ಕುಡಿದ ಮತ್ತಿನಲ್ಲಿ ಆಂಬ್ಯುಲೆನ್ಸ್ ಚಾಲನೆ- ಕಾರಿಗೆ ಢಿಕ್ಕಿ ➤ ಕಾರು ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಗದಗ, ಜು. 17. ಕುಡಿದ ಅಮಲಿನಲ್ಲಿ ಆಂಬ್ಯುಲೆನ್ಸ್ ಚಾಲನೆ ಮಾಡಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಇಲ್ಲಿನ ಹೊರವಲಯದಲ್ಲಿ ನಡೆದಿದೆ.

ಗಾಯಗೊಂಡ ಕಾರು ಚಾಲಕನನ್ನು ಗೋವಿಂದಪ್ಪ ಲಮಾಣಿಗ ಎಂದು ಗುರುತಿಸಲಾಗಿದೆ. ಶಿರಹಟ್ಟಿ ಕಡೆಗೆ ಹೊರಟಿದ್ದ ಆಂಬ್ಯುಲೆನ್ಸ್ ನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಗೆ ಆಂಬ್ಯುಲೆನ್ಸ್ ಚಾಲಕ ವಿಶ್ವನಾಥ್ ಬೋರಶೆಟ್ಟಿಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದುಬಂದಿದೆ. ಸ್ಥಳೀಯರು ಸೇರಿ ಆ್ಯಂಬ್ಯುಲೆನ್ಸ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ‌.

Scroll to Top