ವಿಟ್ಲ: ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ತಂತಿಯನ್ನು ಎಳೆದೊಯ್ದ ಬಸ್ ➤ ಕರ್ತವ್ಯ ನಿರತ ಲೈನ್ ಮ್ಯಾನ್ ಪವಾಸದೃಶ ಪಾರು

(ನ್ಯೂಸ್ ಕಡಬ) newskadaba.com ವಿಟ್ಲ, ಎ. 14. ರಸ್ತೆಗೆ ಅಡ್ಡಲಾಗಿದ್ದ ಕೇಬಲ್ ಚಲಿಸುತ್ತಿದ್ದ ಬಸ್ಸಿಗೆ ಸಿಲುಕಿ ಎಳೆದೊಯ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಮುರಿದು ಒಂದು ಟ್ರಾನ್ಸ್ ಫರ್ಮರ್ ನೆಲಕ್ಕುರುಳಿ ಬಿದ್ದರೂ, ವಿದ್ಯುತ್ ಕಂಬದಲ್ಲಿದ್ದ ಲೈನ್ ಮ್ಯಾನ್ ಪವಾಡಸದೃಶ ಪಾರಾದ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ನಡೆದಿದೆ.

ಘಟನೆಯಿಂದ ಸಾಲೆತ್ತೂರು ಮೆಸ್ಕಾಂ ಉಪವಲಯದ ಲೈನ್ ಮ್ಯಾನ್ ರಾಜ್ ಅಹಮ್ಮದ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Scroll to Top