ಕ್ರೈಮ್ ನ್ಯೂಸ್

ಕಬ್ಬು ಸಾಗಾಟದ ಟ್ರ್ಯಾಕ್ಟರ್ ನಲ್ಲಿ ಕಾಲು ಸಿಲುಕಿ ಬಾಲಕನ ಸ್ಥಿತಿ ಗಂಭೀರ

(ನ್ಯೂಸ್ ಕಡಬ) Newskadaba.com ಹುಬ್ಬಳ್ಳಿ, ಅ. 14. ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಅಪಘಾತದಲ್ಲಿ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಗಣೇಶ ಹನುಮಂತಪ್ಪ ವಡ್ಡರ(11) ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ನಲ್ಲಿ ಕಬ್ಬು ತುಂಬಿಸಿ ತರುತ್ತಿದ್ದ ಸಂದರ್ಭ ಬಾಲಕನ ಬಲಗಾಲು ಸಿಲುಕಿಕೊಂಡಿದ್ದು, ಪರಿಣಾಮ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಚಿಕಿತ್ಸೆಗಾಗಿ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾ‌ನೆ […]

ಕಬ್ಬು ಸಾಗಾಟದ ಟ್ರ್ಯಾಕ್ಟರ್ ನಲ್ಲಿ ಕಾಲು ಸಿಲುಕಿ ಬಾಲಕನ ಸ್ಥಿತಿ ಗಂಭೀರ Read More »

ಕ್ರೈಮ್ ನ್ಯೂಸ್

ಮಂಗಳೂರು: ಸಹೋದ್ಯೋಗಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ ➤ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕನ ಬಂಧನ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 14. ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿ, ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ಮೊಹಮ್ಮದ್ ಫಾರೂಕ್ (45) ಎಂದು ಗುರುತಿಸಲಾಗಿದೆ. ಈತ ತನ್ನ ಕಚೇರಿಯಲ್ಲಿ ಕೆಲಸಕ್ಕಿದ್ದ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿ, ವಾಟ್ಸಪ್ ಮೂಲಕ ನಗ್ನ ಚಿತ್ರಗಳನ್ನು ಕಳುಹಿಸಿ, ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ

ಮಂಗಳೂರು: ಸಹೋದ್ಯೋಗಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ ➤ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೋಳಿ ಅಂಗಡಿಯ ಮುಂದೆ ಕುಳಿತಿದ್ದ ಇಬ್ಬರ ಮೇಲೆ ಹರಿದ ಲಾರಿ- ಸ್ಥಳದಲ್ಲೇ ಮೃತ್ಯು ➤ ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆ

(ನ್ಯೂಸ್ ಕಡಬ) Newskadaba.com ಮಂಡ್ಯ, ಅ. 14. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಅಂಗಡಿ ಬಳಿ ಕುಳಿತಿದ್ದವರ ಮೇಲೆ ಹರಿದು, ಇಬ್ಬರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಕೀಳಘಟ್ಟ ಗ್ರಾಮದ ಗಿರೀಶ್ ಶೆಟ್ಟಿ (50) ಮತ್ತು ಕೋಡಿ ಹಳ್ಳಿ ಗ್ರಾಮದ ಲೋಕೇಶ (44) ಎಂದು ಗುರುತಿಸಲಾಗಿದೆ. ಗಿರೀಶ್ ಶೆಟ್ಟಿ ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ಲೋಕೇಶ್ ಎಂಬವರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೋಳಿ ಅಂಗಡಿಯ ಮಾಲೀಕ ನಿಂಗೇಗೌಡ

ಕೋಳಿ ಅಂಗಡಿಯ ಮುಂದೆ ಕುಳಿತಿದ್ದ ಇಬ್ಬರ ಮೇಲೆ ಹರಿದ ಲಾರಿ- ಸ್ಥಳದಲ್ಲೇ ಮೃತ್ಯು ➤ ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ವ್ಯಕ್ತಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 14. ವ್ಯಕ್ತಿಯೋರ್ವರ ಬೆನ್ನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಮಾಲೆಮಾರ್ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಪಂಜಿಮೊಗರು ರಾಜೇಶ್(45) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ತಮ್ಮ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಮಾಲೆಮಾರ್ ಎಂಬಲ್ಲಿ ದುಷ್ಕರ್ಮಿಗಳ ತಂಡವೊಂದು ಬೆನ್ನಿಗೆ ಮೂರು ಬಾರಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ತಕ್ಷಣವೇ ರಾಜೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು

ಮಂಗಳೂರು: ವ್ಯಕ್ತಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೂಜಿಬಾಳ್ತಿಲ: ಮನೆಗೆ ಆಕಸ್ಮಿಕ ಬೆಂಕಿ- ಲಕ್ಷಾಂತರ ರೂ. ಹಾನಿ ➤ ಸ್ಥಳಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ

(ನ್ಯೂಸ್ ಕಡಬ) Newskadaba.com ಕಡಬ, ಅ.13. ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಉಂಟಾದ ಘಟನೆ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ. ಹಳೆನೂಜಿ ಬಾಬು ಗೌಡರ ಮಗ ಹೊನ್ನಪ್ಪ ಗೌಡ ಎಂಬವರು ವಾಸವಿದ್ದ ಮನೆಗೆ ಆಕಸ್ಮಿಕವಾಗಿ ಬೆಂಕಿ‌ ತಗುಲಿದ್ದು, ಘಟನೆಯಲ್ಲಿ ಕೊಠಡಿಯ ಪೀಠೋಪಕರಣ, ಕೊಠಡಿಯಲ್ಲಿದ್ದ ಮೂರು ಕ್ವಿಂಟಾಲ್ ಗೂ ಅಧಿಕ ರಬ್ಬರ್, ಒಂದು ಸಾವಿರ ತೆಂಗು, ಅಡಿಕೆ, ಕರಿಮೆಣಸು, ಪೈಪ್ ಹಾಗೂ ಇತರೆ ಸಾಮಾಗ್ರಿಗಳು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ

ನೂಜಿಬಾಳ್ತಿಲ: ಮನೆಗೆ ಆಕಸ್ಮಿಕ ಬೆಂಕಿ- ಲಕ್ಷಾಂತರ ರೂ. ಹಾನಿ ➤ ಸ್ಥಳಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೇಕೆಯನ್ನು ರಕ್ಷಿಸಲು ಹೋದ ಯುವಕ ಕೆರೆಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) Newskadaba.com ಕೆ.ಆರ್.ಪೇಟೆ, ಅ. 13. ಕೆರೆಗೆ ಬಿದ್ದು ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಗ್ರಾಮದಲ್ಲಿ ನಡೆದಿದೆ.   ಮೃತನನ್ನು ರಾಕೇಶ್ (17) ಎಂದು ಗುರುತಿಸಲಾಗಿದೆ. ಈತನು ಸಾಕಿದ್ದ ಮೇಕೆಯೊಂದನ್ನು ನಾಯಿ ಹಿಡಿಯಲು ಬಂದಿದ್ದು, ಇದರಿಂದ ಹೆದರಿದ ಮೇಕೆಯು ಕೆರೆಗೆ ಹಾರಿದೆ. ಮೇಕೆಯನ್ನು ರಕ್ಷಿಸಲೆಂದು ಈತನು ಕೆರೆಗೆ ಹಾರಿದ್ದಾನೆ. ಮೇಕೆ ಈಜಿ ದಡ ಸೇರಿದ್ದು, ಆದರೆ ರಾಕೇಶ್ ಮೃತಪಟ್ಟಿದ್ದಾನೆ. ಈ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮೇಕೆಯನ್ನು ರಕ್ಷಿಸಲು ಹೋದ ಯುವಕ ಕೆರೆಗೆ ಬಿದ್ದು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಕಾಡಾನೆ ದಾಳಿಯಿಂದ ಕೃಷಿ ಹಾನಿ

(ನ್ಯೂಸ್ ಕಡಬ) Newskadaba.com ಸುಳ್ಯ, ಅ. 13. ಕಾಡಾನೆಯ ದಾಳಿ ಮುಂದುವರಿದಿದ್ದು, ಮಂಡೆಕೋಲು ಗ್ರಾಮದ ಮುರೂರು ಕೃಷ್ಣ ಬೆಳ್ಚಪ್ಪಾಡಿ ಮಬವರ ತೋಟಕ್ಕೆ ನುಗ್ಗಿದ ಕಾಡಾನೆಯ ಹಿಂಡೊಂದು ದಾಳಿ ನಡೆಸಿ ಅಪಾರ ಪ್ರಮಾಣದ ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಮಾಡಿದೆ ಎಂದು ತಿಳಿದು ಬಂದಿದೆ.

