ರೈಲಿನಡಿಗೆ ಸಿಲುಕಿ 18 ಕುರಿಗಳ ಸಹಿತ ಕುರಿಗಾಹಿ ಮೃತ್ಯು



(ನ್ಯೂಸ್ ಕಡಬ) Newskadaba.com ವಿಜಯನಗರ, ಅ. 25. ತಾನು ಮೇಯಿಸುತ್ತಿರುವ ಕುರಿಗಳ ಪ್ರಾಣ ಉಳಿಸಲು ಹೋಗಿ ಕುರಿಗಾಹಿಯೊಬ್ಬ ಜೀವ ಕಳೆದುಕೊಂಡ ದಾರುಣ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಮತ್ತಿಹಳ್ಳಿ ಎಂಬಲ್ಲಿ ನಡೆದಿದೆ.







ಮೃತಪಟ್ಟವರನ್ನು ಹರಾಳು ಗ್ರಾಮದ ಚೌಟ್ಲಿ ಕೊಟ್ರೇಶ(23) ಎಂದು ಗುರುತಿಸಲಾಗಿದೆ. ಕುರಿಗಳ ಹಿಂಡು ರೈಲ್ವೇ ಹಳಿ ದಾಟುತ್ತಿದ್ದ ಸಂದರ್ಭ ಗೂಡ್ಸ್ ರೈಲು ಬಂದಿದ್ದು, ಕುರಿಗಳು ಸಾಯುವುದನ್ನು ತಪ್ಪಿಸಲು ಲಗುಬಗೆಯಿಂದ ಹಳಿಗಳ ಮೇಲೆ ಹೋಗಿ ಕುರಿಗಳನ್ನು ಓಡಿಸಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಬಂದ ರೈಲು ಕುರಿಗಾಹಿಯ ಮೇಲೂ ಹರಿದಿದೆ. ಪರಿಣಾಮ ಕುರಿಗಾಹಿ ಸಹಿತ 18 ಕುರಿಗಳು ಮೃತಪಟ್ಟಿದೆ. ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top