ ಮನೆಯ ಕಾಂಪೌಂಡ್ ➤ ಮನೆ ಕುಸಿತದ ಭೀತಿಯಲ್ಲಿ ಕುಟುಂಬ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top