(ನ್ಯೂಸ್ ಕಡಬ) newskadaba.com ಸವಣೂರು, ಎ. 15. ಪುತ್ತೂರು -ಕಾಣಿಯೂರು ಮಾರ್ಗದ ನಡುವಿನ ಸವಣೂರು ಗೇಟ್ ಬಳಿ ರೈಲ್ವೇ ಹಳಿಯಲ್ಲಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ದಂಬೆ ನಿವಾಸಿ ದಿ.ಬಾಲಕೃಷ್ಣ ರೈ ಕೇನ್ಯ ಎಂಬವರ ಪುತ್ರ ಮಹೇಶ್ ಯಾನೆ ಸನ್ನು (34 ವ) ಎಂದು ಗುರುತಿಸಲಾಗಿದೆ. ಇವರ ಮೃತದೇಹವು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯಿಂದಾಗಿ ರುಂಡವು ಬೇರ್ಪಟ್ಟಿತ್ತು. ಗುರುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.











