ಬ್ರೇಕಿಂಗ್ ನ್ಯೂಸ್

ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ: ಬೆಂಗಳೂರಿನ FSLನಲ್ಲಿ ನಾರ್ಕೋ, ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಆರಂಭ

(ನ್ಯೂಸ್‌ ಕಡಬ) newskadaba.com, ಆ.22: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗೇರುಕಟ್ಟೆ ಸಮೀಪದ ಸಂಭೋಳ್ಯ ನಿವಾಸಿ, 15 ವರ್ಷದ ವಿದ್ಯಾರ್ಥಿ ಸುಮಂತ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪ್ರಕರಣದ ಸತ್ಯಾಸತ್ಯತೆ ಹೊರತರಲು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಬ್ರೈನ್ ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ಪ್ರಾರಂಭಿಸಲಾಗಿದೆ. ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಸುಮಂತ್, 2026ರ ಜನವರಿ 14ರಂದು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ನಿಗೂಢವಾಗಿ ಮೃತಪಟ್ಟಿದ್ದರು.ಬೆಳ್ತಂಗಡಿ ವೃತ್ತ […]

ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ: ಬೆಂಗಳೂರಿನ FSLನಲ್ಲಿ ನಾರ್ಕೋ, ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಿಂಚಣಿದಾರರಿಗೆ ಸರ್ಕಾರದ ಬಿಗ್ ರಿಲೀಫ್: ₹32,000 ರಿಂದ ₹1,20,000 ಕ್ಕೆ ಏರಿಕೆಯಾದ ಆದಾಯ ಮಿತಿ!

(ನ್ಯೂಸ್‌ ಕಡಬ) newskadaba.com,  ಆ.21: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು ₹32,000 ರಿಂದ ₹1,20,000 ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ.ಭೌತಿಕ ಪರಿಶೀಲನೆ ನಂತರ ₹1.20 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಪುನರಾರಂಭ. ‘ಸಂಯೋಜನೆ’ ಮೊಬೈಲ್ ಆ್ಯಪ್ ಮೂಲಕ ನಡೆಸಿದ ಪರಿಶೀಲನೆಯಲ್ಲಿ 23,14,544 ಸಂದೇಹಾಸ್ಪದ ಖಾತೆಗಳು ಪತ್ತೆಯಾಗಿದ್ದವು.ಸೂಕ್ತ ದಾಖಲೆ ಹಾಗೂ ವಿಳಾಸ ನೀಡದ ಕಾರಣ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಗ್ರಾಮ ಆಡಳಿತಾಧಿಕಾರಿಗಳ ವರದಿ ಆಧಾರದ ಮೇಲೆ

ಪಿಂಚಣಿದಾರರಿಗೆ ಸರ್ಕಾರದ ಬಿಗ್ ರಿಲೀಫ್: ₹32,000 ರಿಂದ ₹1,20,000 ಕ್ಕೆ ಏರಿಕೆಯಾದ ಆದಾಯ ಮಿತಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಬೆಂಕಿ ಅವಘಡ- ದಿನಸಿ ಅಂಗಡಿ ಸಂಪೂರ್ಣ ಭಸ್ಮ

(ನ್ಯೂಸ್‌ ಕಡಬ) newskadaba.com,  ಆ.21: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳದಲ್ಲಿ ಬುಧವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ದಿನಸಿ ಅಂಗಡಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂದ್ರಾಳ ನಿವಾಸಿ ಶರೀಫ್ ಅವರ ಒಡೆತನದ ಅಂಗಡಿಯಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, . ಜ್ವಾಲೆಗಳು ಅಂಗಡಿ ಮತ್ತು ಕಟ್ಟಡವನ್ನು ಬೇಗನೆ ವ್ಯಾಪಿಸಿದ್ದರಿಂದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಮುಂದಾದರು. ಅವರ ಸಕಾಲಿಕ ಕಾರ್ಯಚರಣೆಯಿಂದ ಬೆಂಕಿ ಮತ್ತಷ್ಟು ಹರಡುವುದನ್ನು ತಡೆಯಲು

ಬೆಳ್ತಂಗಡಿ: ಬೆಂಕಿ ಅವಘಡ- ದಿನಸಿ ಅಂಗಡಿ ಸಂಪೂರ್ಣ ಭಸ್ಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಕಲಿ ಔಷಧ ಜಾಲಕ್ಕೆ ಬ್ರೇಕ್: ಸಿ. ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ ಆದೇಶ

