ಕ್ರೈಮ್ ನ್ಯೂಸ್

ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟ ➤ ತಾತ – ಮೊಮ್ಮಗ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.27. ಚಲಿಸುತ್ತಿದ್ದ ಕಾರಿನ ಚಕ್ರ ಸ್ಫೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿ ತಾತ – ಮೊಮ್ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಗಂಗಾವತಿ ಮೂಲದ ಮಹಮ್ಮದ್ ಸಾಬ್(65) ಹಾಗೂ ಮಹಮ್ಮದ್ ಯೂಸುಫ್ (8) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಭೈರತಿಯಲ್ಲಿ ವಾಸವಾಗಿದ್ದ ಇವರು ಜಾವಗಲ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಟಯರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      

ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟ ➤ ತಾತ – ಮೊಮ್ಮಗ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಒಂದೆಡೆ ಕಿತ್ತು ತಿನ್ನುವ ಬಡತನ, ಇನ್ನೊಂದೆಡೆ ಕೆಲಸ ಸಿಗದ ಆತಂಕ ➤ ಅಣ್ಣ-ತಮ್ಮ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಮೈಸೂರು, ಸೆ.26. ಮನೆಯಲ್ಲಿನ ಕಿತ್ತು ತಿನ್ನುವ ಬಡತನದ ನಡುವೆ ಕೆಲಸ ಸಿಗದ ಹಿನ್ನೆಲೆಯಲ್ಲಿ ಅಣ್ಣ – ತಮ್ಮಂದಿರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಸಹೋದರರನ್ನು ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನಹಳ್ಳಿ ಸಿದ್ಧರಾಜ್ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ. ಬಡತನದ ನಡುವೆ ಕೆಲಸ ಸಿಗದೆ ಚಿಂತಾಕ್ರಾಂತನಾಗಿದ್ದ ಸಿದ್ದರಾಜ್ ನಾಲ್ಕು ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅಣ್ಣನ ಸಾವಿನ ಸುದ್ದಿ ತಿಳಿದ ತಮ್ಮ ನಾಗರಾಜ್

ಒಂದೆಡೆ ಕಿತ್ತು ತಿನ್ನುವ ಬಡತನ, ಇನ್ನೊಂದೆಡೆ ಕೆಲಸ ಸಿಗದ ಆತಂಕ ➤ ಅಣ್ಣ-ತಮ್ಮ ಆತ್ಮಹತ್ಯೆಗೆ ಶರಣು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ➤ ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಇಲ್ಲಿನ ಕಳಾರ ಸಮೀಪ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಆರೋಪ‌ದಡಿ ಬಂಧಿತರಾಗಿದ್ದ ಮೂವರಿಗೆ ಜಾಮೀನು ಮಂಜೂರಾಗಿದೆ. ಕೇರಳ ಮೂಲದ ವಯನಾಡ್ ನಿವಾಸಿ ಅಬ್ರಹಾಂ ಎಂಬಾತ ನಡೆಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ವಿರೋಧಿಸಿದ ಸಂದರ್ಭದಲ್ಲಿ ವೀಡಿಯೋ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಈ ಹಿಂದೆ ಅಲ್ಲಿ ಕೆಲಸ‌ ಮಾಡುತ್ತಿದ್ದ ಮಹಿಳೆಯರಿಬ್ಬರು

ಕಡಬ: ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ➤ ಆರೋಪಿಗೆ ಜಾಮೀನು ಮಂಜೂರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಪೊಲೀಸ್ ಸಿಬ್ಬಂದಿಯ ಅತ್ಯಾಚಾರ ಸುದ್ದಿ ವೈರಲ್ ➤ ದೂರು ಬಂದಲ್ಲಿ ಸೂಕ್ತ ಕ್ರಮ: ಡಿವೈಎಸ್ಪಿ ಗಾನ ಪಿ.ಕುಮಾರ್

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಇಲ್ಲಿನ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಓರ್ವ ಯುವತಿಯೋರ್ವಳನ್ನು ಅತ್ಯಾಚಾರಗೈದ ಬಗೆಗಿನ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಪುತ್ತೂರು ಡಿವೈಎಸ್ಪಿ ಶನಿವಾರದಂದು ಕಡಬ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ನ್ಯಾಯ ಅರಸುತ್ತಾ ಠಾಣೆಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಆ ಬಳಿಕ ಸಹಾಯದ ನೆಪದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಸ್ಥಳೀಯ ವೆಬ್ ನ್ಯೂಸ್ ಚಾನಲ್‌ಗಳು ವರದಿ ಮಾಡುತ್ತವೆ

