ಕ್ರೈಮ್ ನ್ಯೂಸ್

ಯುವಕನ ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳ ತಂಡ..!

(ನ್ಯೂಸ್ ಕಡಬ) newskadaba.com ಕಲಬುರ್ಗಿ, ನ. 04. ಬೆಳ್ಳಂಬೆಳಿಗ್ಗೆ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹತ್ಯೆಯಾದವರನ್ನು ವಿದ್ಯಾನಗರ ನಿವಾಸಿ ಪೊಲೀಸ್ ಪೇದೆ ಚಂದ್ರಕಾಂತ್ ಎಂಬವರ ಮಗ ಅಭಿಷೇಕ್(27) ಎಂದು ಗುರುತಿಸಲಾಗಿದೆ. ಅಭಿಷೇಕ್ ಜಿಮ್ ಗೆಂದು ಮನೆಯಿಂದ ಬೈಕ್ ಮೂಲಕ ತೆರಳಿದ್ದು, ಈ ವೇಳೆ ಆತನನ್ನು ಬೆನ್ನಟ್ಟಿದ ಏಳೆಂಟು ಜನರ ದುಷ್ಕರ್ಮಿಗಳ ಗುಂಪೊಂದು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ ಎನ್ಮಲಾಗಿದೆ.

ಯುವಕನ ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳ ತಂಡ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬಸ್ ನಲ್ಲಿ ಯುವತಿಯರ ವೀಡಿಯೋ ಚಿತ್ರೀಕರಿಸಿದ ವಿಕೃತಕಾಮಿಗೆ ಥಳಿತ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 04. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿರುವ ಕಾಮುಕನೋರ್ವನನ್ನು ಪ್ರಯಾಣಿಕರೇ ಸೇರಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಪ್ಪಿನಮೊಗರುವಿನಲ್ಲಿ ನಡೆದಿದೆ. ಆರೋಪಿ ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ಸಹೋದರಿಯರಿಬ್ಬರು ತಲಪಾಡಿಯಿಂದ ಮಂಗಳೂರು ಕಡೆಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದು, ಬಳಿಕ ಚಾಲಕನ ಹತ್ತಿರದ ಕ್ಯಾಬಿನ್‌ ಸೀಟಲ್ಲಿ ಕುಳಿತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.

ಮಂಗಳೂರು: ಬಸ್ ನಲ್ಲಿ ಯುವತಿಯರ ವೀಡಿಯೋ ಚಿತ್ರೀಕರಿಸಿದ ವಿಕೃತಕಾಮಿಗೆ ಥಳಿತ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನ ಅಪವಿತ್ರಗೊಳಿಸಿದ ಪ್ರಕರಣ ➤ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 04. ಇಲ್ಲಿನ ಪ್ರಸಿದ್ಧ ಕ್ಷೇತ್ರ ಕಾರಿಂಜ ಪರ್ವತದ ಮೇಲಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನವನ್ನು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ. ವೇಶ ಮಾಡಿ ಧಾರ್ಮಿಕ ನಂಬಿಕೆಗೆ ಧಕ್ಕೆಯನ್ನುಂಟು ಮಾಡಿ ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ್ದಲ್ಲದೇ ವೀಡಿಯೋ ಮಾಡಿ ಅದನ್ನು ಹರಿಯಬಿಟ್ಟಿದ್ದಾರೆ. ಆರೋಪಿಗಳು, ದೇವಸ್ಥಾನ ಪೂಜಾ ಸ್ಥಳವೆಂದು ಗೊತ್ತಿದ್ದರೂ ದೇವಸ್ಥಾನಕ್ಕೆ ಚಪ್ಪಲಿ, ಶೂ ಧರಿಸಿ ಪ್ರವೇಶಿಸಿ ಅಪವಿತ್ರಗೊಳಿಸಿದ್ದು, ಇವರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳನ್ನು

ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನ ಅಪವಿತ್ರಗೊಳಿಸಿದ ಪ್ರಕರಣ ➤ ನಾಲ್ವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದ.ಕ ಜಿಲ್ಲೆಯ ವಿವಿಧ ಕಡೆ ಕಳ್ಳತನ ಪ್ರಕರಣ ➤ ಕಡಬ ಮೂಲದ ಆರೋಪಿ ಕೊನೆಗೂ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಕಡಬ, ನ. 04. ಜಿಲ್ಲೆಯ ಹಲವು ಠಾಣೆಗಳಲ್ಲಿ ಸಂಪ್ಯ, ಪುತ್ತೂರು, ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೊಯಿಲ ಮೂಲದ ಆರೋಪಿಯೋರ್ವನನ್ನು ಸಂಪ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೊಯಿಲ ಫಾರ್ಮ್ ಬಳಿಯ ನಿವಾಸಿ ಇಬ್ರಾಹಿಂ ಖಲಂದರ್ ಎಂದು ಗುರುತಿಸಲಾಗಿದೆ. 2019ರಲ್ಲಿ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ, ಈತನ ವಿರುದ್ಧ ಕೇಸು ದಾಖಲಿಸಲಾಗಿದ್ದು, ಆದರೆ ಈತ ವಿಚಾರಣೆಗೆ ಹಾಜರಾಗದೆ