(ನ್ಯೂಸ್‌ ಕಡಬ) newskadaba.com,  ಆ.21: ಬೆಂಗಳೂರು ದಕ್ಷಿಣದ ದೊಡ್ಡೇರಿ ಹಾಗೂ ಬಿದದಿ ಸಮೀಪದ ಕುರುಬರಹಳ್ಳಿಯಲ್ಲಿ ಬಹುಕೋಟಿ ಮೌಲ್ಯದ ಬೃಹತ್ ನಕಲಿ ಔಷಧ ತಯಾರಿಕಾ ಮತ್ತು ಪೂರೈಕೆ ಜಾಲ ಪತ್ತೆಯಾಗಿದೆ. ಆಗಸ್ಟ್ 18ರಂದು ಕರ್ನಾಟಕ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಂಗ್ ನಡೆಸಿದ ದಾಳಿಯಲ್ಲಿ ಸುಮಾರು 5.05 ಕೋಟಿ ರೂ. ಮೌಲ್ಯದ ನಕಲಿ ಔಷಧಗಳು, ಯಂತ್ರೋಪಕರಣಗಳು ಹಾಗೂ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರತಿಷ್ಠಿತ MNC ಕಂಪನಿಗಳ ಹೆಸರಿನಲ್ಲಿ ಜೀವಕ್ಕೆ ಅಪಾಯ ತರುವ ನಕಲಿ ಇಂಜೆಕ್ಷನ್‌ ಹಾಗೂ ಮಾತ್ರೆಗಳನ್ನು ಈ ಅಂತಾರಾಜ್ಯ ಜಾಲ ಪೂರೈಸುತ್ತಿತ್ತು.. ಪ್ರಕರಣವನ್ನು

ನಕಲಿ ಔಷಧ ಜಾಲಕ್ಕೆ ಬ್ರೇಕ್: ಸಿ. ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಸೆಂಟ್ರಲ್: ವಂದೇ ಭಾರತ್ ರೈಲಿನ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ

(ನ್ಯೂಸ್‌ ಕಡಬ) newskadaba.com,  ಆ.21:  ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಆಹಾರ ಪೂರೈಸುವ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ, ನೈರ್ಮಲ್ಯ, ಆಹಾರ ತಯಾರಿಕೆ, ಸಾಗಣೆ ವಾಹನಗಳ ಶುಚಿತ್ವ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದರು.ಆಹಾರ ಸುರಕ್ಷತಾ ಉಲ್ಲಂಘನೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ರಾಜ್ಯ ಸರ್ಕಾರ ‘QR

ಮಂಗಳೂರು ಸೆಂಟ್ರಲ್: ವಂದೇ ಭಾರತ್ ರೈಲಿನ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳದಲ್ಲಿ ಹಾಡಹಗಲೇ ಭೀಕರ ದರೋಡೆ: ₹8 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾದ ಮುಸುಕುಧಾರಿಗಳು!

(ನ್ಯೂಸ್‌ ಕಡಬ) newskadaba.com,  ಆ.20: ಬಂಟ್ವಾಳದ ಗ್ರಾಮೀಣ ಭಾಗದ ಮುಲ್ಕಾಜೆ ಮಾಡದಲ್ಲಿ ಬೈಕ್ ಸವಾರನನ್ನು ಅಡ್ಡಗಟ್ಟಿ ಹಾಡಹಗಲೇ ಭೀಕರ ದರೋಡೆ ನಡೆಸಲಾಗಿದೆ.ಸುರತ್ಕಲ್ ನಿವಾಸಿ ಮಯ್ಯದಿ. ವಿವಿಧ ಅಂಗಡಿಗಳಿಂದ ಸಿಮೆಂಟ್ ಪೂರೈಕೆಯ ಹಣ ವಸೂಲಿ ಮಾಡಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ.ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಮಯ್ಯದಿಯವರನ್ನು ಅಡ್ಡಗಟ್ಟಿ, ತಲವಾರು ತೋರಿಸಿ ಬೆದರಿಸಿ ಹಣದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ ಸುಮಾರು ₹8 ಲಕ್ಷಕ್ಕೂ ಅಧಿಕ ನಗದು ಹಣವಿತ್ತು ಎಂದು ಶಂಕಿಸಲಾಗಿದೆ.ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್

ಬಂಟ್ವಾಳದಲ್ಲಿ ಹಾಡಹಗಲೇ ಭೀಕರ ದರೋಡೆ: ₹8 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾದ ಮುಸುಕುಧಾರಿಗಳು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಬಸ್ ಬೆಂಕಿಗಾಹುತಿ: ಶಾರ್ಟ್ ಸರ್ಕ್ಯೂಟ್ ಶಂಕೆ

(ನ್ಯೂಸ್‌ ಕಡಬ) newskadaba.com,  ಆ.20: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಎಕ್ಸ್‌ಪ್ರೆಸ್ ಬಸ್‌ !ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಸಮೀಪ ಗುರುವಾರ ಬೆಳಗ್ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಏಕಾಏಕಿ ಬೆಂಕಿಗೆ ಆಹುತಿಯಾಗಿದೆ. ಬಸ್ ಉಡುಪಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದತ್ತ ತನ್ನ ಎಂದಿನ ಸಂಚಾರದಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ವೇಳೆ ಪ್ರಯಾಣಿಕರ ಸುರಕ್ಷತೆ ಹಾಗೂ ಹಾನಿಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ

ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಬಸ್ ಬೆಂಕಿಗಾಹುತಿ: ಶಾರ್ಟ್ ಸರ್ಕ್ಯೂಟ್ ಶಂಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಸೈಂಟ್ ಆನ್ಸ್ ಶಾಲೆಯಲ್ಲಿ ರೋಬೋಟಿಕ್ ಕಲಿಕೆ ಉದ್ಘಾಟನೆ

