ಕ್ರೈಮ್ ನ್ಯೂಸ್

ಮಂಗಳೂರು: ಜಲೀಲ್ ಕೊಲೆ ಹಿನ್ನೆಲೆ ➤ 4 ಠಾಣಾ ವ್ಯಾಪ್ತಿಯಲ್ಲಿ144 ಸೆಕ್ಷನ್ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 25. ಸುರತ್ಕಲ್ ನಲ್ಲಿ ಜಲೀಲ್ ಕೊಲೆ ಬೆನ್ನಲ್ಲೇ ಪಣಂಬೂರು, ಬಜ್ಪೆ, ಕಾವೂರು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಕಮಿಷನರ್ ಆದೇಶಿಸಿದ್ದಾರೆ. ಡಿ.25 ರ ಬೆಳಗ್ಗೆ 6 ಗಂಟೆಯಿಂದ ಡಿ.27 ರ ಬೆಳಗ್ಗೆ 6 ಗಂಟೆಯವರೆಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ. ಈ ನಿಷೇಧಾಜ್ಞೆ ಕ್ರಿಸ್ ಮಸ್ ಆಚರಣೆ, ತುರ್ತು ಸೇವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸುರತ್ಕಲ್, ಬಜಪೆ ಕಾವೂರು, […]

ಮಂಗಳೂರು: ಜಲೀಲ್ ಕೊಲೆ ಹಿನ್ನೆಲೆ ➤ 4 ಠಾಣಾ ವ್ಯಾಪ್ತಿಯಲ್ಲಿ144 ಸೆಕ್ಷನ್ ಜಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ಒಳಗೆ ನುಗ್ಗಿದ ಕಾರು  !!!!!                  

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 24. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ಒಳಗೆ ನುಗ್ಗಿದ ಘಟನೆ ಇಲ್ಲಿನ ಹಳೇ ಡಯಾನ ವೃತ್ತ ಬಳಿಯ ಕಲ್ಯಾಣ್ ಜುವೆಲ್ಲರ್ಸ್ ಬಳಿ ನಡೆದಿದೆ. ಯಾರಿಗೂ ಅಪಾಯ ಇಲ್ಲವೆಂದು ತಿಳಿದುಬಂದಿದೆ.      

ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ಒಳಗೆ ನುಗ್ಗಿದ ಕಾರು  !!!!!                   Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಿಹಾರದಲ್ಲಿ ಪಾಕ್ ಪರ ಘೋಷಣೆ ➤ ಐವರ ಬಂಧನ

(ನ್ಯೂಸ್ ಕಡಬ) newskadaba.com ಭೋಜ್‌ಪುರ, ಡಿ. 24. ಪಾಕ್ ಪರ ಘೋಷಣೆ ಕೂಗಿದ ಆರೋಪದಲ್ಲಿ ಐವರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.   ಭೋಜ್‌ಪುರದ ಚಾಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಆಟದಲ್ಲಿ ಜಯಗಳಿಸಿದ ಗುಂಪೊಂದು ವಿಜಯೋತ್ಸವ ಆಚರಿಸುವ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು, ಈ ವೀಡಿಯೋ ಇದೀಗ ವೈರಲ್ ಆಗಿದೆ. ವೀಡಿಯೋದಲ್ಲಿ ಟ್ರೋಫಿಯನ್ನು ಇಬ್ಬರು ಹಿಡಿದುಕೊಂಡಿದ್ದು, ಕೆಲವು ಯುವಕರು ಪಾಕ್ ಪರ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ್ದಾರೆ. ವೀಡಿಯೋವನ್ನು ಸಾಕ್ಷ್ಯವಾಗಿಟ್ಟುಕೊಂಡು ಐವರನ್ನು ಬಂಧಿಸುವಲ್ಲಿ