ದ.ಕ ಜಿಲ್ಲೆಯ ವಿವಿಧ ಕಡೆ ಕಳ್ಳತನ ಪ್ರಕರಣ ➤ ಕಡಬ ಮೂಲದ ಆರೋಪಿ ಕೊನೆಗೂ ಅರೆಸ್ಟ್..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚೂರಿ ಇರಿದು ಕೊಲೆ ➤ ತಂದೆ, ಮಗ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ನ. 04. ಸಣ್ಣಪುಟ್ಟ ಕಾರಣಕ್ಕೆ ಜಗಳವಾಡಿ ತಂದೆ ಹಾಗೂ ಮಗ ಸೇರಿ ನೆರೆಮನೆಯ ವ್ಯಕ್ತಿಯೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಬುಧವಾರದಂದು ತಡರಾತ್ರಿ ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ. ಕೊಲೆಯಾದವರನ್ನು ವೀರ ವೆಂಕಟೇಶ ಅಪಾರ್ಟ್ಮೆಂಟ್ ನಿವಾಸಿ ವಿನಾಯಕ ಕಾಮತ್(44) ಎಂದು ಗುರುತಿಸಲಾಗಿದೆ. ಕೊಲೆಗೈದವರನ್ನು ಅದೇ ಅಪಾರ್ಟ್ಮೆಂಟ್ ನಿವಾಸಿಗಳಾದ ತಂದೆ ಕೃಷ್ಣಾನಂದ ಕಿಣಿ ಹಾಗೂ ಮಗ ಅವಿನಾಶ್ ಕಿಣಿ ಎಂದು ತಿಳಿದುಬಂದಿದೆ. ಕಳೆದ 4 – 5 ದಿನಗಳ ಹಿಂದೆ ಅಪಾರ್ಟ್ಮೆಂಟ್

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚೂರಿ ಇರಿದು ಕೊಲೆ ➤ ತಂದೆ, ಮಗ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೆಲಸಕ್ಕೆ ಬಂದ ಕೆಲಸಗಾರನಿಂದಲೇ ಚಿನ್ನ ಕಳ್ಳತನ..!

(ನ್ಯೂಸ್ ಕಡಬ) newskadaba.com ಕಾರ್ಕಳ, ನ. 03. ತೋಟದ ಕೆಲಸಕ್ಕೆಂದು ಬಂದ ಕೆಲಸಗಾರನೋರ್ವ ಮನೆ ಒಡತಿಯ ಚಿನ್ನದ ಉಂಗುರ ಕಳವುಗೈದ ಘಟನೆ ಕಾರ್ಕಳದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಗುಂಡ್ಯಡ್ಕ ನಿವಾಸಿ ದೇಜು ಶೆಟ್ಟಿ ಎಂಬವರ ಮನೆಗೆ ತೋಟದ ಕೆಲಸಕ್ಕೆಂದು ಬರುತ್ತಿದ್ದ ಜಯಪ್ರಕಾಶ್, ಮನೆಯೊಡತಿ ಸರಳ ಶೆಟ್ಟಿ ರವರು ಸ್ನಾನಕ್ಕೆ ಹೋಗಿದ್ದ ಸಂದರ್ಭ ಅವರ ಬೆಡ್ ರೂಂನಲ್ಲಿದ್ದ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯು ಕಳವುಗೈದ ಉಂಗುರವನ್ನು ಸೊಸೈಟಿ ಒಂದರಲ್ಲಿ

ಕೆಲಸಕ್ಕೆ ಬಂದ ಕೆಲಸಗಾರನಿಂದಲೇ ಚಿನ್ನ ಕಳ್ಳತನ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಲಾರಿ & ಆಪೆರಿಕ್ಷಾ ನಡುವೆ ಢಿಕ್ಕಿ ➤ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ವಿಟ್ಲ, ನ. 03. ಲಾರಿ ಮತ್ತು ಆಪೆ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಪೆ ರಿಕ್ಷಾ ಪಲ್ಟಿಯಾದ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮಾಣಿಯಲ್ಲಿ ನಡೆದಿದೆ. ಪುತ್ತೂರು ಕಡೆಯಿಂದ ಕೋಳಿಗಳ ಆಹಾರ ಸರಬರಾಜು ಮಾಡುತ್ತಿದ್ದ ಈಚರ್ ಲಾರಿಯು ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂಭಾಗದಲ್ಲಿ ತೆರಳುತ್ತಿದ್ದ ಆಪೆ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಪೆ ರಿಕ್ಷಾ ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಚಾಲಕ ಗಾಯಗೊಂಡಿದ್ದಾನೆ. ಆಪೆ