ಕಡಬ: ಪೊಲೀಸ್ ಸಿಬ್ಬಂದಿಯ ಅತ್ಯಾಚಾರ ಸುದ್ದಿ ವೈರಲ್ ➤ ದೂರು ಬಂದಲ್ಲಿ ಸೂಕ್ತ ಕ್ರಮ: ಡಿವೈಎಸ್ಪಿ ಗಾನ ಪಿ.ಕುಮಾರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬದಲ್ಲೊಂದು ಮಸಾಜ್ ಪಾರ್ಲರ್ ನೆಪದಲ್ಲಿ ವೇಶ್ಯಾವಾಟಿಕೆ ➤ ಇಲ್ಲಿ ನಡೆಯುತ್ತಿದೆ ಹಸಿ ಮಾಂಸ ದಂಧೆ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಇಲ್ಲಿನ ಕಳಾರ ಸಮೀಪ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಇದೀಗ ಆರೋಪ‌ ಕೇಳಿ ಬಂದಿದೆ. ಕೇರಳ ಮೂಲದ ವಯನಾಡ್ ನಿವಾಸಿ ಅಬ್ರಹಾಂ ಎಂಬಾತ ನಡೆಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ವಿರೋಧಿಸಿದ ಸಂದರ್ಭದಲ್ಲಿ ವೀಡಿಯೋ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಈ ಹಿಂದೆ ಅಲ್ಲಿ ಕೆಲಸ‌ ಮಾಡುತ್ತಿದ್ದ ಮಹಿಳೆಯರಿಬ್ಬರು

ಕಡಬದಲ್ಲೊಂದು ಮಸಾಜ್ ಪಾರ್ಲರ್ ನೆಪದಲ್ಲಿ ವೇಶ್ಯಾವಾಟಿಕೆ ➤ ಇಲ್ಲಿ ನಡೆಯುತ್ತಿದೆ ಹಸಿ ಮಾಂಸ ದಂಧೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಮಸಾಜ್ ಪಾರ್ಲರ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಇಲ್ಲಿನ ಮಸಾಜ್ ಪಾರ್ಲರ್ ವೊಂದರ ಮಾಲಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆ ಇದೀಗ ಕಡಬ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿನ ಕಳಾರ ಸಮೀಪ ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಕೇರಳದ ವಯನಾಡ್ ನಿವಾಸಿ ಮಸಾಜ್ ಸೆಂಟರ್ ನಡೆಸುತ್ತಿದ್ದು, ಈ ನಡುವೆ ಅಲ್ಲಿಗೆ ಬರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇಂದು ರಾತ್ರಿ ನೊಂದ ಮಹಿಳೆಯೋರ್ವರು ಕಡಬ ಠಾಣೆಗೆ ದೂರು ನೀಡಿದ್ದು,

ಕಡಬ: ಮಸಾಜ್ ಪಾರ್ಲರ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಖಜಾನೆ ಅಧಿಕಾರಿಯನ್ನೇ ಸುಲಿಗೆ ಮಾಡಿದ ಮಂಗಳಮುಖಿ ➤ ಒಂದೂವರೆ ಸಾವಿರ ರೂ. ಕಿತ್ತು ಪರಾರಿ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.24. ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಜಾನಾಧಿಕಾರಿಯ ಜೇಬಿನಿಂದ ಮಂಗಳಮುಖಿಯೋರ್ವಳು ಒಂದೂವರೆ ಸಾವಿರ ಹಣವನ್ನು ಎಳೆದೊಯ್ದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಬುಧವಾರ ರಾತ್ರಿ ಸುಳ್ಯದ ಖಜಾನಾಧಿಕಾರಿಯವರು ಪುತ್ತೂರಿಗೆ ಹೋಗಲೆಂದು ಸುಳ್ಯ ಬಸ್ ನಿಲ್ದಾಣದಲ್ಲಿದ್ದ ಬಸ್ ಹತ್ತಿ ಕುಳಿತಿದ್ದರು ಎನ್ನಲಾಗಿದೆ. ಈ ವೇಳೆ ಬಸ್ಸಿನೊಳಗೆ ಬಂದ ಮಂಗಳಮುಖಿಯೊಬ್ಬಾಕೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಖಜಾನಾಧಿಕಾರಿಯವರು ಹಣ ಕೊಡಲಿಲ್ಲವೆನ್ನಲಾಗಿದೆ. ಅಲ್ಲಿಂದ ಹೋದಂತೆ ನಟಿಸಿದ ಆಕೆ ಹಿಂತಿರುಗಿ ಬಂದು ಖಜಾನಾಧಿಕಾರಿಯವರ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ ಒಂದೂವರೆ

ಖಜಾನೆ ಅಧಿಕಾರಿಯನ್ನೇ ಸುಲಿಗೆ ಮಾಡಿದ ಮಂಗಳಮುಖಿ ➤ ಒಂದೂವರೆ ಸಾವಿರ ರೂ. ಕಿತ್ತು ಪರಾರಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಇಬ್ಬರು ಆಪ್ತ ಸ್ನೇಹಿತರು