ಬಿಹಾರದಲ್ಲಿ ಪಾಕ್ ಪರ ಘೋಷಣೆ ➤ ಐವರ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಒಂದೇ ಭೂಮಿಗೆ ಡಬಲ್ ಪರಿಹಾರ  ➤ ಸರ್ಕಾರಕ್ಕೆ 19.99 ಕೋಟಿ ರೂ. ವಂಚನೆ       

(ನ್ಯೂಸ್ ಕಡಬ) newskadaba.com ಧಾರವಾಡ, ಡಿ. 24. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ವಶಪಡಿಸಿಕೊಂಡ ಜಮೀನಿಗೆ ಎರಡೆರಡು ಬಾರಿ ಪರಿಹಾರ ನೀಡಿ ಸರಕಾರಕ್ಕೆ 19.99 ಕೋಟಿ ರೂ. ವಂಚಿಸಿದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದಿದ್ದು, ರೈತರ ಹೆಸರಿನಲ್ಲಿ ಈ ಅಕ್ರಮ ನಡೆದಿದೆಯಾದರೂ ರೈತ ಫಲಾನುಭವಿಗಳಿಗೆ ತಮ್ಮ ಖಾತೆ ಮೂಲಕ ಇಷ್ಟೊಂದು ಹಣ ವರ್ಗಾವಣೆ ಆಗಿದೆ ಎಂಬುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಧಾರವಾಡ ಕೆಐಎಡಿಬಿಯಲ್ಲಿ ನಡೆದ ಈ ಹಗರಣವು ಇದೀಗ ಸರಕಾರವನ್ನು ಮುಜುಗರಗೊಳಿಸಿದೆ. 2011-12ರಲ್ಲಿ ಸ್ವಾಧೀನ ಪಡಿಸಿಕೊಂಡ

ಒಂದೇ ಭೂಮಿಗೆ ಡಬಲ್ ಪರಿಹಾರ  ➤ ಸರ್ಕಾರಕ್ಕೆ 19.99 ಕೋಟಿ ರೂ. ವಂಚನೆ        Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚೆಕ್‌ಪೋಸ್ಟ್‌ಗಳಲ್ಲಿ ಲಂಚಾವತಾರ ➤ ಕ್ರಿಮಿನಲ್‌ ಕೇಸ್‌ ತನಿಖೆಗೆ ಲೋಕಾಯುಕ್ತರ ಆದೇಶ       

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ರಾಜ್ಯದ ಚೆಕ್‌ ಪೋಸ್ಟ್‌ಗಳಲ್ಲಿ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳ ಲಂಚಾವತಾರ, ಕರ್ತವ್ಯಲೋಪ ಬಯಲು ಮಾಡಿರುವ ಲೋಕಾಯುಕ್ತ ಪೊಲೀಸರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆ, ವಿಜಯಪುರದ ಝಳಕಿ ಸೇರಿದಂತೆ ರಾಜ್ಯದ ಎಂಟು ಚೆಕ್‌ಪೋಸ್ಟ್‌ಗಳಲ್ಲಿ ಪತ್ತೆಯಾದ 11 ಲಕ್ಷ ರೂ.ಗಳಿಗೂ ಅಧಿಕ ಅನಧಿಕೃತ ಹಣ, ಆರ್‌ಟಿಓ ಅಧಿಕಾರಿಗಳ ನಿಯಮ ಉಲ್ಲಂಘನೆ, ಕರ್ತವ್ಯ ಲೋಪವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌

ಚೆಕ್‌ಪೋಸ್ಟ್‌ಗಳಲ್ಲಿ ಲಂಚಾವತಾರ ➤ ಕ್ರಿಮಿನಲ್‌ ಕೇಸ್‌ ತನಿಖೆಗೆ ಲೋಕಾಯುಕ್ತರ ಆದೇಶ        Read More »

