ಬ್ರೇಕಿಂಗ್ ನ್ಯೂಸ್

ಆಲಂಕಾರು: ಅಪಾಯವನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಅಟೋರಿಕ್ಷಾ

(ನ್ಯೂಸ್ ಕಡಬ) newskadaba.com ಆಲಂಕಾರು, ಜ. 18. ಆಟೋ ರಿಕ್ಷಾವೊಂದು ಅಪಘಾತವನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿದ್ದ ಚರಂಡಿಗೆ ಬಿದ್ದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಕಡಬಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾವೊಂದು ವಿರುದ್ದ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ವಾಹನದಿಂದ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

ಆಲಂಕಾರು: ಅಪಾಯವನ್ನು ತಪ್ಪಿಸಲು ಹೋಗಿ ಚರಂಡಿಗಿಳಿದ ಅಟೋರಿಕ್ಷಾ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನೈತಿಕ ವಿಚಾರ ಶಂಕಿಸಿ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಪತಿ…!

(ನ್ಯೂಸ್ ಕಡಬ) newskadaba.com ಮೈಸೂರು, ಜ. 18. ಪತಿಯೋರ್ವ ಪತ್ನಿಯನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಹುಣಸೂರಿನಲ್ಲಿ ನಡೆದಿದೆ. ಮೃತರನ್ನು ಹುಣಸೂರಿನ ಕಲ್ಕುಣಿಕೆ ಮಾರಿಗುಡಿ ಬೀದಿ ನಿವಾಸಿ ರವಿ ಎಂಬವನ ಪತ್ನಿ ಸೌಮ್ಯ(31) ಎಂದು ಗುರುತಿಸಲಾಗಿದೆ. ಇವರು ಮಂಡ್ಯದ ಸಾತನೂರು ಗ್ರಾಮದವರಾಗಿದ್ದು, 11 ವರ್ಷಗಳ ಹಿಂದೆ ರವಿಯನ್ನು ವಿವಾಹವಾಗಿದ್ದರು. ಇವರು ಆಶಾ ಕಾರ್ಯಕರ್ತೆ ಆಗಿ ದುಡಿಯುತ್ತಿದ್ದರು ಎಂದು ತಿಲಕಿದು ಬಂದಿದೆ. ಈ ದಂಪತಿಗೆ 9 ಹಾಗೂ 7 ವರ್ಷದ ಎರಡು ಗಂಡು ಮಕ್ಕಳಿದ್ದಾರೆ. ಕಳೆದ 6 ತಿಂಗಳಿನಿಂದ

ಅನೈತಿಕ ವಿಚಾರ ಶಂಕಿಸಿ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಪತಿ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕುಂತೂರು: ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಪೆರಾಬೆ, ಜ. 18. ಇಲ್ಲಿನ ಮನೆಯೊಂದರಲ್ಲಿ ಕೆಲ ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರ ಕೊಳೆತ ಮೃತ ದೇಹವೊಂದು ಕುಂತೂರು ಗ್ರಾಮದ ಎರ್ಮಾಳು ಎಂಬಲ್ಲಿ ಪತ್ತೆಯಾಗಿದೆ. ಮೃತರನ್ನು ಬಾಲು ಕೊರಗ ಎಂದು ಗುರುತಿಸಲಾಗಿದೆ. ಇಲ್ಲಿನ ಮನೆಯೊಂದರಲ್ಲಿ ದುರ್ವಾಸನೆ ಬೀರುತ್ತಿದ್ದ ಕಾರಣ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಬಾಲು ಕೊರಗ ಎಂಬುವವರು ಮಲಗಿದಲ್ಲಿಯೇ ಮೃತ ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಬಳಿಕ ಪೊಲೀಸರ ನೇತೃತ್ವದಲ್ಲಿ ಮೃತ ಸಂಬಂಧಿಕರ ಉಪಸ್ಥಿತಿಯಲ್ಲಿ ಸ್ಥಳೀಯರು ಸೇರಿ

