ಸುಳ್ಯ: ಎಚ್ಚೆತ್ತ ಕಂದಾಯ ಇಲಾಖೆ ➤ ಅಕ್ರಮ ಮರಳು ಸಾಗಾಟದ 3 ಲಾರಿ ವಶಕ್ಕೆ



(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಟದ ಮೇಲೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಮೂರು ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಸುಳ್ಯದಲ್ಲಿ ವರದಿಯಾಗಿದೆ.







ಕಂದಾಯ ನಿರೀಕ್ಷಕರ ತಂಡದ ನೇತೃತ್ವದಲ್ಲಿ ಮರಳು ಸಾಗಾಟ ಮತ್ತು ಕೆಂಪು ಕಲ್ಲಿನ ಸಾಗಾಟದ ಲಾರಿಗಳ ಮೇಲೆ ದಿಢೀರ್ ದಾಳಿ ನಡೆದು ಮೂರು ಲಾರಿಗಳನ್ನು ವಶ ಪಡೆದುಕೊಳ್ಳಲಾಗಿದೆ. ಇದೀಗ ಸದ್ಯ ಮೂರು ವಾಹನಗಳನ್ನು ಕಂದಾಯ ನಿರೀಕ್ಷಕರ ಕಚೇರಿ ಬಳಿ ಇರಿಸಲಾಗಿದ್ದು ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.






 

 

error: Content is protected !!
Scroll to Top