ವಿಟ್ಲ: ಅಕ್ರಮ ಮದ್ಯ ಸರಬರಾಜು- ಪೊಲೀಸ್ ದಾಳಿ ➤ ಓರ್ವ ಅರೆಸ್ಟ್, 1365ರೂ ಮೌಲ್ಯದ ಮದ್ಯ ವಶಕ್ಕೆ



(ನ್ಯೂಸ್ ಕಡಬ) newskadaba.com ವಿಟ್ಲ, ಎ. 15. ವಿಟ್ಲ ಎಸ್ಐ ವಿನೋದ್ ರೆಡ್ಡಿ ನೇತೃತ್ವದ ತಂಡವು ಗಸ್ತುನಿರತ ಸಂದರ್ಭ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿರುವುದು ಬೋಳಂತೂರು ಎಂಬಲ್ಲಿ ಬೆಳಕಿಗೆ ಬಂದಿದೆ.







ಬಂಧಿತ ಆರೋಪಿಯನ್ನು ಬೋಳಂತೂರು ಕೊಕ್ಕಪುಣಿ ನಿವಾಸಿ ಭಾಸ್ಕರ್ (42) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 90ಎಂಎಲ್ ನ ಮೈಸೂಲ್ ಲ್ಯಾನ್ಸರ್ ವಿಕ್ಸಿ 33 ಟೆಟ್ರಾ ಪ್ಯಾಕೆಟ್, 90 ಎಂಎಲ್ ನ ಪಿನ್ಸರ್ ಲ್ಯಾನ್ಸರ್ ವಿಕ್ಸಿ ಹಾಗೂ 6 ಟೆಟ್ರಾ ಪ್ಯಾಕೆಟ್ ಪತ್ತೆಯಾಗಿದ್ದು, ಒಟ್ಟು 1365 ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top