ಕರ್ನಾಟಕ, ಕ್ರೈಮ್ ನ್ಯೂಸ್

 8ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಆರೋಪಿ ಅರೆಸ್ಟ್                    

(ನ್ಯೂಸ್ ಕಡಬ) newskadaba.com ಕೊಪ್ಪಳ, ಡಿ. 24. 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಬಾಲಕಿಯ ದೇಹದಲ್ಲಿ ಆದ ಬದಲಾವಣೆಗಳನ್ನು ಆಕೆಯ ಪೋಷಕರು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಹೆಚ್ಚಿನ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಆರು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಕುಟುಂಬ ಸದಸ್ಯರ ಹಿಂದೇಟು ಮತ್ತು ಸಾಮಾಜಿಕ ಕಳಂಕದ ಭಯದಿಂದ ಬಾಲಕಿ ಘಟನೆಯ ಬಗ್ಗೆ ಯಾವುದೇ ವಿವರವನ್ನು

 8ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಆರೋಪಿ ಅರೆಸ್ಟ್                     Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುರತ್ಕಲ್: ಬೈಕ್ ಗಳಿಗೆ ಕಂಟೈನರ್ ಲಾರಿ ಢಿಕ್ಕಿ ➤ ಮೂವರಿಗೆ ಗಾಯ  

(ನ್ಯೂಸ್ ಕಡಬ) newskadaba.com ಸುರತ್ಕಲ್, ಡಿ. 24. ಕಂಟೈನರ್ ಲಾರಿ ಹಾಗೂ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ಹಾಗೂ ಓರ್ವ ಪಾದಚಾರಿ ಮಹಿಳೆಗೆ ಗಂಭೀರ ಗಾಯಗೊಂಡ ಘಟನೆ ಕುಳಾಯಿ ಹೊನ್ನಕಟ್ಟೆ ಬಳಿ ವರದಿಯಾಗಿದೆ.   ಮಂಗಳೂರು ಕಡೆಯಿಂದ ಸುರತ್ಕಲ್ ಭಾಗಕ್ಕೆ ಮಲ್ಟಿ ಚೇಸ್ ಕಂಟೈನರ್ ಹೋಗುತ್ತಿದ್ದ ವೇಳೆ ಏಕಾಏಕಿ ಸಿಗ್ನಲ್ ಬಿದ್ದಿದ್ದರಿಂದ ಅತಿಯಾದ ವೇಗದಲ್ಲಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ತಿರುಗಿ, ಲಾರಿ ಡಿವೈಡರ್ ಏರಿಕೊಂಡು ಎದುರಿನಿಂದ ಬರುತ್ತಿದ್ದ ಒಂದು

ಸುರತ್ಕಲ್: ಬೈಕ್ ಗಳಿಗೆ ಕಂಟೈನರ್ ಲಾರಿ ಢಿಕ್ಕಿ ➤ ಮೂವರಿಗೆ ಗಾಯ   Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಕ್ರಮ ಕಸಾಯಿ ಖಾನೆಗೆ ಹಿಂಜಾವೇ ಕಾರ್ಯಕರ್ತರಿಂದ ದಾಳಿ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ. 24. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಹಿಂಜಾವೇ ಕಾರ್ಯಕರ್ತರು, ಇಬ್ಬರು ಆರೋಪಿಗಳ ಸಹಿತ 4 ಗೋವು ಹಾಗೂ ಹೆಚ್ಚಿನ ಪ್ರಮಾಣದ ಮಾಂಸ ವಶಪಡಿಸಿಕೊಂಡ ಘಟನೆ ಮೂಡಬಿದಿರೆ ತಾಲೂಕಿನ ಆಲಂಗಾರು ಎಂಬಲ್ಲಿ ನಡೆದಿದೆ. ಬಂಧಿತರನ್ನು ಗಿಲ್ಬರ್ಟ್ ಮಿರಾಂದ ಹಾಗೂ ಕ್ಲಾರಿನ್ ಆಲ್ವಿನ್ ಎಂದು ಗುರುತಿಸಲಾಗಿದೆ. ಆಲಂಗಾರಿನ ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವರ ಅಕ್ರಮ ಕಸಾಯಿ ಖಾನೆಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹಿಂಜಾವೇ ಕಾರ್ಯಕರ್ತರು ಆರೋಪಿಗಳನ್ನು ಹಿಡಿದು ಮೂಡಬಿದ್ರೆ

