ಕಡಬ: ರಾತ್ರಿಯಾದರೂ ಸಿಗದ ನೀರುಪಾಲಾದ ಯುವಕನ ಸುಳಿವು ➤ ಶೋಧ ಕಾರ್ಯ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಸೆ.01. ನದಿ ನೀರಿನ ಸೆಳೆತಕ್ಕೆ ನೀರುಪಾಲಾದ ಯುವಕನ ಬಗ್ಗೆ ರಾತ್ರಿಯಾದರೂ ಸುಳಿವು ದೊರೆತಿಲ್ಲ.

ಬುಧವಾರ ಸಂಜೆ ಕಡಬ ಸಮೀಪದ ಕೆಮ್ಮಾರ ಸೇತುವೆಯ ಬಳಿ ಸ್ಥಳೀಯ ನಿವಾಸಿ ಶಫೀಕ್(19) ಎಂಬಾತ ನೀರುಪಾಲಾಗಿದ್ದ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಉಪ್ಪಿನಂಗಡಿ ಪೊಲೀಸರು ಊರವರ ಸಹಾಯದಿಂದ ಯುವಕನ ಶೋಧ ಕಾರ್ಯವನ್ನು ಆರಂಭಿಸಿದ್ದರು. ಬುಧವಾರ ರಾತ್ರಿಯಾದರೂ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

 

 

 

Scroll to Top