(ನ್ಯೂಸ್ ಕಡಬ) Newskadaba.com ಶಿರಸಿ, ಅ. 14. ಅಡುಗೆ ಯಾಕೆ ಮಾಡಲಿಲ್ಲ ಎಂದು ಊಟದ ವಿಚಾರದಲ್ಲಿ ತಕರಾರು ತೆಗೆದ ಮಗ, ತಾಯಿ ಹಾಗೂ ತಂಗಿಯನ್ನೇ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದ ಘಟನೆ ಇಲ್ಲಿನ ಉಪ ವಿಭಾಗ ವ್ಯಾಪ್ತಿಯ ಸಿದ್ದಾಪುರದ ಕುಡೆಗೋಡಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ಪಾರ್ವತಿ ಹಸ್ಲರ್ (45) ಹಾಗೂ ಪುತ್ರಿ ರಮ್ಯಾ ಹಸ್ಲರ್ (20 ) ಎಂದು ಗುರುತಿಸಲಾಗಿದೆ. ಕುಡಿದ ಅಮಲಿನಲ್ಲಿ ಊಟಕ್ಕೆ ಬಂದ ಮಗ ಮಂಜುನಾಥ ಹಸ್ಲರ್ (24) ಈ ಕೃತ್ಯವೆಸಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಶಿರಸಿ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.















