ಹಾಡಹಗಲೇ ಯುವತಿಯ ಬರ್ಬರ ಹತ್ಯೆ..!

(ನ್ಯೂಸ್ ಕಡಬ) newskadaba.com  ದಾವಣಗೆರೆ , ಡಿ 22 :  ಯುವತಿಯೋರ್ವಳ ಕತ್ತು ಕೊಯ್ದು ಹತ್ಯೆ ಮಾಡಿರುವ ಭೀಕರ ಘಟನೆ ಪಿ.ಜೆ. ಬಡಾವಣೆಯ ಚರ್ಚ್ ರಸ್ತೆಯಲ್ಲಿನ ಲುಡ್ಸ್ ಶಾಲೆ ಸಮೀಪದಲ್ಲಿ ವರದಿಯಾಗಿದೆ.

ಹತ್ಯೆಯಾದ ಯುವತಿಯನ್ನು ಚಾಂದ್ ಸುಲ್ತಾನ್ (26)  ಎಂದು ಗುರುತಿಸಲಾಗಿದೆ.

ಚಾಂದ್ ಸುಲ್ತಾನ್ ಅವರು ಎಂದಿನಂತೆ  ಬೆಳಿಗ್ಗೆ ದ್ವಿ ಚಕ್ರ ವಾಹನದಲ್ಲಿ ಕೆಲಸಕ್ಕೆಂದು ತೆರೆಳಿದ್ದರು, ಈ ವೇಳೆ ದುಷ್ಕರ್ಮಿಯೊಬ್ಬ ತಡೆದು ನಿಲ್ಲಿಸಿ ಸುಲ್ತಾನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.ನಗರದ ಮುಖ್ಯರಸ್ತೆಯಲ್ಲಿಯೇ ಈ ಘಟನೆ ನಡೆದಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

Scroll to Top