ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಶಟಲ್ ಆಡಲೆಂದು ತೆರಳುತ್ತಿದ್ದ ವೇಳೆ ಕಡವೆಗೆ ಢಿಕ್ಕಿ ಹೊಡೆದ ಬೈಕ್ ➤ ಕುಮಾರಸ್ವಾಮಿ ಶಾಲೆಯ ಹೆಡ್ ಕ್ಲರ್ಕ್ ಸ್ಥಳದಲ್ಲೇ ದುರ್ಮರಣ

(ನ್ಯೂಸ್ ಕಡಬ) Newskadaba.com ಸುಬ್ರಹ್ಮಣ್ಯ, ಅ. 16. ಶಟಲ್ ಆಡಲೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಕಡವೆಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ನಡೆದಿದೆ‌. ಮೃತರನ್ನು ಕುಮಾರಸ್ವಾಮಿ ಶಾಲೆಯ ಹೆಡ್ ಕ್ಲರ್ಕ್ ರಾಮಚಂದ್ರ ಅರ್ಬಿತ್ತಾಯ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ಗಾಂಗೇಯ ಕ್ರಿಕೆಟ್ ತಂಡದ ಆಟಗಾರರಾಗಿದ್ದ ಇವರು, ಪ್ರತಿನಿತ್ಯದಂತೆ ಕುಲ್ಕುಂದದ ಸೋಮಶೇಖರ್ ಎಂಬವರ ಮನೆಗೆ ಶಟಲ್ ಆಡಲು ಬೆಳಿಗ್ಗೆ 5:45ರ ಸಮಯ ತನ್ನ ಸಹೋದನೊಂದಿಗೆ ತೆರಳುತ್ತಿದ್ದ ವೇಳೆ […]

ಸುಬ್ರಹ್ಮಣ್ಯ: ಶಟಲ್ ಆಡಲೆಂದು ತೆರಳುತ್ತಿದ್ದ ವೇಳೆ ಕಡವೆಗೆ ಢಿಕ್ಕಿ ಹೊಡೆದ ಬೈಕ್ ➤ ಕುಮಾರಸ್ವಾಮಿ ಶಾಲೆಯ ಹೆಡ್ ಕ್ಲರ್ಕ್ ಸ್ಥಳದಲ್ಲೇ ದುರ್ಮರಣ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಪೂಂಜಾಲಕಟ್ಟೆ ಹೆಡ್ ಕಾನ್ಸ್‌ಟೇಬಲ್ ಮೃತ್ಯು

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 16. ಬೈಕ್ ಹಾಗೂ ಜುಪಿಟರ್ ನಡುವೆ ಅಪಘಾತ ಸಂಭವಿಸಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆಯಲ್ಲಿ ನಡೆದಿದೆ. ಮೃತರನ್ನು ಪೂಂಜಾಲಕಟ್ಟೆ ಹೆಡ್ ಕಾನ್ಸ್‌ಟೇಬಲ್ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಇನ್ನೊಂದು ವಾಹನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಅವರಿಗೆ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರದಂದು ವಾಮದಪದವಿನಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳ ಜೊತೆ ಭಾಗವಹಿಸಿ, ಹಿಂದಿರುಗುತ್ತಿದ್ದ

ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಪೂಂಜಾಲಕಟ್ಟೆ ಹೆಡ್ ಕಾನ್ಸ್‌ಟೇಬಲ್ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ನೀರುಪಾಲಾದ ಯುವಕ..!