ಕುಂತೂರು: ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪ್ರತೀ ವರ್ಷ ನಡೆಯುತ್ತಿದ್ದ ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನ ರದ್ದು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 18. ಗಣರಾಜ್ಯೋತ್ಸವದಂದು ಲಾಲ್ ಭಾಗ್ ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ವರ್ಷ ರದ್ದು ಮಾಡಲಾಗಿದೆ. ಮುಖ್ಯಮಂತ್ರಿಯವರು ಎರಡು ದಿನಗಳ ಮೊದಲು ಫಲಪುಷ್ಪ ಪ್ರದರ್ಶನಕ್ಕೆ ಅನುಮತಿ ನೀಡಿದ್ದರಾದರೂ ಬಿಬಿಎಂಪಿ ಅನುಮತಿ ನಿರಾಕರಣೆ ಮಾಡಿದ ಹಿನ್ನೆಲೆ ಇದನ್ನು ರದ್ದು ಮಾಡಲಾಗಿದೆ. 2021ರ ಸ್ವಾತಂತ್ರ್ಯೋತ್ಸವ ವೇಳೆ ಈ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಪ್ರತೀ ವರ್ಷ ನಡೆಯುತ್ತಿದ್ದ ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನ ರದ್ದು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮದುವೆಗೆ ಒತ್ತಾಯಿಸಿದ ಮಗನನ್ನೇ ಕೊಂದ ತಂದೆ..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜ. 18. ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ತಂದೆ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹೈದರಾಬಾದ್ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದವರನ್ನು ನರೇಶ್ ಎಂಸು ಗುರುತಿಸಲಾಗಿದೆ. ಎಲ್ಲಯ್ಯ ಮಗನನ್ನು ಕೊಂದ ಆರೋಪಿ ತಂದೆ. ಮಗನು ಮದುವೆಯಾಗುವಂತೆ ಪ್ರತೀ ನಿತ್ಯ ಹಿಂಸೆ ಮಾಡುತ್ತಾನೆ, ಈ ವಿಷಯದಲ್ಲಿ ತಂದೆ-ಮಗನಿಗೆ ದಿನಾಲೂ ಜಗಳವಾಗುತ್ತಿತ್ತು. ಶನಿವಾರದಂದು ಸಂಜೆ ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಈ ವೇಳೆ ಸಿಟ್ಟಿನಿಂದ ಹತ್ತಿರದಲ್ಲಿದ್ದ ಕೊಡಲಿಯಿಂದ ಬಲವಾಗಿ ಹೊಡೆದಿದ್ದಾನೆ. ಹೊಡೆತಕ್ಕೆ ಗಂಭೀರ

ಮದುವೆಗೆ ಒತ್ತಾಯಿಸಿದ ಮಗನನ್ನೇ ಕೊಂದ ತಂದೆ..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಟಿಎಂ ನಿಂದ ನಗದು ದೋಚಿದ ಖತರ್ನಾಕ್ ಕಳ್ಳರು

(ನ್ಯೂಸ್ ಕಡಬ) newskadaba.com ತುಮಕೂರು, ಜ. 18. ಎಟಿಎಂ ಬಾಗಿಲು ಹೊಡೆದು ನಗದು ದೋಚಿದ ಘಟನೆ ಹೊರವಲಯದ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದಾರ್ಥ ಮೆಡಿಕಲ್ ಕಾಲೇಜು ಬಳಿಯಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕಿಗೆ ಸೇರಿದ ಎಟಿಎಂ ನಿಂದ ನಗದು ಕಳ್ಳತನಗೈಯ್ಯಲಾಗಿದೆ. ಈ ಕಟ್ಟಡದ ಮೇಲ್ಬಾಗದಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ ಗೆ ಮುಂಜಾನೆ ಯುವಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅವರು ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿದ್ದು, ತುಮಕೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎಟಿಎಂ ನಿಂದ ನಗದು ದೋಚಿದ ಖತರ್ನಾಕ್ ಕಳ್ಳರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗಣರಾಜ್ಯೋತ್ಸವದಂದು ಅಯೋಧ್ಯೆಯಲ್ಲಿ ಮಸೀದಿಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಲಕ್ನೋ, ಜ. 18. ಜನವರಿ 26ರ ಗಣರಾಜ್ಯೋತ್ಸವದ ಧ್ವಜಾರೋಹಣದೊಂದಿಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸುಪ್ರೀಂ ಕೋರ್ಟ್ ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಮಂಜೂರು ಮಾಡಿದ ಐದು ಎಕರೆ ಜಾಗದಲ್ಲಿ ಐತಿಹಾಸಿಕ ಭವ್ಯ ಮಸೀದಿ ನಿರ್ಮಾಣವನ್ನು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಆರಂಭಿಸಲಿದೆ.

ಗಣರಾಜ್ಯೋತ್ಸವದಂದು ಅಯೋಧ್ಯೆಯಲ್ಲಿ ಮಸೀದಿಗೆ ಶಂಕುಸ್ಥಾಪನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿಎಂ ಗೆ ಪತ್ರ ಬರೆದು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಛೇರಿಯಲ್ಲೇ ನೇಣಿಗೆ ಶರಣು…!

