ಕ್ರೈಮ್ ನ್ಯೂಸ್

ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿದ ಪ್ರೀತಿ ➤ ಯುವತಿಯ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ಸಾಮಾಜಿಕ ಜಾಲತಾಣದಲ್ಲಿ ಅರಳಿದ ಪ್ರೀತಿ ಯುವತಿ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಹುಚ್ಚು ಪ್ರಿಯಕರ ತನ್ನ ಪ್ರೇಯಸಿಯನ್ನು ಕೊಂದು ಇದೀಗ ಪ್ರೇಮ ಪಕ್ಷಿಯಾಗಬೇಕಿದ್ದವನು ಜೈಲು ಹಕ್ಕಿಯಾಗಿದ್ದಾನೆ. ಮೂಗಿನ ಕೆಳಗೆ ಇನ್ನೂ ಸರಿಯಾಗಿ ಮೀಸೆ ಚಿಗುರಿಲ್ಲ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಹಂತಕ್ಕೂ ಏನು ಸಾಧನೆ ಮಾಡಿಲ್ಲ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡ್ತಾ ಫುಲ್ ಆಕ್ಟೀವ್ ಇದ್ದ. ಜೊತೆಗೆ ಇದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕವಳನ್ನ ಬುಟ್ಟಿಗೆ […]

ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿದ ಪ್ರೀತಿ ➤ ಯುವತಿಯ ಕೊಲೆಯಲ್ಲಿ ಅಂತ್ಯ Read More »

ಕ್ರೈಮ್ ನ್ಯೂಸ್

ಚಿರತೆ ದಾಳಿ ➤ 10 ಕುರಿಗಳು ಮೃತ್ಯು.!

 (ನ್ಯೂಸ್ ಕಡಬ) newskadaba.com ಗುಬ್ಬಿ, ಡಿ. 24. ಚಿರತೆಯೊಂದು ದಾಳಿ ನಡೆಸಿ, 10 ಕುರಿಗಳನ್ನು ಕೊಂದುಹಾಕಿರುವ ಘಟನೆ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದನಹಳ್ಳಿಯಲ್ಲಿ ವರದಿಯಾಗಿದೆ. ರೈತರಾದ ಲಕ್ಷ್ಮಮ್ಮ ಹಾಗೂ ಗಂಗಣ್ಣ ಎಂಬವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿವೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳ ಬಳಿ ಚಿರತೆಯನ್ನು ಶೀಘ್ರವಾಗಿ ಹಿಡಿಯುವಂತೆ ಮುದ್ದನಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.

ಚಿರತೆ ದಾಳಿ ➤ 10 ಕುರಿಗಳು ಮೃತ್ಯು.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಾರಿ ಹರಿದು ಬೈಕ್ ಸಹಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ರಾಯಚೂರು, ಡಿ. 24. ಲಾರಿ ಹರಿದು ಬೈಕ್ ನ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಮಸ್ಕಿ ತಾಲ್ಲೂಕಿನ ಬೇಡರ ಕಾರಲಕುಂಟಿ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ಲಿಂಗಸುಗೂರು ತಾಲ್ಲೂಕಿನ ಯರಗಂಟಿ ಗ್ರಾಮದ ಶಿವಗ್ಯಾನಪ್ಪ ತಳವಾರ (38) ಎಂದು ಗುರುತಿಸಲಾಗಿದೆ. ಬೈಕ್ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ. ಮಸ್ಕಿಯಿಂದ ಲಿಂಗಸುಗೂರಿಗೆ ಬೈಕ್ ನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಲಾರಿ ಹರಿದು ಬೈಕ್ ಸಹಸವಾರ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ದನದ ಮಾಂಸ ಮಾರಾಟ…! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ. 24. ಇಲ್ಲಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ದನದ ಮಾಂಸ ಮಾರಾಟ ಮಾಡಿ, ಅದರ ತಲೆ ಹಾಗೂ ಕಾಲುಗಳನ್ನು ಸ್ಥಳದಲ್ಲೇ ಬಿಟ್ಟುಹೋಗಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ಶಿರಾಡಿ ಗ್ರಾಮದ ಅಡ್ಡಹೊಲೆ ಮಿತ್ತಮಜಲು ನಿವಾಸಿ ತೋಮಸ್ ಯಾನೆ ಮನೋಜ್ ಎಂದು ಗುರುತಿಸಲಾಗಿದೆ. ಸಿರಿಬಾಗಿಲು ಗ್ರಾಮದ ದೇರಣೆ ಅರಣ್ಯ ಪ್ರದೇಶದಲ್ಲಿ ದನದ ಮಾಂಸ ಕಡಿದು ಅದರ ತಲೆ ಹಾಗೂ ಕಾಲುಗಳನ್ನು ಸ್ಥಲದಲ್ಲೆ ಬಿಟ್ಟು ಹೋಗಲಾಗಿದ್ದು, ಈ

