ಮಕ್ಕಳಿಗೆ ಕೀಟನಾಶಕ ಕುಡಿಸಿ ಆತ್ಮಹತ್ಯೆಗೆ ಶರಣಾದ ದಂಪತಿ..!
(ನ್ಯೂಸ್ ಕಡಬ) newskadaba.com ಬೆಳಗಾವಿ, ಜ. 19. ಇಬ್ಬರು ಮಕ್ಕಳಿಗೆ ಕೀಟನಾಶಕ ಕುಡಿಸಿದ ದಂಪತಿಗಳಿಬ್ಬರು ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮದುರ್ಗ ಎಂಬಲ್ಲಿ ನಡೆದಿದೆ. ಮೃತರನ್ನು ಪ್ರವೀಣ್ ಶೆಟ್ಟರ್, ಪತ್ನಿ ರಾಜೇಶ್ವರಿ ಹಾಗೂ ಮಕ್ಕಳಾದ ಅಮೃತ ಮತ್ತು ಅದ್ವಿತ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಕ್ಕಳಿಗೆ ಕೀಟನಾಶಕ ಕುಡಿಸಿ ಆತ್ಮಹತ್ಯೆಗೆ ಶರಣಾದ ದಂಪತಿ..! Read More »
ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್