(ನ್ಯೂಸ್ ಕಡಬ) newskadaba.com ಗಂಗಾವತಿ, ಜ. 18. ಅರಣ್ಯ ಇಲಾಖೆಯ ಕ್ಷೇಮ ನಿಧಿ ಯೋಜನೆಯಲ್ಲಿ ಕೆಲಸ ಮಾಡುವ ನೌಕರರನ್ನು ಖಯಂಗೊಳಿಸುವಂತೆ ನಿವೃತ್ತಿ ಅಂಚಿನಲ್ಲಿದ್ದ ಅರಣ್ಯ ಇಲಾಖೆಯ ನೌಕರನೋರ್ವ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಟಿ. ಮಲ್ಲಿಕಾರ್ಜುನ(59) ಎಂದು ಗುರುತಿಸಲಾಗಿದೆ. ಕಳೆದ ಮೂವತ್ತೇಳು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ನೌಕರನಾಗಿದ್ದ ಇವರು ಇದೇ ಬರುವ ಮೇ ತಿಂಗಳಲ್ಲಿ ನಿವೃತ್ತಿ ಹೊಂದುವವರಿದ್ದರು. ಅರಣ್ಯ ಇಲಾಖೆಯ ನೌಕರರಿಗೆ ಕೆಲಸ ಖಾಯಂ ಮಾಡಿಲ್ಲ, ಕೆಲವರು ಇದೇ

ಸಿಎಂ ಗೆ ಪತ್ರ ಬರೆದು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಛೇರಿಯಲ್ಲೇ ನೇಣಿಗೆ ಶರಣು…! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಫೋನ್ ಕರೆಗೆ ಮೋಸ ಹೋದ ಹೆಡ್ ಕಾನ್ಸ್‌ಟೇಬಲ್..! ➤ ಹೌಸ್ ಲೋನ್ ನಂಬಿ 34 ಲಕ್ಷ ಖೋತಾ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಜ‌ 18. ದೊಡ್ಡ ಮೊತ್ತದ ಲೋನ್ ಕೊಡಿಸುವುದಾಗಿ ನಂಬಿಸಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನು ವಂಚಿಸಿ 34 ಲಕ್ಷ ರೂ ದೋಚಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಅಗಿದ್ದ ಆರೋಗ್ಯಪ್ಪ(43) ಎಂಬವರು ಮೋಸ ಹೋದವರು. ಇವರಿಗೆ ಸಂಜಯ್ ಶರ್ಮಾ ಎಂಬಾತ ರಾಜಸ್ಥಾನ ಕಂಪನಿಯಿಂದ ಕವಿತಾದೇವಿ ಎಂದು ಹೇಳಿಕೊಂಡು ಕರೆಮಾಡಿ ನಿಮಗೆ ಐವತ್ತು ಲಕ್ಷ ರೂ. ಹೌಸಿಂಗ್ ಸಾಲದ ಆಫರ್ ಇದೆ. ವರ್ಷಕ್ಕೆ ಎರಡರಷ್ಟು

ಫೋನ್ ಕರೆಗೆ ಮೋಸ ಹೋದ ಹೆಡ್ ಕಾನ್ಸ್‌ಟೇಬಲ್..! ➤ ಹೌಸ್ ಲೋನ್ ನಂಬಿ 34 ಲಕ್ಷ ಖೋತಾ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಮತ್ತೆ ಸದ್ದುಮಾಡಿದ ಹನಿಟ್ರ್ಯಾಪ್..! ➤ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನೋರ್ವನಿಗೆ ಮಹಿಳೆಯರಿಬ್ಬರು ಹನಿ ಟ್ರ್ಯಾಪ್ ಮಾಡಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂಬಳೆಯ ಯುವಕನೋರ್ವನಿಗೆ ಸಾಮಾಜಿಕ ಜಾಲತಾಣದಲ್ಲಿ ಕೃಷ್ಣಾಪುರ ಮೂಲದ ಇಬ್ಬರು ಮಹಿಳೆಯರ ಪರಿಚಯವಾಗಿದ್ದು, ಬಳಿಕ ಯುವಕನೊಂದಿಗೆ ಸಲುಗೆಯಿಂದ ವರ್ತಿಸಿ ಭೇಟಿಯಾಗಲೆಂದು ಕೃಪ್ಣಾಪುರಕ್ಕೆ ಬರುವಂತೆ ಹೇಳಿದ್ದರು. ಇಬ್ಬರು ಮಹಿಳೆಯರ ಜೊತೆ ಮತ್ತಿಬ್ಬರು ಯುವಕರಿದ್ದು, ಈತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ, ಆತನ ಫೋಟೋ

ಮಂಗಳೂರು: ಮತ್ತೆ ಸದ್ದುಮಾಡಿದ ಹನಿಟ್ರ್ಯಾಪ್..! ➤ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top