(ನ್ಯೂಸ್ ಕಡಬ) Newskadaba.com ಕಲ್ಲಿಕೋಟೆ, ಅ. 15. ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಮೂವರು ಮಕ್ಕಳು ಮುಳುಗುತ್ತಿದ್ದುದನ್ನು ಕಂಡ ಯುವಕನೋರ್ವ ಮೂವರು ಮಕ್ಕಳನ್ನು ರಕ್ಷಿಸಿ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕೇರಳದ ಕುಟ್ಟಿಯಾಡಿ ಪ್ರದೇಶದ ವಿಲಾಪಳ್ಳಿ ಅರಯಾಕೂಲ್ ಎಂಬಲ್ಲಿ ನಡೆದಿದೆ. ಮೃತರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಾರ್ಯಕರ್ತ ಝಹೀರ್(40) ಎಂದು ಗುರುತಿಸಲಾಗಿದೆ. ಇವರು ಮಾಹಿ ಕಾಲುವೆಗೆ ಸ್ನಾನಕ್ಕೆಂದು ತೆರಳಿದ್ದ ಮಕ್ಕಳು ನೀರಿನ ಸುಳಿಗೆ ಸಿಲುಕಿ ಮುಳುಗುತ್ತಿದ್ದು, ಜೊತೆಗಿದ್ದ ಮಕ್ಕಳ ಕಿರುಚಾಟವನ್ನು ಕೇಳಿದ ಝಹೀರ್, ಮೂವರು

ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ನೀರುಪಾಲಾದ ಯುವಕ..! Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗ್ಯಾಸ್ ಟ್ಯಾಂಕ್‌ಗೆ ಬಿದ್ದು ಯುವಕರಿಬ್ಬರು ಮೃತ್ಯು ➤ ಗ್ಯಾಸ್ ಟ್ಯಾಂಕ್‌ ಸ್ವಚ್ಚಗೊಳಿಸುತ್ತಿದ್ದ ವೇಳೆ‌ ದುರ್ಘಟನೆ

(ನ್ಯೂಸ್ ಕಡಬ) Newskadaba.com ಉಜ್ಜಯಿನಿ, ಅ. 15. ಗ್ಯಾಸ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಟ್ಯಾಂಕ್‌ ಗೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL) ಬಾಟ್ಲಿಂಗ್ ಸ್ಥಾವರದಲ್ಲಿ ನಡೆದಿದೆ. ಮೃತರನ್ನು ರಾಜೇಂದ್ರ ಸಿಂಗ್(30) ಮತ್ತು ಲಖನ್ ಸಿಂಗ್(27) ಎಂದು ಗುರುತಿಸಲಾಗಿದೆ. ಗ್ಯಾಸ್ ಟ್ಯಾಂಕ್ ಅನ್ನು ಖಾಲಿ ಮಾಡಿ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎನ್ನಲಾಗಿದೆ.

ಗ್ಯಾಸ್ ಟ್ಯಾಂಕ್‌ಗೆ ಬಿದ್ದು ಯುವಕರಿಬ್ಬರು ಮೃತ್ಯು ➤ ಗ್ಯಾಸ್ ಟ್ಯಾಂಕ್‌ ಸ್ವಚ್ಚಗೊಳಿಸುತ್ತಿದ್ದ ವೇಳೆ‌ ದುರ್ಘಟನೆ Read More »

ಕರಾವಳಿ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ಳಾರೆ: ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ಬೆಳ್ಳಾರೆ, ಅ. 15. ಯುವಕನೋರ್ವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರುಳ್ಯ ಗ್ರಾಮದ ಸಮಹಾದಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ಮುರುಳ್ಯ ಸಮಹಾದಿ ದಿ. ಶೀನ ಎಂಬವರ ಪುತ್ರ ಪ್ರದೀಪ್ (21) ಎಂದು ಗುರುತಿಸಲಾಗಿದೆ. ಈತ ಮನೆ ಸಮೀಪದ ಗುಡ್ಡವೊಂದರಲ್ಲಿ ಗೇರು ಬೀಜದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಬೆಳ್ಳಾರೆ: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮಗುವನ್ನು ಬದಲಾಯಿಸಿದ ಲೇಡಿಗೋಶನ್ ಆಸ್ಪತ್ರೆ ವೈದ್ಯರು ➤ DNA ಪರೀಕ್ಷೆಗೆ ಪೋಷಕರ ಒತ್ತಾಯ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 15. ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ತಾಯಿಗೆ ಗಂಡು ಮಗು ನೀಡಿ ಲೇಡಿಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯ ಎಡವಟ್ಟು ಮಾಡಿದ್ದು, ಈ ಬಗ್ಗೆ ಪೋಷಕರು ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಂದಾಪುರ ಮೂಲದ ಅಮ್ರಿನ್ ಎಂಬವರಿಗೆ ಸೆಪ್ಟೆಂಬರ್ 27 ರಂದು ತಡರಾತ್ರಿ 12 ಗಂಟೆಗೆ ಹೆರಿಗೆಯಾಗಿತ್ತು. ಆಸ್ಪತ್ರೆಯ ದಾಖಲಾತಿ ಪ್ರಕಾರ ಮಗುವನ್ನು ಹೆಣ್ಣು ಎಂದು ನಮೂದಿಸಲಾಗಿತ್ತು. ಆದರೆ ಮಗುವಿನ ದೈಹಿಕ ತೂಕ

