ಕ್ರೈಮ್ ನ್ಯೂಸ್

ಮನೆಗೆ ತಡವಾಗಿ ಬಂದ 10ರ ಬಾಲಕಿ ➤ ಕೋಲಿನಿಂದ ಹೊಡೆದು ಕೊಂದ ಪಾಪಿ ತಂದೆ..!

(ನ್ಯೂಸ್ ಕಡಬ) Newskadaba.com ಮಧ್ಯಪ್ರದೇಶ, ಅ. 12. ರಾತ್ರಿ ವೇಳೆ ಮನೆಗೆ ತಡವಾಗಿ ಬಂದಳೆಂಬ ಕಾರಣಕ್ಕೆ ತನ್ನ ಹತ್ತು ವರ್ಷದ ಮಗಳನ್ನು ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಮೊರೆನಾದ ಉತ್ತಮ್ ಪುರಂ ಎಂಬಲ್ಲಿ ನಡೆದಿದೆ. ನೆರೆಮನೆಯ ಗೆಳತಿಯರೊಂದಿಗೆ ದುರ್ಗಾ ಪೂಜೆಗೆ ತೆರಳಿದ್ದ ಆಕೆ, ಮನೆಗೆ ಮರಳುವಾಗ ತಡವಾಗಿತ್ತು. ಇದರಿಂದ ಸಿಟ್ಟಿಗೆದ್ದ ತಂದೆ ರಾಕೇಶ್ ಜಾತವ್ ಕೋಲಿನಿಂದ ಮನಬಂದಂತೆ ಹೊಡೆದಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತನಿಖೆಯ ವೇಳೆ ಆರೋಪಿ ತಂದೆ […]

ಮನೆಗೆ ತಡವಾಗಿ ಬಂದ 10ರ ಬಾಲಕಿ ➤ ಕೋಲಿನಿಂದ ಹೊಡೆದು ಕೊಂದ ಪಾಪಿ ತಂದೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ನೇಣುಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಅ. 12. ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯದ ದೇವರಗದ್ದೆ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಉಮೇಶ್ ಎಂದು ಗುರುತಿಸಲಾಗಿದೆ. ಈತ ಮೂಲತಃ ತಾಲೂಕಿನ ಚಾರ್ವಾಕ ಗ್ರಾಮದವನಾಗಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಕಡಬ: ನೇಣುಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಜಮ್ಮು ಕಾಶ್ಮೀರ: ಭದ್ರತಾ ಪಡೆಗಳ ಯಶಸ್ವಿ ಎನ್ ಕೌಂಟರ್ ➤ ಮೂವರು ಉಗ್ರರ ಹತ್ಯೆ

(ನ್ಯೂಸ್ ಕಡಬ) Newskadaba.com ಶ್ರೀನಗರ್, ಅ. 12. ಜಮ್ಮು- ಕಾಶ್ಮೀರದಲ್ಲಿ ಮೂವರು ಉಗ್ರರ ಸದೆಬಡಿಯವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಇತ್ತಿಚೆಗೆ ಬೀದಿ ಬದಿ ವ್ಯಾಪಾರಿಯೋರ್ವನನ್ನು ಹತೈಗೈದಿದ್ದ ಉಗ್ರನ ಸಹಿತ ಟಿಆರ್‌ಎಫ್‌ ಸಂಘಟನೆಯ ಮೂವರು ಉಗ್ರರನ್ನು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ. ಶೋಪಿಯಾನ್ ಪ್ರಾಂತ್ಯದ ಇಮಾಮ್‍ಸಾಬ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆಗಳು ರಾತ್ರಿಯಿಡೀ ಕಾರ್ಯಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ: ಭದ್ರತಾ ಪಡೆಗಳ ಯಶಸ್ವಿ ಎನ್ ಕೌಂಟರ್ ➤ ಮೂವರು ಉಗ್ರರ ಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಏರ್‌ಪೋರ್ಟ್ ನಲ್ಲಿ ಅಕ್ರಮ ಚಿನ್ನಸಾಗಾಟಕ್ಕೆ ಯತ್ನ ➤ ಪ್ರಯಾಣಿಕನ ಬಂಧನ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 12. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಯಿಂದ ಬಂದಿಳಿದ ಪ್ರಯಾಣಿಕನೋರ್ವ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಇಂದು ನಸುಕಿನಜಾವ 2 ಗಂಟೆ‌ಯ ವೇಳೆಗೆ ಮಂಗಳೂರು ವಿಮಾಣ ನಿಲ್ದಾಣಕ್ಕೆ ಬಂದಿಳಿದಿದ್ದು, ತಪಾಸಣೆಯ ವೇಳೆ ಓರ್ವ ಪ್ರಯಾಣಿಕನಲ್ಲಿ 364 ಗ್ರಾಂ ತೂಕದ 17.54

