ಕ್ರೈಮ್ ನ್ಯೂಸ್

ಕಾಲೇಜಿನಲ್ಲೇ ಹೃದಯಾಘಾತ- ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ನ. 02. ವಿದ್ಯಾರ್ಥಿಯೋರ್ವ ಕಾಲೇಜಿನಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಕಾಶ್(17) ಎಂದು ಗುರುತಿಸಲಾಗಿದೆ. ಈತ ಕಾಲೇಜಿನಲ್ಲೇ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಮಾಡಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಎಂದಿನಂತೆ ಕಾಲೇಜಿಗೆ ಬಂದಿದ್ದ ಈತ ಆಯಾಸವೆಂದು ಕುಳಿತುಕೊಂಡಿದ್ದ. ತಕ್ಷಣ ಶಿಕ್ಷಕರು ಮನೆಯವರಿಗೆ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆದರೆ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಆತ […]

ಕಾಲೇಜಿನಲ್ಲೇ ಹೃದಯಾಘಾತ- ವಿದ್ಯಾರ್ಥಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ತೆಂಗಿನಮರದಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ನ. 02. ತೆಂಗಿನಕಾಯಿ ಕೀಳಲು ತೆಂಗಿನ ಮರವೇರಿದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಪಳ್ಳಿ ಗ್ರಾಮದ ಮಹಾಕಾಳಿ ಮಠದಲ್ಲಿ ನಡೆದಿದೆ. ಮೃತರನ್ನು ಮಹಾಕಾಳಿ ಮಠ ನಿವಾಸಿ ನಿತ್ಯಾನಂದ ಪ್ರಭು (41) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ತೆಂಗಿನ ಮರಕ್ಕೆ ತೆಂಗಿನಕಾಯಿ ಕೊಯ್ಯಲೆಂದು ಹತ್ತಿದವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತೆಂಗಿನಮರದಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ 12 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 02. ಮನೆಯಲ್ಲಿ ಯಾರೂ ಇಲ್ಲದ್ದ ಸಂದರ್ಭವನ್ನು ಖಚಿತಪಡಿಸಿಕೊಂಡ ಕಳ್ಳರ ತಂಡವೊಂದು ಹಗಲು ಹೊತ್ತಿನಲ್ಲೇ ಮಹಮ್ಮದ್ ಎಂಬವರ ಮನೆಯೊಂದಕ್ಕೆ ನುಗ್ಗಿ ಲಾಕರ್ ಒಡೆದು ಅಪಾರ ಪ್ರಮಾಣದ ಚಿನ್ನಾಭರಣ ಕಳವುಗೈದ ಘಟನೆ ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಎಂಬಲ್ಲಿ ನಡೆದಿದೆ. ಭಾನುವಾರದಂದು ಮನೆಯವರೆಲ್ಲ ನಿಶ್ಚಿತಾರ್ಥಕ್ಕೆ ತೆರಳಿದ್ದು, ಮಹಮ್ಮದ್ ರವರು ಸಮೀಪದ ಅಡಿಕೆ ತೋಟಕ್ಕೆ ಹೋಗಿದ್ದರು. ನಿಶ್ಚಿತಾರ್ಥ ಮುಗಿಸಿಕೊಂಡು ಪತ್ನಿ ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. 5,200ರೂ ನಗದು,

ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ 12 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ನೆಲಕ್ಕೆ ಬಿದ್ದ ಕೋವಿಯಿಂದ ಆಕಸ್ಮಿಕವಾಗಿ ಹಾರಿದ ಗುಂಡು..! ➤ ವ್ಯಕ್ತಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 02. ಕೋವಿಯೊಂದು ನೆಲಕ್ಕೆ ಬಿದ್ದ ಸಂದರ್ಭ ಆಕಸ್ಮತ್ತಾಗಿ ಗುಂಡು ಸಿಡಿದು ವ್ಯಕ್ತಿಯೋರ್ವರ ಕಾಲಿಗೆ ತಾಗಿರುವ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮಾಯಿಲೋಡಿ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕುಮಾರಯ್ಯ ನಾಯ್ಕ ಎಂದು ಗುರುತಿಸಲಾಗಿದೆ. ಮಾಯಿಲೋಡಿಯ ವಿಶ್ವನಾಥ ನಾಯ್ಕ್ ಎಂಬವರು ತನ್ನ ಜಮೀನಿಗೆ ಬರುವ ಕಾಡುಪ್ರಾಣಿಗಳನ್ನು ಓಡಿಸಲೆಂದು ಪರವಾನಿಗೆ ಹೊಂದಿರುವ ಕೋವಿಯನ್ನು ಉಪಯೋಗಿಸುವ ಸಂದರ್ಭದಲ್ಲಿ ಅಜಾಗರೂಕತೆ ತೋರಿದ ಪರಿಣಾಮ ಕೋವಿ ನೆಲಕ್ಕೆ ಬಿದ್ದು ಆಕಸ್ಮಿಕವಾಗಿ ಗುಂಡು ಸಿಡಿದು ಪಕ್ಕದಲ್ಲಿ ನಿಂತಿದ್ದ ಕುಮಾರಯ್ಯ ನಾಯ್ಕ