(ನ್ಯೂಸ್‌ ಕಡಬ) newskadaba.com,  ಆ.20:  ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್(CBE) ಹಾಗೂ STEM ರೋಬೋಟಿಕ್ಸ್ ಇದರ ನೇತೃತ್ವದಲ್ಲಿ  ಸೈಂಟ್ ಆನ್ಸ್  ಆಂಗ್ಲ ಮಾಧ್ಯಮ ಶಾಲೆ, ಕಡಬದಲ್ಲಿ ಕಂಪ್ಯೂಟರ್ ವಿಭಾಗಕ್ಕೆ ಸಂಬಂಧಿಸಿದಂತೆ ರೋಬೋಟಿಕ್ ಎಂಬ ಹೊಸ ಕಲಿಕಾ ಮಾದರಿಯನ್ನು ಸೇರಿಸಲಾಗಿದೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಅದರ ವ್ಯಾಪ್ತಿಯನ್ನು ಪರಿಗಣಿಸಿ ಸಲುವಾಗಿ ಹೊಸ ಕಲಿಕಾ ಮಾದರಿಯನ್ನು ರೋಬೋಟಿಕ್ ಮುಖಾಂತರ ನೀಡಲಾಗಿದೆ. ನವಯುಗದ ತಂತ್ರಜ್ಞಾನವನ್ನು ಮಕ್ಕಳಿಗೆ ಸಲುವಾಗಿ ರೋಬೋಟಿಕ್ಸ್ ಹಾಗೂ ಎಐ ಎಂಬ ನವೀನ ಮಾದರಿಯು ಮಕ್ಕಳಲ್ಲಿ ಹೊಸ

ಕಡಬ ಸೈಂಟ್ ಆನ್ಸ್ ಶಾಲೆಯಲ್ಲಿ ರೋಬೋಟಿಕ್ ಕಲಿಕೆ ಉದ್ಘಾಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೋಷಕರಿಗೆ ದೂರು ನೀಡಿದ್ದಕ್ಕೆ ಶಿಕ್ಷಕಿಯ ಭೀಕರ ಕೊಲೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು

 heaತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿ ರೂಪಾ ರೆಡ್ಡಿ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ದುಬಾರಿ ಐಫೋನ್ ಹಾಗೂ ಬೈಕ್ ಖರೀದಿಸುವ ಆಸೆಯಲ್ಲಿದ್ದ ವಿದ್ಯಾರ್ಥಿಗಳ ಬಳಿ ಅಕ್ರಮವಾಗಿ ಇಟ್ಟುಕೊಂಡಿದ್ದ ಹಣ ಮತ್ತು ಮೊಬೈಲ್ ಪತ್ತೆಯಾಗಿತ್ತು. ಇದನ್ನು ಪೋಷಕರಿಗೆ ತಿಳಿಸುವುದಾಗಿ ಶಿಕ್ಷಕಿ ಎಚ್ಚರಿಸಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ. ಒಂದು ವಾರದಿಂದ ಶಿಕ್ಷಕಿಯ ಮನೆಯ ಮೇಲೆ ಕಣ್ಗಾವಲಿಟ್ಟು, ಚಾಕು, ಮುಖವಾಡ ಹಾಗೂ ಕೈಗವಸುಗಳನ್ನು ಖರೀದಿಸಿ ಮನೆಯ ಹಿಂಬಾಗಿಲಿನಿಂದ

ಪೋಷಕರಿಗೆ ದೂರು ನೀಡಿದ್ದಕ್ಕೆ ಶಿಕ್ಷಕಿಯ ಭೀಕರ ಕೊಲೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು ಬಳಿ ಬಿಡದಿಯಲ್ಲಿ ಬೃಹತ್ ನಕಲಿ ಔಷಧ ತಯಾರಿಕಾ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ!

(ನ್ಯೂಸ್‌ ಕಡಬ) newskadaba.com,  ಆ.20:  ಬೆಂಗಳೂರಿನ ಬಿಡದಿ ಸಮೀಪ ಲೈಸೆನ್ಸ್‌ರಹಿತ ನಕಲಿ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಲಾಗಿದೆ ₹5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಗಳು, ಯಂತ್ರಗಳು ಹಾಗೂ Pfizer ಸೇರಿದಂತೆ ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ತಂದು, ಹೊಸ ವಯಲ್‌ಗಳಿಗೆ ತುಂಬಿ ದುಬಾರಿ ಆಮದು ಬ್ರ್ಯಾಂಡ್‌ಗಳ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದರು. ಕ್ಯಾನ್ಸರ್ ಹಾಗೂ ICUನಲ್ಲಿ ಬಳಸುವ ಅತ್ಯಂತ ಗಂಭೀರ

ಬೆಂಗಳೂರು ಬಳಿ ಬಿಡದಿಯಲ್ಲಿ ಬೃಹತ್ ನಕಲಿ ಔಷಧ ತಯಾರಿಕಾ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top