ಮಂಗಳೂರು: ಏರ್‌ಪೋರ್ಟ್ ನಲ್ಲಿ ಅಕ್ರಮ ಚಿನ್ನಸಾಗಾಟಕ್ಕೆ ಯತ್ನ ➤ ಪ್ರಯಾಣಿಕನ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 12. ಬೈಕಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಬಕ ಸಮೀಪದ ಮಿತ್ತೂರಿನಲ್ಲಿ ನಡೆದಿದೆ. ಮೃತರನ್ನು ಬೈಕ್ ಸವಾರ ಬೆಟ್ಟಂಪಾಡಿ ರಾಜಮೂಲೆ ನಿವಾಸಿ ಸುರೇಶ್ ನಾಯ್ಕ್ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ಇನ್ನಷ್ಟೇ ತಿಳಿದುಬರಬೇಕಿದೆ.

ಪುತ್ತೂರು: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಧವೆ ಮಹಿಳೆಯ ಮೇಲೆ ಯುವಕನಿಂದ ಅತ್ಯಾಚಾರ

(ನ್ಯೂಸ್ ಕಡಬ) Newskadaba.com ಮೇದಿನಿ ನಗರ, ಅ. 12. ವಿಧವೆ ಅತ್ತಿಗೆಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‌ನ ಪಲಮು ಜಿಲ್ಲೆಯ ಮೇದಿನಿ ನಗರದಲ್ಲಿ ನಡೆದಿದೆ. ರಾತ್ರಿ ವೇಳೆ ಮದ್ಯ ಸೇವಿಸಿ ಬಂದಿದ್ದ ಆರೋಪಿಯು ಅತ್ತಿಗೆಯ ಪ್ರತಿರೋಧದ ನಡುವೆಯೂ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆ ಮಹಿಳೆಯ ಪತಿಯು ಮೂರು ವರ್ಷದ ಹಿಂದೆ ಮೃತಪಟ್ಟಿದ್ದು, ಈ ಹಿನ್ನೆಲೆ ಕೃತ್ಯವೆಸಗಿದ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎಂದೆನ್ನಲಾಗಿದೆ. ಸಂತ್ರಸ್ತೆಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ವಿಧವೆ ಮಹಿಳೆಯ ಮೇಲೆ ಯುವಕನಿಂದ ಅತ್ಯಾಚಾರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆಗೈದ ಪಾಪಿ ಪತಿ..! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) Newskadaba.com ಕೇರಳ, ಅ. 12. ಸ್ವತಃ ಪತಿಯೇ ತನ್ನ ಪತ್ನಿಯ ಮೇಲೆ ವಿಷಪೂರಿತ ಹಾವೊಂದನ್ನು ಬಿಟ್ಟು ಸಾಯಿಸಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೆಲ ತಿಂಗಳ ಹಿಂದೆ ಆಕೆಗೆ ವಿಷಕಾರಿಯಲ್ಲದ ಹಾವೊಂದು ಕಡಿದಿದ್ದು, ಇದಕ್ಕಾಗಿ ಆಕೆಯು ಕೆಲವು ಔಷಧಿಗಳನ್ನು ಮಾಡಿಕೊಳ್ಳುತ್ತಿದ್ದಳು. ಇದನ್ನೇ ನೆಪವಾಗಿಸಿಕೊಂಡ ಪತಿ ಸೂರಜ್‌, ಆಕೆಯ ಔಷಧಿಯಲ್ಲಿ ನಿದ್ರೆಯ ಮಾತ್ರೆ ಬೆರೆಸಿ, ಅದನ್ನು ಸೇವಿಸಿ ಗಾಢ ನಿದ್ರೆಯಲ್ಲಿದ್ದ ಪತ್ನಿಗೆ ವಿಷಕಾರಿ ನಾಗರಹಾವನ್ನು ತಂದು ಕಚ್ಚಿಸಿದ್ದಾನೆ. ಬಳಿಕ ಆಕೆಗೆ ನೈಸರ್ಗಿಕವಾಗಿ ಹಾವು ಕಚ್ಚಿ ಆಕೆ ಮೃತಪಟ್ಟಿದ್ದಾಳೆ

ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆಗೈದ ಪಾಪಿ ಪತಿ..! ➤ ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಿನಿಂದ ಕಾಣೆಯಾಗಿದ್ದ 4 ಮಕ್ಕಳು ಮಂಗಳೂರಿನಲ್ಲಿ ಪತ್ತೆ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 12. ಓದಿನಲ್ಲಿ ಆಸಕ್ತಿ‌ಯಿಲ್ಲ, ಕ್ರೀಡೆಯಲ್ಲಿ ಆಸಕ್ತಿಯಿರುವುದಾಗಿ ಪತ್ರ ಬರೆದು ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟು 7 ಮಕ್ಕಳು ನಾಪತ್ತೆಯಾಗಿದ್ದು, ಇದರ ಪೈಕಿ ಮೂವರು ಮೈಸೂರಿನಲ್ಲಿ ಪತ್ತೆಯಾಗಿದ್ದರು. ಇದೀಗ ಉಳಿದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ಸದ್ಯ ಈ ನಾಲ್ವರು ಮಕ್ಕಳು ಪಾಂಡೇಶ್ವರ ಠಾಣಾ ಪೊಲೀಸರ ವಶದಲ್ಲಿದ್ದು, ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಬೆಂಗಳೂರಿನಿಂದ ಕಾಣೆಯಾಗಿದ್ದ 4 ಮಕ್ಕಳು ಮಂಗಳೂರಿನಲ್ಲಿ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ವತಃ ಪೊಲೀಸರಿಂದಲೇ ಗಾಂಜಾ ಮಾರಾಟ ➤ ಇನ್ಸ್‌ಪೆಕ್ಟರ್ ಸಹಿತ 7 ಮಂದಿ ಅಮಾನತು

(ನ್ಯೂಸ್ ಕಡಬ) Newskadaba.com ಹುಬ್ಬಳ್ಳಿ, ಅ. 12. ಪೊಲೀಸರೇ ಸ್ವತಃ ಗಾಂಜಾ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ಸ್ ಪೆಕ್ಟರ್ ಸೇರಿದಂತೆ 7 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಗಾಂಜಾ ಸಾಗಾಣಿಕೆ ಕುರಿತ ಖಚಿತ ಮಾಹಿತಿ ಪಡೆದ ನವನಗರ ಠಾಣಾ ಪೊಲೀಸರು ಗಾಂಜಾ ಮಾರಾಟಗಾರನ್ನು ಬಂಧಿಸಿ, ಬಳಿಕ ಪ್ರಕರಣ ದಾಖಲಿಸದೇ ಹಣ ಪಡೆದು, ಆರೋಪಿಗಳ‌ನ್ನ ವಾಪಾಸು ಕಳುಹಿಸಿದ್ದರು. ಜೊತೆಗೆ ಸೀಜ್ ಮಾಡಲಾಗಿದ್ದ 1 ಕೆಜಿ ಗಾಂಜಾವನ್ನು ಸ್ವತಃ ಪೊಲೀಸರೇ ಮಾರಾಟ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.

ಸ್ವತಃ ಪೊಲೀಸರಿಂದಲೇ ಗಾಂಜಾ ಮಾರಾಟ ➤ ಇನ್ಸ್‌ಪೆಕ್ಟರ್ ಸಹಿತ 7 ಮಂದಿ ಅಮಾನತು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪ್ರಚೋದನೆಯನ್ನು ಪ್ರಬುದ್ದತೆಯಿಂದ ಎದುರಿಸೋಣ ➤ ಇಕ್ಬಾಲ್ ಬಾಳಿಲ

(ನ್ಯೂಸ್ ಕಡಬ) Newskadaba.com ಅ.‌ 12. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಹಿಂದೂ- ಮುಸ್ಲಿಮರಲ್ಲಿ ಒಡಕುಂಟು ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳನ್ನು ಖಂಡಿಸುತ್ತೇವೆ ಅಲ್ಲದೇ, ಪ್ರಚೋದನೆಗಳನ್ನು ಪ್ರಬುದ್ಧತೆಯಿಂದ ಎದುರಿಸೋಣ ಎಂದು SKSSF ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಹೇಳಿದರು. ಅವರು ಇಂದು SKSSF ಸುಳ್ಯ ವಲಯ ಸಮಿತಿ ವತಿಯಿಂದ ನಡೆದ ಮುಸ್ಲಿಂ ಸಮುದಾಯದ ವಿರುದ್ದ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಪ್ರಚೋದನಕಾರಿ ಹೇಳಿಕೆ ಮತ್ತು ಪ್ರವಾದಿ (ಸ.ಅ) ರವರ ನಿಂದನೆಯ ವಿರುದ್ದ ಸುಳ್ಯದಲ್ಲಿ ನಡೆದ

ಪ್ರಚೋದನೆಯನ್ನು ಪ್ರಬುದ್ದತೆಯಿಂದ ಎದುರಿಸೋಣ ➤ ಇಕ್ಬಾಲ್ ಬಾಳಿಲ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್, ಸಿನಿಮಾ
Scroll to Top