ಬೆಳ್ತಂಗಡಿ: ನೆಲಕ್ಕೆ ಬಿದ್ದ ಕೋವಿಯಿಂದ ಆಕಸ್ಮಿಕವಾಗಿ ಹಾರಿದ ಗುಂಡು..! ➤ ವ್ಯಕ್ತಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಿಡಿಲು ಬಡಿದು‌ ಯುವಕರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ನ. 02. ಸಿಡಿಲು ಬಡಿದು ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಕಂಚಿಬೈಲು ಬಳಿ ನಡೆದಿದೆ. ಮೃತಪಟ್ಟವರನ್ನು ಯಶವಂತ(22) ಮತ್ತು ಮಣಿ ಪ್ರಸಾದ್(22) ಎಂದು ಗುರುತಿಸಲಾಗಿದೆ. ಕಂಚಿಬೈಲು ನಿವಾಸಿಗಳಾದ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ಯರಗುಂಡಿ ಫಾಲ್ಸ್ ಗೆಂದು ತೆರಳಿದ್ದ ಐವರ ಪೈಕಿ ಇಬ್ಬರು ಸಿಡಿಲು ಬಡಿದು ಮೃತರಾಗಿದ್ದಾರೆ. ಜೊತೆಗಿದ್ದ ಗಣೇಶ್, ಸಂದೀಪ್ ಹಾಗೂ ಪ್ರವೀಣ್ ಎಂಬವರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಅವರನ್ನು ಮೂಡಬಿದರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟಿದ್ದಾರೆ.

ಸಿಡಿಲು ಬಡಿದು‌ ಯುವಕರಿಬ್ಬರು ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೀರಿನಲ್ಲಿ ಮುಳುಗುತ್ತಿದ್ದ ಮಗನ ರಕ್ಷಣೆಗೆ ಹೋದ ತಾಯಿ ನೀರುಪಾಲು..!

(ನ್ಯೂಸ್ ಕಡಬ) newskadaba.com ಕೊಡಗು, ನ. 02. ದನವನ್ನು ಮೇಯಿಸಲು ಹೋಗಿದ್ದ ಸಂದರ್ಭ ನೀರುಪಾಲಾಗುತ್ತಿದ್ದ ಮಗನನ್ನು ರಕ್ಷಿಸಲೆಂದು ಹೋದ ತಾಯಿಯೂ ನೀರುಪಾಲಾದ ಘಟನೆ ಜಿಲ್ಲೆಯ ಟ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ನೀರುಪಾಲಾದವರನ್ನು ತಾಯಿ ರೇವತಿ ಹಾಗೂ ಪುತ್ರ ಕಾರ್ಯಪ್ಪ(12) ಎಂದು ಗುರುತಿಸಲಾಗಿದೆ. ದನ ಮೇಯಿಸಲು ತೆರಳಿದ ಮಗ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ತಾಯಿ ರಕ್ಷಣೆಗೆ ತೆರಳಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಅದಾಗಲೇ ಸ್ಥಳೀಯರು ರಕ್ಷಣೆಗೆ ಮುಂದಾದರಾದರೂ ತಾಯಿ ರೇವತಿ ಮೃತಪಟ್ಟಿದ್ದು, ಮೃತದೇಹವನ್ನು ಹೊರತೆಗೆಯಲಾಗಿದೆ. ಆದರೆ ಪುತ್ರನ ಮೃತದೇಹ

