ಬ್ರೇಕಿಂಗ್ ನ್ಯೂಸ್

ಬಹಿರ್ದೆಸೆಗೆಂದು ಹೋದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ➤ ತೀವ್ರ ಅಸ್ವಸ್ಥ

(ನ್ಯೂಸ್ ಕಡಬ) newskadaba.com ಹನೂರು, ಜ. 18. ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ನಡೆದಿದೆ. ದಾಳಿಗೊಳಗಾದ ವ್ಯಕ್ತಿಯನ್ನು ಚನ್ನಶೆಟ್ಟಿ(60) ಎಂದು ಹೇಳಲಾಗಿದೆ. ಇವರು ಇಂದು ಬೆಳಗ್ಗೆ ಬಹಿರ್ದೆಸೆಗೆಂದು ತೆರಳಿದ ವೇಳೆ ಹಜ್ಜೇನು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹಿರ್ದೆಸೆಗೆಂದು ಹೋದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ➤ ತೀವ್ರ ಅಸ್ವಸ್ಥ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ಫೇಸ್ ಬುಕ್ ಪ್ರೇಮ ಪ್ರಕರಣ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 18. ಫೇಸ್ ಬುಕ್ ಜಾಲತಾಣದ ಮೂಲಕ ಹುಟ್ಟಿಕೊಂಡ ಪರಿಚಯವು ಪ್ರೇಮಕ್ಕೆ ತಿರುಗಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ದೈಹಿಕ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ತುಮಕೂರಿನ ಕುಣಿಗಲ್ ಯುವತಿಯೋರ್ವಳು ಇದೀಗ ಠಾಣೆಯ ಮೆಟ್ಟಿಲೇರಿದ್ದಾಳೆ. ತಾನು ಒಂದು ತಿಂಗಳ ಗರ್ಭವತಿಯಾಗಿದ್ದು, ಬೆಂಗಳೂರಿನ ಕ್ಲಿನಿಕ್ ವೊಂದರಲ್ಲಿ ಗರ್ಭಪಾತ ಮಾಡಿಸಿರುವುದಾಗಿ ಸುಬ್ರಹ್ಮಣ್ಯದ ಕಲ್ಲಪಣೆ ಎಂಬಲ್ಲಿನ ರಕ್ಷಿತ್ ಕುಮಾರ್ ಎಂಬ ಯುವಕನ ವಿರುದ್ದ ದೂರು ದಾಖಲಿಸಿದ್ದಾಳೆ. ಯುವಕ ಮತ್ತು ಯುವತಿಗೆ ಪೇಸ್ ಬುಕ್ ನಲ್ಲಿ

ಸುಬ್ರಹ್ಮಣ್ಯ: ಫೇಸ್ ಬುಕ್ ಪ್ರೇಮ ಪ್ರಕರಣ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಹಲವು ಪ್ರಕರಣಗಳ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.18. ಹಲವು ಪ್ರಕರಣಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕುಂಬಳೆ ಕೊಯಿಪಾಡಿ ಕಡಪ್ಪುರದ ಆಸಿಫ್(28) ಎಂದು ಗುರುತಿಸಲಾಗಿದೆ. ಕುಂಬಳೆಯ ವ್ಯಕ್ತಿಯೋರ್ವನಿಂದ ಹತ್ತು ಸಾವಿರ ರೂ. ಹಣ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈತ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದನು. ಈತನು ಊರಿಗೆ ಬಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯ ಮೇರೆಗೆ ಆತನನ್ನು ಬಂಧಿಸಲಾಗಿದೆ.

ಕಾಸರಗೋಡು: ಹಲವು ಪ್ರಕರಣಗಳ ಆರೋಪಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸ್ ದಾಳಿ ➤ ನೆಕ್ಕಿಲಾಡಿಯ ಓರ್ವನ ಸಹಿತ ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.17. ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು ಐವರು ಮಹಿಳೆಯರು ಹಾಗೂ ಮೂವರು ಪುರುಷರನ್ನು ಬಂಧಿಸಿದ್ದಾರೆ. ಭಾನುವಾರದಂದು ಬಿ.ಸಿ.ರೋಡ್ ನ ಭಾರತ್ ಕಾಂಪ್ಲೆಕ್ಸ್ ನ ತಳ ಭಾಗದಲ್ಲಿರುವ ಕೊಠಡಿಯಲ್ಲಿ ವೈಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ತಂಡದೊಂದಿಗೆ ದಾಳಿ ನಡೆಸಿದ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ 5 ಜನ ಮಹಿಳೆಯರು