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.24. ನಿರ್ಜನ ಪ್ರದೇಶದ ಜಲಪಾತದಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿಗೆ ಬಿದ್ದು ಆಪ್ತ ಸ್ನೇಹಿತರಿಬ್ಬರು ಪ್ರಾಣ ಕಳೆದುಕೊಂಡ ಘಟನೆ ಮಂಡ್ಯದಿಂದ ವರದಿಯಾಗಿದೆ. ಮೃತ ಸ್ನೇಹಿತರನ್ನು ಬೆಂಗಳೂರು ನಿವಾಸಿಗಳಾದ ಶಾಮ್ವೆಲ್ ಜೇಕಬ್(21) ಹಾಗೂ ಸಿಬಲ್ ಥಾಮಸ್ (21) ಎಂದು ಗುರುತಿಸಲಾಗಿದೆ. ಆಪ್ತ ಸ್ನೇಹಿತರಾಗಿದ್ದ ಇವರು ದ್ವಿಚಕ್ರ ವಾಹನದಲ್ಲಿ ಮಂಡ್ಯ ಪ್ರವಾಸಕ್ಕೆ ತೆರಳಿದ್ದು, ಗಗನಚುಕ್ಕಿ ಜಲಪಾತ ವೀಕ್ಷಿಸಿ ಆ ಬಳಿಕ ಗಾಣಾಳು ಫಾಲ್ಸ್ ಗೆ ತೆರಳಿದ್ದಾರೆ. ನಿರ್ಜನ ಪ್ರದೇಶವಾಗಿರುವ ಗಾಣಾಳು ಫಾಲ್ಸ್ ನಲ್ಲಿ ಸೆಲ್ಫಿ

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಇಬ್ಬರು ಆಪ್ತ ಸ್ನೇಹಿತರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪೇಟೆಗೆಂದು ತೆರಳಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.23. ತಲೆಗೂದಲು ತೆಗೆಸಲೆಂದು ಪೇಟೆಗೆ ತೆರಳಿದ ವ್ಯಕ್ತಿಯೋರ್ವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಕಲ್ಲಟ ನಿವಾಸಿ ತಿಮ್ಮಪ್ಪ ಎಂದು ಗುರುತಿಸಲಾಗಿದೆ. ವಿಪರೀತ ಅಮಲು ಪದಾರ್ಥ ಸೇವನೆಯ ಚಟವನ್ನು ಹೊಂದಿದ್ದ ಇವರು ಸೆಪ್ಟೆಂಬರ್ 08 ರಂದು ಕೂದಲು ತೆಗೆಸಲೆಂದು ಪೇಟೆಗೆ ಹೋದವರು ಹಿಂತಿರುಗಿಲ್ಲ ಎನ್ನುತ್ತಾರೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಲಾಗಿದೆ.    

ಪೇಟೆಗೆಂದು ತೆರಳಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಅಪಘಾತ ಸ್ಥಳಕ್ಕೆ ತೆರಳಿದ್ದ ಅಂಬ್ಯುಲೆನ್ಸ್ ಚಾಲಕನಿಗೆ ಹಲ್ಲೆಗೆ ಯತ್ನ ➤ ಧರ್ಮಸ್ಥಳ ಠಾಣೆಗೆ ದೂರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.23. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಿಮಿತ್ತ ಬಂದ ಅಂಬ್ಯುಲೆನ್ಸ್ ನ ಕೀ ಕಿತ್ತುಕೊಂಡು ಚಾಲಕನಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ಉದನೆಯಿಂದ ವರದಿಯಾಗಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉದನೆ ಸಮೀಪ ಹೊಳೆ ಬದಿಗೆ ಉರುಳಿ ಬಿದ್ದಿತ್ತು‌. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಈ ವೇಳೆ ರಕ್ಷಣಾ ಕಾರ್ಯಾಚರಣೆಗೆಂದು ಅಂಬ್ಯುಲೆನ್ಸ್ ಬಂದಿದ್ದು, ಸ್ಥಳೀಯ ನಿವಾಸಿ ಲಿಬಿನ್ ಎಂಬಾತ ಅಂಬ್ಯುಲೆನ್ಸ್ ವಾಹನದ

ಅಪಘಾತ ಸ್ಥಳಕ್ಕೆ ತೆರಳಿದ್ದ ಅಂಬ್ಯುಲೆನ್ಸ್ ಚಾಲಕನಿಗೆ ಹಲ್ಲೆಗೆ ಯತ್ನ ➤ ಧರ್ಮಸ್ಥಳ ಠಾಣೆಗೆ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top