ಮಂಗಳೂರು: ಮಗುವನ್ನು ಬದಲಾಯಿಸಿದ ಲೇಡಿಗೋಶನ್ ಆಸ್ಪತ್ರೆ ವೈದ್ಯರು ➤ DNA ಪರೀಕ್ಷೆಗೆ ಪೋಷಕರ ಒತ್ತಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಐಪಿಎಲ್ ಬೆಟ್ಟಿಂಗ್ ಆಡಲು ಮಾಡಿದ ಸಾಲ ತೀರಿಸಲಾಗದೆ ವ್ಯಾಪಾರಿ ಆತ್ಮಹತ್ಯೆ

(ನ್ಯೂಸ್ ಕಡಬ) Newskadaba.com ಬಾಗಲಕೋಟೆ, ಅ. 14. ಹಣ್ಣಿನ ವ್ಯಾಪಾರಿಯೋರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿಯ ಘಟಪ್ರಭಾ ನದಿಯಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸೈಯದ ವಾಳದ (38) ಎಂದು ಗುರುತಿಸಲಾಗಿದೆ. ಈತ ಐಪಿಎಲ್ ಬೆಟ್ಟಿಂಗ್ ಆಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗಿದೆ ಬೇಸತ್ತು ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಐಪಿಎಲ್ ಬೆಟ್ಟಿಂಗ್ ಆಡಲು ಮಾಡಿದ ಸಾಲ ತೀರಿಸಲಾಗದೆ ವ್ಯಾಪಾರಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಡುಗೆಯ ವಿಚಾರದಲ್ಲಿ ತಾಯಿ- ತಂಗಿಯನ್ನೇ ಗುಂಡಿಟ್ಟು ಕೊಂದ ಭೂಪ

(ನ್ಯೂಸ್ ಕಡಬ) Newskadaba.com ಶಿರಸಿ, ಅ. 14. ಅಡುಗೆ ಯಾಕೆ‌ ಮಾಡಲಿಲ್ಲ ಎಂದು ಊಟದ ವಿಚಾರದಲ್ಲಿ ತಕರಾರು ತೆಗೆದ ಮಗ, ತಾಯಿ ಹಾಗೂ ತಂಗಿಯನ್ನೇ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದ ಘಟನೆ ಇಲ್ಲಿನ ಉಪ ವಿಭಾಗ ವ್ಯಾಪ್ತಿಯ ಸಿದ್ದಾಪುರದ ಕುಡೆಗೋಡಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಪಾರ್ವತಿ ಹಸ್ಲರ್ (45) ಹಾಗೂ ಪುತ್ರಿ ರಮ್ಯಾ‌ ಹಸ್ಲರ್ (20 ) ಎಂದು ಗುರುತಿಸಲಾಗಿದೆ. ಕುಡಿದ‌ ಅಮಲಿನಲ್ಲಿ ಊಟಕ್ಕೆ ಬಂದ ಮಗ ಮಂಜುನಾಥ ಹಸ್ಲರ್ (24) ಈ ಕೃತ್ಯವೆಸಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಶಿರಸಿ

ಅಡುಗೆಯ ವಿಚಾರದಲ್ಲಿ ತಾಯಿ- ತಂಗಿಯನ್ನೇ ಗುಂಡಿಟ್ಟು ಕೊಂದ ಭೂಪ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಂಗಳದಲ್ಲಿದ್ದ ನಿಂತಿದ್ದ ವೇಳೆ ಮೈಮೇಲೆ ಉರುಳಿ ಬಿದ್ದ ಮರ ➤ ಚಿಕಿತ್ಸೆ ಫಲಿಸದೇ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) Newskadaba.com ಧರ್ಮಸ್ಥಳ, ಅ. 14. ಮನೆಯ ಅಂಗಳದಲ್ಲಿದ್ದ ಮರವೊಂದು ಆಕಸ್ಮಿಕವಾಗಿ ಬಿದ್ದ ಪರಿಣಾಮ ವ್ಯಕ್ತಿಯೋರ್ವರಿಗೆ ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಪುದುವೆಟ್ಟು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಪುದುವೆಟ್ಟು ಗ್ರಾಮದ ಸಾಮೆದಕಲಪು ವರಸಾರಿ ಮನೆ ನಿವಾಸಿ ಆದಂ ಸಾಹೇಬ್(61) ಎಂದು ಗುರುತಿಸಲಾಗಿದೆ. ಇವರು ಬುಧವಾರದಂದು ಮಧ್ಯಾಹ್ನದ ವೇಳೆ ಮನೆಯ ಅಂಗಳದಲ್ಲಿ ನಿಂತುಕೊಂಡಿದ್ದ ಸಂದರ್ಭ ಆಕಸ್ಮಿಕವಾಗಿ ಅಂಗಳದ ಬದಿಯಲ್ಲಿದ್ದ ಮರವೊಂದು ಬೇರು ಸಮೇತ ಅವರ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ

ಅಂಗಳದಲ್ಲಿದ್ದ ನಿಂತಿದ್ದ ವೇಳೆ ಮೈಮೇಲೆ ಉರುಳಿ ಬಿದ್ದ ಮರ ➤ ಚಿಕಿತ್ಸೆ ಫಲಿಸದೇ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತಾಯಿ ಫಿಜ್ಜಾ ಕೊಡಲು ತಡವಾಯಿತೆಂದು‌ ಆತ್ಮಹತ್ಯೆಗೆ ಶರಣಾದ ಮಗಳು

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಅ. 14. ತಾನು ಕೇಳಿದ ಸಮಯಕ್ಕೆ ಪಿಜ್ಜಾ ಸಿಗಲಿಲ್ಲ ಎಂಬ ಕಾರಣಕ್ಕೆ ತಾಯಿ ಮೇಲೆ ಕೋಪಗೊಂಡ ನರ್ಸಿಂಗ್​ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ತಾಲಬ್ ಪುರ ಪ್ರದೇಶದ ನಿವಾಸಿ ಶಿಖಾ ಸೋನಿ (18) ಎಂದು ಗುರುತಿಸಲಾಗಿದೆ. ಈಕೆ ತನಗೆ ಪಿಜ್ಜಾ ಬೇಕು ಎಂದು ತಾಯಿಯ ಬಳಿ ಕೇಳಿದಾಗ, ಇದಕ್ಕೆ ಆಕೆಯ ತಾಯಿ ಸ್ವಲ್ಪ ಸಮಯ ಕಾಯಬೇಕು ಎಂದಿದ್ದಾರೆ. ಈ ಕಾರಣದಿಂದ

ತಾಯಿ ಫಿಜ್ಜಾ ಕೊಡಲು ತಡವಾಯಿತೆಂದು‌ ಆತ್ಮಹತ್ಯೆಗೆ ಶರಣಾದ ಮಗಳು Read More »

ಕರಾವಳಿ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top