ಬಂಟ್ವಾಳ: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸ್ ದಾಳಿ ➤ ನೆಕ್ಕಿಲಾಡಿಯ ಓರ್ವನ ಸಹಿತ ಎಂಟು ಮಂದಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಅಕ್ರಮ ಮದ್ಯ ಹಾಗೂ ತಂಬಾಕು ಸಾಗಾಟ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 17. ಕೆಎಸ್.ಆರ್‌.ಟಿಸಿ ಬಸ್ ಮೂಲಕ ಅಕ್ರಮ ಮದ್ಯ ಮತ್ತು ತಂಬಾಕು ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿಗಳು ವಶಕ್ಕೆ ಪಡೆದಿದ್ದಾರೆ.   ಬಂಧಿತ ಆರೋಪಿಯನ್ನು ಬಂಗಾಳ ಮೂಲದ ಫರೀದ್ ( 25) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆ.ಎಸ್.ಆರ್‌.ಟಿಸಿ ಬಸ್ಸಿನಲ್ಲಿ ಸಾಗಿಸುತ್ತಿದ್ದ 50 ಕಿಲೋ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿರುವ ಅಬಕಾರಿ ಸಿಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಕಾಸರಗೋಡು: ಅಕ್ರಮ ಮದ್ಯ ಹಾಗೂ ತಂಬಾಕು ಸಾಗಾಟ ➤ ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಲೆಕ್ಟ್ರಿಕ್ ಕೇಬಲ್ ತಾಗಿ ಬೆಂಕಿಗಾಹುತಿಯಾದ ಬಸ್..! ➤ 6 ಮಂದಿ ಸಹೀವ ದಹನ

(ನ್ಯೂಸ್ ಕಡಬ) newskadaba.com ಜೈಪುರ, ಜ. 17. ಬಸ್ ಗೆ ಇಲೆಕ್ಟ್ರಿಕಲ್ ಕೇಬಲ್ ತಾಗಿದ ಪರಿಣಾಮ ಬಸ್ ಬೆಂಕಿಗಾಹುತಿಯಾಗಿ ಆರು ಮಂದಿ ಸಜೀವ ದಹನವಾದ ಘಟನೆ ರಾಜಸ್ಥಾನದ ಜಾಲೋರ್ ಎಂಬಲ್ಲಿ ನಡೆದಿದೆ. ಖಾಸಗಿ ಬಸ್ ಮಂಡೋರ್ ನಿಂದ ಬ್ಯಾವರ್ ಎಂಬಲ್ಲಿಗೆ ಹೋಗುತಿದ್ದ ವೇಳೆ ಮಹೇಶ್ ಪುರ ಗ್ರಾಮದ ಬಳಿ ಬಸ್ ನಿಲುಗಡೆ ಮಾಡಲಾಗಿತ್ತು. ಈ ಸಂದರ್ಭ ಬಸ್ ನ ಮೇಲ್ಭಾಗ ಎಲೆಕ್ಟ್ರಿಕ್ ಕೇಬಲ್ ಗೆ ತಾಗಿತ್ತು, ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ. ಈ ಕೇಬಲ್ ನಲ್ಲಿ ವಿದ್ಯುತ್

ಇಲೆಕ್ಟ್ರಿಕ್ ಕೇಬಲ್ ತಾಗಿ ಬೆಂಕಿಗಾಹುತಿಯಾದ ಬಸ್..! ➤ 6 ಮಂದಿ ಸಹೀವ ದಹನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಲಾರಿ ಹಾಗೂ ಸಿಟಿ ಬಸ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 17. ಸಿಟಿ ಬಸ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬಸ್‌ ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಇಂದು ಬೆಳ್ಳಂಬೆಳಗ್ಗೆ ಕಂಕನಾಡಿ ಜಂಕ್ಷನ್ ನಲ್ಲಿ ನಡೆದಿದೆ. 15 ನಂಬರಿನ ಬಸ್ ಕಂಕನಾಡಿಯಿಂದ ಮಂಗಳಾದೇವಿ ಕಡೆಗೆ ಹೋಗುತ್ತಿದ್ದು, ಕಂಕನಾಡಿ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗುವಾಗ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದ ಲಾರಿಯು ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಸ್ವಲ್ಪ ಸಮಯ ಸಂಚಾರ ಅಡಚಣೆ ಉಂಟಾಗಿತ್ತು. ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ

ಮಂಗಳೂರು: ಲಾರಿ ಹಾಗೂ ಸಿಟಿ ಬಸ್ ನಡುವೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು- ತಿರುವನಂತಪುರಂ ರೈಲಿನಲ್ಲಿ ಬೆಂಕಿ ಅವಘಡ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.17. ಮಂಗಳೂರು – ತಿರುವನಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಢ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯು ಪಾರ್ಸೆಲ್ ವಿಭಾಗದಲ್ಲಾಗಿದ್ದು, ಹೊಗೆಯನ್ನು ಗಮನಿಸಿದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಹತ್ತಿಕೊಂಡ ಭಾಗವನ್ನು ಬೇರ್ಪಡಿಸಲು ಸಾಧ್ಯವಾದುದರಿಂದ ಇತರ ಕಡೆಗಳಿಗೆ ಬೆಂಕಿ ಹರಡದಂತೆ ತಡೆಗಟ್ಟಲಾಯಿತು.

ಮಂಗಳೂರು- ತಿರುವನಂತಪುರಂ ರೈಲಿನಲ್ಲಿ ಬೆಂಕಿ ಅವಘಡ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೆಇಬಿ ನೌಕರನ ಗುಂಡಿಟ್ಟು ಹತ್ಯೆ ➤ ಸ್ಥಳದಲ್ಲೇ ಪಾರ್ಟಿ ಮಾಡಿದ ಹಂತಕರು

(ನ್ಯೂಸ್ ಕಡಬ) newskadaba.com ಹಾಸನ, ಜ. 17. ಕೆಇಬಿ ನೌಕರನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಹಾಸನದ ಹೂವಿನಹಳ್ಳಿ ಕಾವಲು ಬಳಿ ನಡೆದಿದೆ. ಮೃತರನ್ನು ಸಂತೋಷ್(36) ಎಂದು ಗುರುತಿಸಲಾಗಿದೆ. ಇವರ ಮೃತದೇಹವು ಜಮೀನೊಂದರಲ್ಲಿ ಪತ್ತೆಯಾಗಿದ್ದು, ಈ ಸ್ಥಳದಲ್ಲಿ ಮದ್ಯದ ಬಾಟಲಿ ಹಾಗೂ ಊಟದ ಪ್ಯಾಕೆಟ್ ಗಳು ಪತ್ತೆಯಾಗಿದೆ. ಕೊಲೆಗೂ ಮೊದಲು ಹಂತಕರು ಈ ಪ್ರದೇಶದಲ್ಲಿ ಪಾರ್ಟಿ ಮಾಡಿರಬಹುದು ಅಥವಾ ಸಂತೋಷ್ ಜೊತೆಗೆ ಹಂತಕರು ಪಾರ್ಟಿ ನಡೆಸಿ ಆ ಬಳಿಕ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ

ಕೆಇಬಿ ನೌಕರನ ಗುಂಡಿಟ್ಟು ಹತ್ಯೆ ➤ ಸ್ಥಳದಲ್ಲೇ ಪಾರ್ಟಿ ಮಾಡಿದ ಹಂತಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಅಕ್ರಮ ಮದ್ಯ ಸಾಗಾಟ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 17. ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಟೊಯೊಟಾ ಇಟಿಯೋಸ್ ಕಾರಿನಲ್ಲಿದ್ದ 50 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಮೊಡಂಕಾಪಿನ ಸಂದೀಪ್ ಎಂದು ಗುರುತಿಸಲಾಗಿದೆ. ಆರೋಪಿಯ ಬಂಧನದ ಬಳಿಕ ಪೊಲೀಸರು ಆರೋಪಿಗೆ ಸಂಬಂಧಿಸಿದ ಕಟ್ಟಡಕ್ಕೆ ದಾಳಿ ನಡೆಸಿದ್ದು, 107 ಲೀಟರ್ ಮದ್ಯ ಮತ್ತು 34 ಲೀಟರ್ ಬಿಯರ್ ಹಾಗೂ ಆತನಲ್ಲಿದ್ದ ಇಟಿಯೋಸ್ ಕಾರು ಮತ್ತು ಅಶೋಕ್

ಬಂಟ್ವಾಳ: ಅಕ್ರಮ ಮದ್ಯ ಸಾಗಾಟ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top