ನೀರಿನಲ್ಲಿ ಮುಳುಗುತ್ತಿದ್ದ ಮಗನ ರಕ್ಷಣೆಗೆ ಹೋದ ತಾಯಿ ನೀರುಪಾಲು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಿರಾಡಿ: ಕಂದಕಕ್ಕೆ ಉರುಳಿದ ಟೆಂಪೊ ಟ್ರಾವೆಲರ್ ➤ ಐವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 02. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಗಾಯಗೊಂಡ‌ಘಟನೆ ರಾ.ಹೆ.75 ರ ಶಿರಾಡಿಯಲ್ಲಿ ನಡೆದಿದೆ. ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಟೆಂಪೊ ಟ್ರಾವೆಲ್ಲರ್ ಸುಮಾರು 60 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ‌ ಐವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಶಿರಾಡಿ: ಕಂದಕಕ್ಕೆ ಉರುಳಿದ ಟೆಂಪೊ ಟ್ರಾವೆಲರ್ ➤ ಐವರಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ವಿಫ್ಟ್ ಡಿಸೈರ್ ಕಾರು – ಹೋಂಡಾ ಡಿಯೋ ನಡುವೆ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ.01. ಸ್ವಿಫ್ಟ್ ಡಿಸೈರ್ ಕಾರು ಮತ್ತು ಹೋಂಡಾ ಡಿಯೋ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ನರಿಮೊಗರು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಮೃತ ಸವಾರನನ್ನು ಪೇರಮೊಗರು ನಿವಾಸಿ ಸೋಮಶೇಖರ್ ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಸವಣೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್‌ ಕಾರು ಮತ್ತು ಸವಣೂರಿನಿಂದ ಪುತ್ತೂರಿಗೆ ಬರುತ್ತಿದ್ದ ಹೋಂಡಾ ಡಿಯೋ ನಡುವೆ ನರಿಮೊಗರು

ಸ್ವಿಫ್ಟ್ ಡಿಸೈರ್ ಕಾರು – ಹೋಂಡಾ ಡಿಯೋ ನಡುವೆ ಢಿಕ್ಕಿ ➤ ಸವಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನಿಯಂತ್ರಣ ತಪ್ಪಿದ ಬೊಲೆರೋ ಢಿಕ್ಕಿ ➤ ಓರ್ವ ಮೃತ್ಯು, ಮೂವರಿಗೆ ಗಾಯ

(ನ್ಯೂಸ್ ಕಡಬ) Newskadaba.com ಶಿವಮೊಗ್ಗ, ನ. 01. ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ವಾಹನವೊಂದು ವ್ಯಕ್ತಿಯೋರ್ವನಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಲಯನ್ ಸಫಾರಿ ಸಮೀಪದ ಮುದ್ದಿನಕೊಪ್ಪ ಕ್ರಾಸ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಆದಿತ್ಯ ಕನ್ ಸ್ಟ್ರಕ್ಚನ್ ಕಾರ್ಮಿಕ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ವ್ಯಕ್ತಿಯೋರ್ವರಿಗೆ ಢಿಕ್ಕಿ ಹೊಡೆದು, ಬಳಿಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರವಾಹನ ಸವಾರನ ಕಾಲಿಗೆ ಗಂಭೀರ

ನಿಯಂತ್ರಣ ತಪ್ಪಿದ ಬೊಲೆರೋ ಢಿಕ್ಕಿ ➤ ಓರ್ವ ಮೃತ್ಯು, ಮೂವರಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ನ್ಯಾಯಾಧೀಶನಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ➤ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) Newskadaba.com ನವದೆಹಲಿ, ನ. 01. ಬಾಲಕನ ಮೇಲೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರೋರ್ವರು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನದ ಜಿಲ್ಲಾ ನ್ಯಾಯಾಧೀಶ ಜಿತೇಂದ್ರ ಸಿಂಗ್ 14 ವರ್ಷದ ಬಾಲಕನೋರ್ವನನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಆರೋಪಿ ಜಿತೇಂದ್ರ ಸಿಂಗ್ ವಿರುದ್ದ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಬೆನ್ನಲ್ಲೇ ಅವರನ್ನು ನ್ಯಾಯಮೂರ್ತಿ ಹುದ್ದೆಯಿಂದ ತೆಗೆದು

ನ್ಯಾಯಾಧೀಶನಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ➤ ಪೋಕ್ಸೋ ಪ್ರಕರಣ ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top