ಕಾರಿ ನಲ್ಲೇ ಸಾಫ್ಟ್ ವೇರ್ ಉದ್ಯೋಗಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ. 21. ಕಾರಿನಲ್ಲೇ ಸಾಫ್ಟ್ ವೇರ್ ಉದ್ಯೋಗಿಯೋರ್ವರು ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಮೃತರನ್ನು ವಿಜಯ್ ಕುಮಾರ್ (51) ಎಂದು ಗುರುತಿಸಲಾಗಿದೆ. ಇವರು ಐಟಿ ಎಂಜಿನಿಯರ್ ಆಗಿದ್ದರು. ಇವರು ಮಹಾಲಕ್ಷ್ಮಿ ಲೇಔಟ್ ನ ಕುರುಬರಹಳ್ಳಿ ಜಂಕ್ಷನ್ ನಲ್ಲಿ ಕಾರಿನ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡಿ, ಗ್ಲಾಸ್ ಕ್ಲೋಸ್  ಮಾಡಿಕೊಂಡು ತಲೆಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡಿರೋದನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ  ವಿಜಯ್ ಕುಮಾರ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದಾರೆ.

Scroll to Top