(ನ್ಯೂಸ್ ಕಡಬ) Newskadaba.com ಬೆಳಗಾವಿ, ಅ. 23. ನಾಲ್ವರು ಮಕ್ಕಳಿಗೆ ವಿಷವುಣಿಸಿ ತಂದೆಯು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಗಾವಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹಾದಿಮನಿ (46) ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನ ಹಾದಿಮನಿ(8) ಎಂದು ಗುರುತಿಸಲಾಗಿದೆ. ಬ್ಲಾಕ್ ಫಂಗಸ್ನಿಂದಾಗಿ ಇತ್ತೀಚೆಗೆ ಪತ್ನಿಯು ಮೃತಪಟ್ಟಿದ್ದರು. ಇದರಿಂದ ಮನನೊಂದ ಹಾದಿಮನಿ, ನಾಲ್ವರು ಮಕ್ಕಳಿಗೆ ವಿಷವುಣಿಸಿ ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.















