ಬಟ್ಟೆಗಳಿಗೆ ನಕಲಿ ಬ್ರಾಂಡ್ ಬಳಸಿ ತಯಾರಿಸುತ್ತಿದ್ದ ಗೋಡೌನ್ ಗೆ ಪೊಲೀಸ್ ದಾಳಿ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 25. ನಕಲಿ ಬ್ರಾಂಡ್ ಲೋಗೋ ಬಳಸಿ ತಯಾರಿಸುವ ಬಟ್ಟೆಯ ಗೋಡೌನ್ ಮೇಲೆ ದಾಳಿ ನಡೆಸಿದ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸುರ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರಾಹುಲ್ ಕುಮಾರ್(38) ಎಂದು ಗುರುತಿಸಲಾಗಿದೆ. ಈತ ಪೋಲೊ, ರಾಲ್ಫ್ ಲಾರೆನ್ ಮತ್ತು ಲಕೋಸ್ಟ್ ಉತ್ಪನ್ನಗಳ ಹೆಸರಲ್ಲಿರುವ ಬಟ್ಟೆಗಳ ಬ್ರ್ಯಾಂಡ್ ಹೆಸರು ಹಾಗೂ ಲೋಗೊ, ಡಿಸೈನ್‌ನ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದನು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Scroll to Top