ಲಾರಿ & ಆಪೆರಿಕ್ಷಾ ನಡುವೆ ಢಿಕ್ಕಿ ➤ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಕುಮಾರದಾರ ನದಿಗೆ‌ ಹಾರಲೆತ್ನಿಸಿದ ವೃದ್ದ ➤ ರಕ್ಷಿಸಿದ ಬಜರಂಗದಳ ಕಾರ್ಯಕರ್ತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ. 03. ಹಾಸನ ಮೂಲದ ವೃದ್ದನೋರ್ವ ಕುಮಾರಧಾರ ನದಿಗೆ ಹಾರಲು ಯತ್ನಿಸಿದ ಘಟನೆ ನಡೆದಿದೆ. ವೃದ್ದನೋರ್ವ ಕುಮಾರದಾರ ನದಿಯ ಸೇತುವೆ ಮೇಲಿಂದ ಹಾರಲು ಪ್ರಯತ್ನಿಸುತ್ತಿದ್ದನ್ನು ಕಂಡ ಬಜರಂಗಳದ ಕಾರ್ಯಕರ್ತ ಸುನಿಲ್ ಸುಬ್ರಹ್ಮಣ್ಯ ಎಂಬವರು ವೃದ್ಧರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ವೃದ್ಧರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಸುಬ್ರಹ್ಮಣ್ಯ: ಕುಮಾರದಾರ ನದಿಗೆ‌ ಹಾರಲೆತ್ನಿಸಿದ ವೃದ್ದ ➤ ರಕ್ಷಿಸಿದ ಬಜರಂಗದಳ ಕಾರ್ಯಕರ್ತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ವಸತಿ ಗೃಹವೊಂದರಲ್ಲಿ ಅನ್ಯಕೋಮಿನ ಜೋಡಿ‌ ಪತ್ತೆ ➤ ಪೊಲೀಸರಿಗೊಪ್ಪಿಸಿದ ಹಿಂಜಾವೇ ಕಾರ್ಯಕರ್ತರು

(ನ್ಯೂಸ್ ಕಡಬ) Newskadaba.com ಪುತ್ತೂರು, ನ. 03. ಇಲ್ಲಿನ ಬಸ್ ನಿಲ್ದಾಣದಲ್ಲಿ ಅನ್ಯಕೋಮಿನ ವ್ಯಕ್ತಿಯ ಜೊತೆ ಬೆಂಗಳೂರು ಮೂಲದ ಯುವತಿಯೋರ್ವಳು ಪತ್ತೆಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಬೆಂಗಳೂರಿನ ವಾಸಿಂ ಹಾಗೂ ಕುಂದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಯುವತಿಯ ನಡುವೆ ಪ್ರೇಮಾಂಕುರವಾಗಿ ಆಕೆ ಆತನೊಂದಿಗೆ ಮನೆ ಬಿಟ್ಟು ಬಂದಿದ್ದಾಳೆ ಎನ್ನಲಾಗಿದೆ. ವಾಸಿಂಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎನ್ನಲಾಗಿದೆ. ಯುವತಿ ಕಾಣೆಯಾದ ಬಗ್ಗೆ ಯುವತಿಯ ಮನೆಯವರಿಗೆ ತಲಿಸಿದ್ದು, ಈ ಕುರಿತು ಅವರು ಬೆಂಗಳೂರಿನಲ್ಲಿ ಕಾಣೆಯಾದ ಬಗ್ಗೆ

ಪುತ್ತೂರು: ವಸತಿ ಗೃಹವೊಂದರಲ್ಲಿ ಅನ್ಯಕೋಮಿನ ಜೋಡಿ‌ ಪತ್ತೆ ➤ ಪೊಲೀಸರಿಗೊಪ್ಪಿಸಿದ ಹಿಂಜಾವೇ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ಪದೇ ಪದೇ ಅನ್ಯಕೋಮಿನ ಯುವತಿಯ ಅತ್ಯಾಚಾರ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 03. ಅನ್ಯಕೋಮಿನ ಬಾಲಕಿಯನ್ನು ಪದೇ ಪದೇ ಬಲಾತ್ಕಾರವಾಗಿ ಅತ್ಯಾಚಾರ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ನೆಲ್ಯಾಡಿಯ ಹೊಸಮಜಲು ನಿವಾಸಿ ರಿಕ್ಷಾ ಚಾಲಕ ನೌಫಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯು ನೆಲ್ಯಾಡಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದ ವೇಳೆ ಆಕೆಯ ಪರಿಚಯ ಮಾಡಿಕೊಂಡ ಯುವಕ ಆಕೆಯ ಮೊಬೈಲ್ ನಂಬರನ್ನು ಪಡೆದುಕೊಂಡಿದ್ದ. ಆ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದು ಯುವಕ ಬಾಲಕಿಯ ಮನೆಗೆ ಪದೇ-ಪದೇ ತೆರಳಿ

ನೆಲ್ಯಾಡಿ: ಪದೇ ಪದೇ ಅನ್ಯಕೋಮಿನ ಯುವತಿಯ ಅತ್ಯಾಚಾರ ➤ ಆರೋಪಿ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top