(ನ್ಯೂಸ್ ಕಡಬ) newskadaba.com ಕಾಸರಗೋಡು, ಜು.22. ಲಾರಿ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ಬೇಕಲ ಸೇತುವೆ ಬಳಿ ನಡೆದಿದೆ.

ಮೃತ ಸವಾರನನ್ನು ಬೇಕಲ ಸಮೀಪದ ಚಿರಮ್ಮಲ್ ನಿವಾಸಿ ಬಾಬುರಾಜ್ (45) ಎಂದು ಗುರುತಿಸಲಾಗಿದೆ. ಜಾದೂಗಾರರಾಗಿ ಹೆಸರು ಗಳಿಸಿದ್ದ ಬಾಬುರಾಜ್ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹೊಂಡವನ್ನು ತಪ್ಪಿಸುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರುವುದಾಗಿ ಎಂದು ತಿಳಿದುಬಂದಿದೆ. ಈ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