ನೆಲ್ಯಾಡಿ: ದನದ ಮಾಂಸ ಮಾರಾಟ…! ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವೈದ್ಯರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಎತ್ತುಗಳು ಮೃತ್ಯು 

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ವೈದ್ಯರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಎತ್ತುಗಳು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ ಸಂಭವಿಸಿದೆ. ಉಡೇವಾ ಗ್ರಾಮದ ಶಂಕರ್ ಎಂಬುವರಿಗೆ ಸೇರಿದ ಎತ್ತುಗಳಾಗಿದ್ದು, ಆರೋಗ್ಯ ಸರಿಇಲ್ಲವೆಂದು ಎತ್ತುಗಳನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪಶುವೈದ್ಯ ಬಸವರಾಜ್ ಎಂಬಾತ ಎತ್ತುಗಳಿಗೆ ಇಂಜೆಕ್ಷನ್ ನೀಡಿದ್ದಾನೆ. ಇನ್ನು ವೈದ್ಯರು ಇಂಜೆಕ್ಷನ್ ನೀಡಿದ ಮರುದಿನವೇ ರಾಸುಗಳು ಮೃತಪಟ್ಟಿವೆ ಎನ್ನಲಾಗಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಎತ್ತುಗಳು ಮೃತ್ಯು  Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ಪತ್ನಿಯಿಂದ ಪತಿಯ ಹತ್ಯೆ..!

(ನ್ಯೂಸ್ ಕಡಬ) newskadaba.com ವಿರಾಜಪೇಟೆ, ಡಿ. 24. ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯೇ ಪತಿಯ ಕುತ್ತಿಗೆಗೆ ವಸ್ತ್ರದಿಂದ ಬಿಗಿದು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ಸಮೀಪದ ಬೊಳ್ಳುಮಾಡು ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಸುಂದರ (36) ಎಂದು ಗುರುತಿಸಲಾಗಿದೆ. ಇವರು ಬೊಳ್ಳುಮಾಡು ಗ್ರಾಮದ ತೋಟವೊಂದರ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು ಎನ್ನಲಾಗಿದೆ. ಸುಂದರ್ ಹಾಗೂ ಶೋಭ ಅವರ ನಡುವೆ ಕ್ಷುಲಕ ಕಾರಣಕ್ಕಾಗಿ ಕಲಹ ಉಂಟಾಗಿದೆ. ಇದೇ ಕಲಹ ವಿಕೋಪಕ್ಕೆ ತಿರುಗಿ, ಪತ್ನಿ ಶೋಭ ವೇಲ್ ನಿಂದ ಪತಿಯ ಕುತ್ತಿಗೆಗೆ ಬಿಗಿದು

ಕ್ಷುಲ್ಲಕ ಕಾರಣಕ್ಕೆ ಪತ್ನಿಯಿಂದ ಪತಿಯ ಹತ್ಯೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಅತ್ತೆ ಹಾಗೂ ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ, ಹಲ್ಲೆ ಪ್ರಕರಣ ➤ ಮಹಿಳೆ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೆಳಂದೂರು, ಡಿ. 24. ಮಹಿಳೆಯೊಬ್ಬರ ಮೇಲೆ ಅತ್ತೆ ಮತ್ತು ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆಗೈದಿರುವ ಘಟನೆ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ನಡೆದಿದೆ. ಬೆಳಂದೂರು ಗ್ರಾಮದ ಅಮೈ ನಿವಾಸಿ ಕುಲದೀಪ್ ಎಂಬವರ ಪತ್ನಿಗೆ ಅವರ ಅತ್ತೆ ಹಾಗೂ ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಾಳು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಪುತ್ತೂರು: ಅತ್ತೆ ಹಾಗೂ ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ, ಹಲ್ಲೆ ಪ್ರಕರಣ ➤ ಮಹಿಳೆ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

