ಯುವಕನ ಬರ್ಬರ ಕೊಲೆ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಯುವಕನೋರ್ವನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಗಡೆನಗರದ ಬಾಲಾಜಿ ಲೇಔಟ್ ಬಳಿ ಸಂಭವಿಸಿದೆ.

ಕೊಲೆಯಾದ ಯುವಕನನ್ನು ಹೆಗಡೆನಗರ ನಿವಾಸಿ ಸಲ್ಮಾನ್ (17) ಎಂದು ಗುರುತಿಸಲಾಗಿದೆ. ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಂದ ಹಂತಕರು ಯುವಕನನ್ನು ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Scroll to Top