ಅಕ್ರಮ ಕಸಾಯಿ ಖಾನೆಗೆ ಹಿಂಜಾವೇ ಕಾರ್ಯಕರ್ತರಿಂದ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಲಾರಿ ಹರಿದು ಬೈಕ್ ಹಿಂಬದಿ ಸವಾರ ಮೃತ್ಯು 

(ನ್ಯೂಸ್ ಕಡಬ) newskadaba.com  ರಾಯಚೂರು, ಡಿ.24  ಬೈಕ್ ಹಿಂಬದಿ ಸವಾರ  ಆಯತಪ್ಪಿ ಬಿದ್ದಾಗ ಲಾರಿ ಹರಿದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೇಡರ ಕಾರಲಕುಂಟೆ ಗ್ರಾಮದ ಬಳಿ ಸಂಭವಿಸಿದೆ ಎನ್ನಲಾಗಿದೆ. ಮೃತಪಟ್ಟವರನ್ನು ಲಿಂಗಸುಗೂರು ತಾಲ್ಲೂಕಿನ ಯರಗಂಟೆ ಗ್ರಾಮದ ಶಿವಗ್ಯಾನಪ್ಪ ತಳವಾರ (38)  ಎಂದು ಗುರುತಿಸಲಾಗಿದೆ.  ಮಸ್ಕಿಯಿಂದ ಲಿಂಗಸುಗೂರಿಗೆ ತೆರಳುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪೊಲೀಸರು ಲಾರಿ ಶೋಧ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.    

ಲಾರಿ ಹರಿದು ಬೈಕ್ ಹಿಂಬದಿ ಸವಾರ ಮೃತ್ಯು  Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಳ್ಳಾಲ: ಸ್ಕೂಟರಿಗೆ ಢಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರು ಚಾಲಕ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 24. ವಿದೇಶಿ ವಿದ್ಯಾರ್ಥಿಗಳಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಕಾರಿನಲ್ಲಿ ಪರಾರಿಯಾಗಲೆತ್ನಿಸಿದ ಚಾಲಕನನ್ನು ತಡೆದ ಸ್ಥಳೀಯರು, ಪೊಲೀಸರಿಗೆ ಒಪ್ಪಿಸಿದ ಘಟನೆ ತಲಪಾಡಿ ದೇವಿನಗರ ಎಂಬಲ್ಲಿ ವರದಿಯಾಗಿದೆ. ಬಂಧಿತರನ್ನು ಕೇರಳದ ಅಹಮ್ಮದ್ ಮುಬಾರಿಷ್ ಎ.ಕೆ ಎಂದು ಗುರುತಿಸಲಾಗಿದೆ. ಗಾಯಾಗೊಂಡವರನ್ನು ಸವಾರ ಸೆಟಿದ್ ಬಾಷಾಂಗ್(30) ಹಾಗೂ ಸಹ ಸವಾರ ಅಲಿ ಸಾಗರ್(30) ಎಂದು ಗುರುತಿಸಲಾಗಿದೆ. ಅಹಮ್ಮದ್ ಮುಬಾರಿಷ್ ಕಾರಿನಲ್ಲಿ ಮಂಗಳೂರಿನಿಂದ ಕೇರಳದ ಕಡೆಗೆ ಅತಿ ವೇಗದಿಂದ ಧಾವಿಸಿ ರಾ.ಹೆ. 66 ರ ಕೋಟೆಕಾರು

ಉಳ್ಳಾಲ: ಸ್ಕೂಟರಿಗೆ ಢಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರು ಚಾಲಕ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top