ಸುಳ್ಯ: ಕಾಡಾನೆ ದಾಳಿಯಿಂದ ಕೃಷಿ ಹಾನಿ Read More »

ಕರಾವಳಿ, ಕ್ರೈಮ್ ನ್ಯೂಸ್

ಬಾಯಾರಿಕೆಯ ನೆಪವೊಡ್ಡಿ ಮನೆಯೊಳಗೆ ನುಗ್ಗಿ ಸರಗಳ್ಳತನಕ್ಕೆ ಯತ್ನ ➤ ಪೊಲೀಸರಿಗೊಪ್ಪಿಸಿದ ಸ್ಥಳೀಯರು

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 13. ಬಾಯಾರಿಕೆಯಾಗುತ್ತಿದೆ ಎಂದು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದ ಯುವಕನೋರ್ವ ಮನೆಯೊಡತಿಯ ಸರ ಕಳ್ಳತನಕ್ಕೆ ಯತ್ನಿಸಿ, ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ‌. ಬಂಧಿತನನ್ನು ಕಲಬುರಗಿ ಜಿಲ್ಲೆಯ ಸಿದ್ಧಾಪುರ ಮೂಲದ ಮಾರುತಿ ಎಂದು ಗುರುತಿಸಲಾಗಿದೆ. ಪಾನಮತ್ತನಾಗಿದ್ದ ಈತ ಹನುಮಕ್ಕ ಎಂಬವರು ವಾಸಿಸುತ್ತಿದ್ದ ಬಾಡಿಗೆ ಮನೆಗೆ ಬಂದು ನೀರು ಕೇಳಿದ್ದು, ಮನೆಯೊಡತಿ ನೀರು ತರಲೆಂದು ಒಳ ಹೋದ ತಕ್ಷಣ ಮಾರುತಿ ಮನೆಯೊಳಗೆ ನುಗ್ಗಿ ಆಕೆಯ

ಬಾಯಾರಿಕೆಯ ನೆಪವೊಡ್ಡಿ ಮನೆಯೊಳಗೆ ನುಗ್ಗಿ ಸರಗಳ್ಳತನಕ್ಕೆ ಯತ್ನ ➤ ಪೊಲೀಸರಿಗೊಪ್ಪಿಸಿದ ಸ್ಥಳೀಯರು Read More »

ಕ್ರೈಮ್ ನ್ಯೂಸ್

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ಸುಳ್ಯ, ಅ. 13. ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬಂಗ್ಲೆಗುಡ್ಡೆಯ ಲಿಖಿತ್(22) ಎಂದು ಗುರುತಿಸಲಾಗಿದೆ. ಈತ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಅಡ್ಡಕ್ಕೆ ಹಗ್ಗ ಹಾಕಿ ನೇಣು ಹಾಕಿಕೊಂಡಿದ್ದು, ತಕ್ಷಣವೇ ಆತನನ್ನು ಕೆಳಗಿಳಿಸಿ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಕರೆತಂದು ಅಲ್ಲಿಂದ ಬಳಿಕ ಸುಳ್ಯ ಸರಕಾರಿ ಆಸ್ಪತ್ರೆ ಗೆ ತಂದಿದ್ದರು. ಆತನನ್ನು ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ➤ ನಾಲ್ವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

(ನ್ಯೂಸ್ ಕಡಬ) Newskadaba.com ರಾಮನಗರ, ಅ. 13. ವಿವಿಧ ಕಡೆ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ಹೊಡಿಕೆ ಹೊಸಹಳ್ಳಿ ಗ್ರಾಮದ ಎಚ್‌.ಎಂ. ಆತ್ಮಾನಂದ್ (40), ಮಳೂರುಪಟ್ಟಣ ನಿವಾಸಿ ಎಂ. ಸಿ. ಮನು (39), ರಾಮನಗರದ ವಿವೇಕಾನಂದ ನಗರ ನಿವಾಸಿ ಎಸ್‌. ಕೃಷ್ಣಮೂರ್ತಿ ಹಾಗೂ ಚೆನ್ನಪಟ್ಟಣದ ಎಂ.ಜಿ. ರಸ್ತೆ ಸಮೀಪದ ನಿವಾಸಿ ನಾಗಾರ್ಜುನ (31) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಸಂದೀಪ್‌ ತಲೆಮರೆಸಿಕೊಂಡಿದ್ದಾರೆ. ಈ ಸಂದರ್ಭ ಬಂಧಿತರಿಂದ ₹10.98

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ➤ ನಾಲ್ವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top