ಗದ್ದೆಯಲ್ಲಿ ಮೇಯುತ್ತಿದ್ದ ದನದ ಕಾಲು ಕಡಿದ ಮಹಿಳೆ..!

(ನ್ಯೂಸ್ ಕಡಬ) Newskadaba.com ಕಾರ್ಕಳ, ಅ. 23. ಗದ್ದೆಯಲ್ಲಿ ಮೇಯುತ್ತಿದ್ದ ದನವೊಂದರ ಕಾಲು ಕಡಿದ ಘಟನೆ ಕಾರ್ಕಳದ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದೆ.


ಎರ್ಲಪ್ಪಾಡಿ ಸಂತೋಷ್ ಹೆಗ್ಡೆ ಎಂಬವರ ದನವೊಂದು ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿ ಮೇಯುತ್ತಿದ್ದು, ಇದರಿಂದ ಕೋಪಗೊಂಡ ಅಮಣ್ಣಿ ಹೆಗ್ಡೆ ದನದ ಕಾಲನ್ನು ಕಡಿದಿದ್ದಲ್ಲದೆ, ಇದೇ ವಿಚಾರವನ್ನು ನೆಪವಾಗಿರಿಸಿ, ಸಂತೋಷ್ ಕುಮಾರ್ ಹೆಗ್ಡೆಗೆ ಅಮಣ್ಣಿಯ ಮೂರು ಮಕ್ಕಳು ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

Scroll to Top