17 ಸಾವಿರ ಬೆಲೆ ಬಾಳುವ ಸೈಕಲ್ ಕಳ್ಳತನ     

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ಬೆಂಗಳೂರು ನಗರದಲ್ಲಿ ಮತ್ತೊಂದು ಸೈಕಲ್ ಕಳ್ಳರ ಗ್ಯಾಂಗ್ ಹುಟ್ಟಿಕೊಂಡಿದ್ದು, ಆಟೋದಲ್ಲಿ ಬಂದ ಕಳ್ಳರ ಗ್ಯಾಂಗ್‌ವೊಂದು ಸೈಕಲ್ ಕದಿಯೋ ವಿಡಿಯೋ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವರಾಜ್‌ ಎಂಬಾತನಿಗೆ ಸೇರಿದ 17 ಸಾವಿರ ಬೆಲೆ ಬಾಳುವ ಸೈಕಲ್ ಇದಾಗಿದ್ದು, ಜಿಮ್‌ಗೆ ಹೋಗಲು ಸೈಕಲ್‌ನಲ್ಲಿ ಯುವರಾಜ್ ಬಂದಿದ್ದ. ಇನ್ನು ಇದನ್ನು ನೋಡಿದ ಮೂವರು ಕಳ್ಳರು ಆಟೋದಲ್ಲಿ ಬಂದು, ದೂರದಲ್ಲಿ ನಿಂತು ಗಮನಿಸಿ ಯಾರು ಇಲ್ಲದ ವೇಳೆ ಈ ಕೃತ್ಯವನ್ನೆಸಗಿದ್ದಾರೆ.

17 ಸಾವಿರ ಬೆಲೆ ಬಾಳುವ ಸೈಕಲ್ ಕಳ್ಳತನ      Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಹಿಳೆಯ ಕೊಲೆಗೈದು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಭೂಪ..!

(ನ್ಯೂಸ್ ಕಡಬ) newskadaba.com ದಾವಣಗೆರೆ. ಡಿ. 24. ವ್ಯಕ್ತಿಯೋರ್ವ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ ನಂತರ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕೊಲೆಯಾದವರನ್ನು ಚಾಂದ್ ಸುಲ್ತಾನ(28) ಎಂದು ಗುರುತಿಸಲಾಗಿದೆ. ಇವರು ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಲೆಕ್ಕ ಪರಿಶೋಧಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿ ಸಾದತ್ ಹರಿಹರ ಮೂಲದವನಾಗಿದ್ದು, ಮೃತ ಮಹಿಳೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಾದತ್, ಸುಲ್ತಾನಳೊಂದಿಗೆ ಮಾತನಾಡಲು ಬಯಸುವುದಾಗಿ ಹೇಳಿದ್ದಾನೆ. ಸ್ವಲ್ಪ ಹೊತ್ತಿನ ನಂತರ

ಮಹಿಳೆಯ ಕೊಲೆಗೈದು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಭೂಪ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಐಸಿಐಸಿಐ ಬ್ಯಾಂಕ್ ನಿಂದ ಅಧಿಕಾರ ದುರುಪಯೋಗ ➤ ಮಾಜಿ ಸಿಇಒ ಬಂಧನ..!

(ನ್ಯೂಸ್ ಕಡಬ) newskadaba. com ನವದೆಹಲಿ, ಡಿ. 24. ಐಸಿಐಸಿಐ ಬ್ಯಾಂಕ್ ನಿಂದ ಮಂಜೂರಾದ ಸಾಲ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ ಬಂಧಿಸಿದೆ.   ವಿಡಿಯೊಕಾನ್‌ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ ಮತ್ತು ವಂಚನೆ ಆರೋಪ ಇವರ ಮೇಲಿದ್ದು, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚರ್,

ಐಸಿಐಸಿಐ ಬ್ಯಾಂಕ್ ನಿಂದ ಅಧಿಕಾರ ದುರುಪಯೋಗ ➤ ಮಾಜಿ ಸಿಇಒ ಬಂಧನ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top